ನಾಳೆ ಸ್ವಯಂಘೋಷಿತ ನಂಜನಗೂಡು ಬಂದ್

ಸಂಜೆವಾಣಿ ವಾರ್ತೆ
ನಂಜನಗೂಡು: ಜ.03:- ನಮ್ಮೆಲ್ಲರ ಆರಾಧ್ಯ ದೈವ ಶ್ರೀ ಶ್ರೀಕಂಠೇಶ್ವರ ದೇವಾಲಯದ ಉತ್ಸವ ಮೂರ್ತಿಗೆ ಎಂಜಲು ನೀರು ಎರಚಿ ಅಪಮಾನ ಗೊಳಿಸಿದ ಕಿಡಿಗೇಡಿಗಳನ್ನು ಬಂಧಿಸಬೇಕು ಘಟನೆ ನಡೆದು ಮೂರು ನಾಲ್ಕು ದಿನ ಕಳೆದರೂ ಕೂಡ ಅವರನ್ನು ಬಂದಿಸದೆ ಇರುವುದನ್ನು ಖಂಡಿಸಿ ನಾಳೆ ಗುರುವಾರ ಸ್ವಯಂ ಪ್ರೇರಿತವಾಗಿ ಮತ್ತು ಶಾಂತ ರೀತಿಯಲ್ಲಿ ಪಕ್ಷಾತೀತವಾಗಿ ನಂಜನಗೂಡು ಬಂದ್ ಮಾಡಲಾಗುತ್ತದೆ ಎಂದು ಶ್ರೀಕಂಠೇಶ್ವರ ಭಕ್ತ ಮಂಡಳಿ ಮುಖ್ಯಸ್ಥರು ಮತ್ತು ಯುವ ಬ್ರಿಗೇಡ್ ಮುಖ್ಯಸ್ಥ ಗಿರೀಶ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಶ್ರೀಕಂಠೇಶ್ವರ ದೇವಾಲಯ ಭಕ್ತ ಮಂಡಳಿ ಅವರು ಕರೆದಿರುವ ನಂಜನಗೂಡು ಬಂದ್ ಗೆ ಬೆಂಬಲ ರಸ್ತೆ ಬದಿ ವ್ಯಾಪಾರಿಗಳ ಸಂಘ ವರ್ತಕರ ಸಂಘ ಆಟೋ ಚಾಲಕರ ಸಂಘ ಈ ರೀತಿ ಅನೇಕ ಸಂಘಗಳು ಬೆಂಬಲ ಸೂಚಿಸಿದ್ದಾರೆ ಎಂದು ಗಿರೀಶ್ ತಿಳಿಸಿದರು.
ಶ್ರೀ ಶ್ರೀಕಂಠೇಶ್ವರ ದೇವಾಲಯ ದರ್ಶನ ಪಡೆಯಲು ಲಕ್ಷಾಂತರ ಜನ ಭಕ್ತರು ಆಗಮಿಸಿ ಪುಣ್ಯಕ್ಷೇತ್ರವೆನಿಸಿಕೊಂಡಿದೆ. ಆ ದಿನ ನಡೆದ ಧಾರ್ಮಿಕ ಕಾರ್ಯವು ನೆನ್ನೆ ಮೊನ್ನೆಯದಲ್ಲ ನೂರಾರು ವರ್ಷಗಳಿಂದ ಧಾರ್ಮಿಕ ದತ್ತಿಯವತಿಯಿಂದನಡೆಯುತ್ತಿರುವಕಾರ್ಯವಾಗಿದೆ.
