ನಾಳೆ ಹೆಚ್.ಡಿ ಕುಮಾರಸ್ವಾಮಿ ಆಗಮನ

ರಾಯಚೂರು, ಏ.೩೦- ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಶಾಸಕ ಶಿವರಾಜ ಪಾಟೀಲ್ ಅವರು ನಗರದಲ್ಲಿ ಆರು ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಿಸಿದ ರಸ್ತೆಗಳು ಒಂದೇ ಮಳೆಗೆ ಕಿತ್ತಿ ಹೋಗುವುದರ ಮೂಲಕ ಶಿವರಾಜ ಪಾಟೀಲ ಅವರ ಕಳೆಪೆ ಕಾಮಗಾರಿ ಬಟಾ ಬಯಲು ಆಗಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ವಿರುಪಾಕ್ಷಿ ಅವರು ಆರೋಪಿಸಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ನಗರದಲ್ಲಿ ಕಳೆದ ಮೂರು ದಿನಗಳಿಂದ ಸತತವಾಗಿ ಸುರಿದ ಭಾರಿ ಮಳೆಗೆ ನಗರದ ಕೆಲವು ರಸ್ತೆಗಳಿಗೆ ಹೆಚ್ಚು ಹಾನಿಯಾಗಿವೆ. ಡಾಂಬರೀಕರಣ ರಸ್ತೆ, ಸಿಸಿ ರಸ್ತೆ ಹಾಗೂ ಚರಂಡಿಗಳು ಸಂಪೂರ್ಣ ಹದಗಟ್ಟಿವೆ
ಎಂದು ದೂರಿದರು. ಶಾಸಕ ಶಿವರಾಜ ಪಾಟೀಲ್ ಅವರು ಆರು ಸಾವಿರ ಕೋಟಿ ತರುವುದರ ಮೂಲಕ ನಗರ ಅಭಿವೃದ್ಧಿಗೆ ಶ್ರಮಿಸಿದ್ದೇನೆ ಎಂದು ಹೇಳಿತ್ತಿರುವುದು ಶೋಚನೀಯ,
ಚುನಾವಣೆ ಘೋಷಣೆ ಮುಂಚಿತವಾಗಿ ನಗರದ ಪ್ರಮುಖ ರಸ್ತೆಗಳಿಗೆ ಶಾಸಕ ಶಿವರಾಜ್ ಪಾಟೀಲ್ ಅವರು ಕರಿ ಬಣ್ಣ ಮತ್ತು ಬೂದಿಬಣ್ಣ ಬಡಿದಿರುವುದು ಒಂದೇ ಮಳೆಗೆ ಕಿತ್ತು ಹೋಗುವುದರ ಮೂಲಕ ರಸ್ತೆಗಳು ಸಂಪೂರ್ಣ ಹಾಳಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮಳೆ ಹಾನಿ ಪರಿಶೀಲನೆ ಸಂದರ್ಭದಲ್ಲಿ ಶಿವರಾಜ್ ಪಾಟೀಲ್ ಅವರ ಕಳಪೆ ಕಾಮಗಾರಿ ಬಟ ಬಯಲು ಆಗಿದೆ ಎಂದರು.
ನಗರದ ಮುಖ್ಯ ರಸ್ತೆ ಮೆಥಡಿಸ್ಟ್ ಶಾಲೆಯಿಂದ ಹೊಸರಿನ ನೀರಿನ ಟ್ಯಾಂಕ್ ವರೆಗೆ ಮಾಡಿದ ಸಿಸಿ ರಸ್ತೆ ಸಂಪೂರ್ಣ ಹಾಳಾಗಿವೆ ಈ ರಸ್ತೆ ಪ್ರಮುಖ ಉದಾಹರಣೆ. ನಗರದಲ್ಲಿ ದೊಡ್ಡ ಮಟ್ಟದ ಕಳಪೆ ಕಾಮಗಾರಿ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೇ.೧ರಂದು ಜೆಡಿಎಸ್ ಪಕ್ಷದ ವರಿಷ್ಟ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರು ರಾಯಚೂರು ನಗರಕ್ಕೆ ಆಗಮಿಸಲಿದ್ದಾರೆ.
ಮೇ.೧ ರಂದು ದೇವದುರ್ಗದಲ್ಲಿ ಪ್ರಚಾರ ಕಾರ್ಯ ನಡೆಯಲಿದೆ. ಸಂಜೆ ೬ ಗಂಟೆಗೆ ರಾಯಚೂರು ನಗರದ ವಾಲಕಟ್ ಮೈದಾನದಲ್ಲಿ ರಾಜಕೀಯ ಬಹಿರಂಗ ಸಭೆ ಆಯೋಜಿಸಲಾಗಿದೆ ಎಂದರು. ಸಭೆಯ ನಂತರ ನಗರದಲ್ಲಿ ವಾಸ್ತವ ಹೂಡಲಿದ್ದಾರೆ.
ಮೇ.೨ ರಂದು ಮಾನ್ವಿ, ಲಿಂಗಸೂಗೂರ ಮತ್ತು ಸಿಂಧನೂರಿಗೆ ಪ್ರಚಾರ ಕಾರ್ಯಕ್ಕೆ ತೆರಳಲಿದ್ದರೆ ಎಂದರು.
ಈ ಸಂದರ್ಭದಲ್ಲಿ ವಿನಯ್ ಕುಮಾರು, ಕೆ. ಸಣ್ಣ ನರಸಿಂಹ ನಾಯಕ, ಯಲ್ಲರೆಡ್ಡಿ, ಶಿವರಾಜ ಸೇರಿದಂತೆ ಉಪಸ್ಥಿತರಿದ್ದರು.