ನಾಳೆ ಹರಪನಹಳ್ಳಿಗೆ ವಿಜಯ ಸಂಕಲ್ಪಯಾತ್ರೆ


‌ಸಂಜೆವಾಣಿ ವಾರ್ತೆ
ಹರಪನಹಳ್ಳಿ, ಮಾ.15: ರಾಜ್ಯದ ನಾಲ್ಕು ದಿಕ್ಕಿನಿಂದ ಹೊರಟಿರುವ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಪ ಮಾ. 16ರಂದು ಪಟ್ಟಣಕ್ಕೆ ಆಗಮಿಸಲಿದೆ.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಚಂದ್ರಶೇಖರ್ ಪೂಜಾರ್ ಅವರು, ಅಂದೇ ಸಂಜೆ ತಾಲ್ಲೂಕು ಕ್ರೀಡಾಂಗಣದಲ್ಲಿ ಬೃಹತ್ ಸಮಾವೇಶ ನಡೆಯಲಿದೆ ಎಂದರು.
ಹೂವಿನಹಡಗಲಿಯಿಂದ ಸಂಜೆ 5ಕ್ಕೆ ತಾಲ್ಲೂಕಿನ ಕಾನಹಳ್ಳಿ ಗ್ರಾಮದ ಮೂಲಕ ತಾಲೂಕನ್ನು ಪ್ರವೇಶ ಮಾಡಲಿದ್ದು, ವಿಜಯ ಸಂಕಲ್ಪಯಾತ್ರೆಯನ್ನು ಅದ್ಧೂರಿಯಾಗಿ ಸ್ವಾಗತಿಸಲಾಗುವುದು ಎಂದರು.
ಅಂದು ಸಂಜೆ 5.30ಕ್ಕೆ ನಡೆಯುವ ಬೃಹತ್ ಸಮಾವೇಶದಲ್ಲಿ ಅಮರನಾಥ್ ಪಾಟೀಲ್, ಸುನೀಲ್ ಮಲ್ಲಾಪುರ, ಸಿದ್ದೇಶ ಯಾದವರ ನೇತೃತ್ವದಲ್ಲಿ ಜರುಗಲಿದೆ. ಸಮಾವೇಶಕ್ಕೆ ತಾಲೂಕಿನಿಂದ 25 ಸಾವಿರ ಜನರು ಸೇರುವ ನಿರೀಕ್ಷೆ ಇದೆ ಎಂದರು.
ಶಾಸಕ ಜಿ.ಕರುಣಾಕರರೆಡ್ಡಿ ಮಾತನಾಡಿ ಹರಪನಹಳ್ಳಿಗೆ ಆಗಮಿಸುತ್ತಿರುವ ವಿಜಯ ಸಂಕಲ್ಪ ಯಾತ್ರೆಗೆ ಪಕ್ಷದ ತಾಲೂಕಿನ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಯಶಸ್ವಿಗೊಳಿಸಬೇಕು ಎಂದರು
ರಾಜ್ಯ ಬಿಜೆಪಿ ಸಹಕಾರಿ ಪ್ರಕೋಷ್ಟ ಸಂಚಾಲಕ ಜಿ. ನಂಜನಗೌಡ್ರು ಮಾತನಾಡಿ, ರಾಜ್ಯದ 224 ಕ್ಷೇತ್ರಗಳಲ್ಲಿ ಬಿಜೆಪಿ ಸದೃಢವಾಗಿದೆ ಎಂದ ಅವರು, ಕಾಂಗ್ರೆಸ್‍ನ ದುರಾಡಳಿತಕ್ಕೆ ಜನ ಬೇಸತ್ತಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಹರಪನಹಳ್ಳಿ ಸೇರಿದಂತೆ 150ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದರು.
ಬಿಜೆಪಿ ತಾಲ್ಲೂಕು ಮಂಡಲ ಅಧ್ಯಕ್ಷ ಸತ್ತೂರು ಹಾಲೇಶ್, ಪ್ರಧಾನ ಕಾರ್ಯದರ್ಶಿ ಉದಯಕುಮಾರ್, ಪುರಸಭೆ ಸದಸ್ಯರಾದ ಎಂ.ಕೆ. ಜಾವೀದ್, ಕಿರಣ್ ಶಾನ್ ಬಾಗ್, ಮುಖಂಡರಾದ ವಿನಾಯಕ ಭಜಂತ್ರಿ, ಮುತ್ತಿಗಿ ವಾಗೀಶ, ಎಂ.ಪಿ. ನಾಯ್ಕ, ಮಂಜ್ಯ ನಾಯ್ಕ,ಬಿ.ವೈ.ವೆಂಕಟೇಶನಾಯ್ಕ್, ಮಲ್ಲಿಕಾರ್ಜುನ ಮೈದೂರು, ಶಂಕರ, ವಕೀಲ ಪ್ರಕಾಶ, ಲಿಂಗಾನಂದ, ಸುರೇಶ, ಓಂಕಾರಗೌಡ, ವಿಜಯಪ್ಪ, ರೇಖಾ ಇತರರು ಇದ್ದರು.