ಆದರೆ ಅಂಧಕಾಸುರನ ವಧೆಯ ಕಾರ್ಯಕ್ರಮದ ಸಮಯದಲ್ಲಿ ಕೆಲವರು ಸಂಘಟನೆಯ ಹೆಸರಿನಲ್ಲಿ ನಡೆಸಿರುವ ಘಟನೆ ಉದ್ದೇಶ ಪೂರಕವಾಗಿದೆ ಇದರಿಂದ ಲಕ್ಷಾಂತರ ಭಕ್ತರ ಮನಸ್ಸಿಗೆ ನೋವನ್ನುಂಟು ಮಾಡಿ ಆಕ್ರೋಶಕ್ಕೆ ಕಾರಣವಾಗಿದೆ.
ನೂರಾರು ಜನ ಸೇರಿ ಪೂಜಾ ಕಾರ್ಯ ಆಚರಿಸುವ ಸಮಯದಲ್ಲಿ ಉದ್ದೇಶಪೂರ್ವಕವಾಗಿ ಉತ್ಸವ ಮೂರ್ತಿಗೆ ಎಂಜಲು ನೀರು ಎರಚಿರುವುದು ಅಕ್ಷಮ್ಯ ಅಪರಾಧ ಈ ರೀತಿ ಪೂಜಾ ಕಾರ್ಯಗಳು ದಕ್ಷಿಣ ಭಾಗದಲ್ಲಿ ಎಲ್ಲಾ ಶಿವನ ದೇವಸ್ಥಾನದಲ್ಲಿ ನಡೆಯುತ್ತದೆ ಎಲ್ಲೂ ಈ ರೀತಿ ಘಟನೆ ನಡೆದಿಲ್ಲ ಆದರೆ ಇಲ್ಲಿ ನಡೆದಿದೆ. ಈ ಸಮಯದಲ್ಲಿ ತಾ. ಆಡಳಿತವಾಗಲಿ ಪೆÇಲೀಸ್ ಇಲಾಖೆಯಾಗಲಿ ಮುಂಜಾಗ್ರತ ಕ್ರಮ ವಹಿಸದಿರುವುದು ತಾ. ಆಡಳಿತದ ವೈಫಲ್ಯ. ಘಟನೆ ನಡೆದು2-3 ದಿನಗಳಾದರು ತಪ್ಪಿಸ್ತಸ್ಥರನ್ನು ಬಂಧಿಸಿ ಕಾನೂನು ಕ್ರಮಕ್ಕೆ ಒಳಪಡಿಸದೆ ಪೆÇಲೀಸ್ ಇಲಾಖೆ ವಿಳಂಬ ಮಾಡುತ್ತಿರುವುದು ಪೆÇಲೀಸ್ ಇಲಾಖೆಯ ವಿಫಲತೆ ಎದ್ದು ಕಾಣುತ್ತಿದೆ ಅನುಮಾನ ಉಂಟಾಗಿದೆ ಆರೋಪಿಗಳನ್ನು ಬಂದಿಸಬೇಕು ಎಂದು ಒತ್ತಾಯಿಸಿದರು.
ಈ ವಿಷಯಕ್ಕೆ ಸಂಬಂಧಿಸಿದಂತೆ ದೇವಸ್ಥಾನ ಮುಂಭಾಗ ಪ್ರತಿಭಟನೆ ಮಾಡುತ್ತಿರುವ ಸಂದರ್ಭದಲ್ಲಿ ಸ್ಥಳಕ್ಕೆ ಅಧಿಕಾರಿಗಳು ಬಂದು ಪ್ರತಿಭಟನೆ ಕೈ ಬಿಡಿ ಇನ್ನು ಎರಡು ದಿನದಲ್ಲಿ ಕಿಡಿಗೇಡಿಗಳನ್ನು ಕಾನೂನು ಪ್ರಕಾರ ತನಿಖೆ ನಡೆಸಿ ಬಂದಿಸುತ್ತೇವೆ ಎಂದು ಮಾತು ಕೊಟ್ಟಿದ್ದರು ಮೂರು ದಿನ ಕಳೆದರೂ ಅವರನ್ನು ಬಂಧಿಸಿಲ್ಲ ಎಂದರು ಆದ್ದರಿಂದ ಮುಂದಿನ ಕ್ರಮ ಕೈಗೊಳ್ಳಲು ಸಭೆ ಕರೆದು ನಿರ್ಣಯ ಮಾಡಲಾಯಿತು
