ನಾಳೆ ಹಿರಿಯ ಛಾಯಾಗ್ರಾಹಕರಿಗೆ- ಸಾಧಕರಿಗೆ ಸನ್ಮಾನ

ದಾವಣಗೆರೆ.ಆ.೧೮: ದಾವಣಗೆರೆ ತಾಲ್ಲೂಕು ಫೋಟೋ ಮತ್ತು ವೀಡಿಯೋಗ್ರಾಫರ್ಸ್ ಸಂಘದ ವತಿಯಿಂದ ೧೮೪ ನೇ ವಿಶ್ವ ಛಾಯಾಗ್ರಹಣ ದಿನಾಚರಣೆ, ಸಂಘದ ೧೧ ನೇ ವರ್ಷದ ವಾರ್ಷಿಕೋತ್ಸವ, ಹಿರಿಯ ಛಾಯಾಗ್ರಾಹಕರಿಗೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಆ. ೧೯  ರ ನಾಳೆ ಸಂಜೆ ೫ ಗಂಟೆಗೆ ರೋಟರಿ ಬಾಲಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷ ಎಂ. ಮನು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ಸಾನ್ನಿಧ್ಯವನ್ನು ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮಿಗಳು ವಹಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಚಾಲನೆ ನೀಡಲಿದ್ದಾರೆ.  ವಿಶೇಷ ಆಹ್ವಾನಿತರಾಗಿ ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಆಗಮಿಸಲಿದ್ದು, ಎಂ. ಮನು ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.ಮುಖ್ಯ ಅತಿಥಿಗಳಾಗಿ ಎಚ್.ಬಿ. ಮಂಜುನಾಥ್, ಆರ್. ಪ್ರತಿಭಾ, ಜಿ. ಮಂಜುನಾಥ್, ಎಸ್.ಎಲ್. ಆನಂದಪ್ಪ, ಖಾಜಾ ಪೀರ್, ಸುರಭಿ ಶಿವಮೂರ್ತಿ, ಎಸ್. ರಾಜಶೇಖರ್ ಕೊಂಡಜ್ಜಿ, ಮಲ್ಲೇಶ್ ಹೆಚ್. ಪಟೇಲ್  ಆಗಮಿಸಲಿದ್ದಾರೆ ಎಂದರು.ವಿಶೇಷ ಬಿರುದುಗಳನ್ನು ಎಚ್.ಬಿ. ಮಂಜುನಾಥ್, ಆರ್. ಪ್ರತಿಭಾ, ಖಾಜಾ ಪೀರ್, ಎಂ. ಮನು, ಎಸ್. ರಾಜಶೇಖರ್ ಕೊಂಡಜ್ಜಿ ಅವರಿಗೆ ಪ್ರದಾನ ಮಾಡಲಾಗುವುದು ಎಂದರು.ಹಿರಿಯ ಛಾಯಾಗ್ರಾಹಕರಾದ ಕೆ. ಶಿವರಾಮ ಕಾರಂತ್, ವಿ. ಪ್ರಸನ್ನ ಕುಮಾರ್, ಎ.ಆರ್.  ವೀರಭದ್ರಪ್ಪ, ಕೆ. ರಾಜು ಅವರಿಗೆ ಸನ್ಮಾನಿಸಿ ಗೌರವಿಸಲಾಗುವುದು. ಅಲ್ಲದೆ, ಛಾಯಾಗ್ರಹಣ ಕ್ಷೇತ್ರದ ವಿವಿಧ ವಿಭಾಗಗಳಲ್ಲಿ ದಿ ಬೆಸ್ಟ್ ಪ್ರಶಸ್ತಿಯನ್ನು ೧೭ ಪ್ರತಿಭಾನ್ವಿತರಿಗೆ ಪ್ರದಾನ ಮಾಡಲಾಗುವುದು  ಎಂದರು.ಸುದ್ದಿಗೋಷ್ಠಿಯಲ್ಲಿ, ಎಸ್. ಚಂದ್ರಶೇಖರ್, ಕೆ. ಮಾಲತೇಶ್ ಜಾಧವ್, ಮಲ್ಲೇಶ್ ಹೆಚ್. ಪಟೇಲ್, ಎ.ಎಸ್. ಗಣೇಶ್, ಕೆ. ದೇವೇಂದ್ರಪ್ಪ,  ಎಚ್.ಎಫ್. ಸಂಜಯ್. ಸಂತೋಷ್ ದೊಡ್ಮನಿ ಉಪಸ್ಥಿತರಿದ್ದರು.