ದೇವಸ್ಥಾನದಲ್ಲಿ ಎಲ್ಲಾ ಜಾತಿಯ ನೌಕರರು ಸೇವೆ ಮಾಡುತ್ತಿದ್ದಾರೆ ನಾವೆಲ್ಲರೂ ಅಣ್ಣ ತಮ್ಮಂದಿರ ರೀತಿ ಇದ್ದೇವೆ ಅಶಾಂತಿ ಸೃಷ್ಟಿ ಮಾಡುವ ಉದ್ದೇಶದಿಂದಲೇ ಈ ರೀತಿ ನಡೆದುಕೊಂಡಿದ್ದಾರೆ ಎಂದು ಕಿಡಿಕಾಡಿದರು ವಿನಾಕಾರಣ ಶ್ರೀಕಂಠೇಶ್ವರ ಭಕ್ತಾದಿಗಳ ಮೇಲೂ ಕೂಡ ಕೇಸು ಹಾಕಿರುವುದು ಖಂಡಿಸುತ್ತೇವೆ ಮುಜರಾಯಿ ಇಲಾಖೆ ವತಿಯಿಂದ ನಡೆಯುತ್ತಿರುವ ಈ ಕಾರ್ಯಕ್ರಮ ನಾವು ನೋಡಲು ಬಂದಿದ್ದೇವೆ ನಾವು ಭಕ್ತಾದಿಗಳು ಇಂಥ ಸಮಯದಲ್ಲಿ ಕಾರ್ಯಕ್ರಮ ನಡೆಯಬಾರದೆಂದು ಹೇಳುತ್ತಿರುವ ಸಂದರ್ಭದಲ್ಲಿ ಭಕ್ತಾದಿಗಳಾದ ನಾವು ಪ್ರಶ್ನೆ ಮಾಡಿದೆವು ಹೊರತು ಬೇರೆ ಏನು ಇಲ್ಲ ದೇವರ ಮೇಲೆ ಎಂಜಲು ನೀರು ಎರಚಿಸಿದವರು ಇವರು ಇವರ ಮೇಲೆ ಕೇಸ್ ಹಾಕಿರುವುದು ಸರಿ ಏಕೆ ನಡೆಸಬಾರದು ಎಂಬ ಪ್ರಶ್ನೆ ಕೇಳಿದ್ದಕ್ಕೂ ನಮ್ಮ ಮೇಲು ಕೇಸ್ ಹಾಕಿದ್ದಾರೆ ಇದು ಎಷ್ಟರಮಟ್ಟಿಗೆ ಸರಿ ಆದ್ದರಿಂದ ಭಕ್ತಾದಿಗಳ ಮೇಲಿರುವ ಕೇಸುಗಳನ್ನು ವಾಪಸ್ ಪಡೆಯಬೇಕು ಎಂದರು.
ಸ್ಥಳದಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿರುವ ಸಂದರ್ಭದಲ್ಲಿ ಸ್ಥಳದಲ್ಲೇ ನೂರಾರು ಪೆÇಲೀಸ್ ಅಧಿಕಾರಿಗಳು ಇದ್ದರೂ ಕೂಡ ಅವರನ್ನು ತಡೆಯದೆ ಮೂಕ ಪ್ರೇಕ್ಷಕರಾಗಿ ನಿಂತಿದ್ದರು ಶ್ರೀಕಂಠೇಶ್ವರ ಭಕ್ತಾದಿಗಳ ಮೇಲೆ ಲಾಠಿ ಚಾರ್ಜ್ ಮಾಡಿದರು ಮುಂಜಾಗ್ರತ ಕ್ರಮ ತೆಗೆದುಕೊಂಡಿದ್ದರೆ ಈ ಘಟನೆ ನಡೆಯುತ್ತಿರಲಿಲ್ಲ ಎಂದರು.
ಎನ್ ಆರ್ ಕೃಷ್ಣಪ್ಪ ಗೌಡ ಮಾತನಾಡಿ ಅಂದ ಕಾಸುರ ವಧೆ ಕಾರ್ಯಕ್ರಮ ನಡೆಯುತ್ತಿರುವ ಸಂದರ್ಭದಲ್ಲಿ ಕಿಡಿಗೇಡಿಗಳಿಂದ ಉತ್ಸವಮೂರ್ತಿಗೆ ಅಪಮಾನ ಮಾಡಿರುವುದನ್ನು ಖಂಡಿಸುತ್ತೇವೆ ಇಂಥ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು ಇದೇ ರೀತಿ ಮುಂದುವರೆದರೆ ದೇವಸ್ಥಾನಕ್ಕೆ ಬರುತ್ತಿರುವ ಭಕ್ತಾದಿಗಳು ಭಯಭೀತಿಯಿಂದ ಬರಬೇಕಾಗುತ್ತದೆ ಶ್ರೀ ಶ್ರೀಕಂಠೇಶ್ವರ ದೇವಾಲಯಕ್ಕೆ ಇತಿಹಾಸದಲ್ಲಿ ಇದೆ ಮೊದಲ ಬಾರಿಗೆ ಇಂಥ ಕಿಡಿಕೇಡಿಗಳಿಂದ ಘಟನೆ ಮಾಡಿದ್ದಾರೆ ಇವರನ್ನು ತಕ್ಷಣ ಬಂಧಿಸಬೇಕು ಪೆÇಲೀಸ್ ಇಲಾಖೆ ಕಿಡಿಗೇಡಿಗಳನ್ನು ಬಂಧಿಸಿದ್ದಾರೆ ನಂಜನಗೂಡು ಬಂದ್ ಅವಶ್ಯಕತೆ ಇರಲಿಲ್ಲ ಇಂಥ ಘಟನೆ ನಡೆದರೂ ಕೂಡ ಇವರನ್ನು ಬಂಧಿಸದೆ ಇರುವುದಕ್ಕೆ ನಂಜನಗೂಡು ಬಂದ್ ಕರೆ ನೀಡಬೇಕಾಗಿತ್ತು ಬೆಳಗ್ಗೆ 6ರಿಂದ ಸಂಜೆ 5:00 ರ ತನಕ ಪಕ್ಷಾತೀತವಾಗಿ ಎಲ್ಲರೂ ಕೂಡ ಸ್ವಯಂ ಪ್ರೇರಿತವಾಗಿ ಬಂದ್ ಮಾಡಲಾಗುತ್ತದೆ ಎಂದರು
ದೇವಸ್ಥಾನದ ಆಡಳಿತ ಮಂಡಳಿ ಕುಸಿದಿದೆ ದೇವಸ್ಥಾನದ ಜಗದೀಶ್ ಅವರನ್ನು ಸಸ್ಪೆಂಡ್ ಮಾಡಬೇಕು ಅಥವಾ ಟ್ರಾನ್ಸ್ಫರ್ ಮಾಡಬೇಕೆಂದು ಒತ್ತಾಯಿಸಿದ್ದಾರೆ ಇವರು ಸರಿಯಾದ ಮಾಹಿತಿ ನೀಡಿದ್ದರೆ ಸ್ಥಳದಲ್ಲಿ ಸೂಕ್ತ ಕ್ರಮ ತೆಗೆದುಕೊಂಡಿದ್ದರೆ ಇಂಥ ಘಟನೆಗಳು ನಡೆಯುತ್ತಿರಲಿಲ್ಲ ಇವರ ನಿರ್ಲಕ್ಷ ಈ ಘಟನೆಗೆ ಕಾರಣ ಎನ್ನಬಹುದು ಮುಂದಾದರು ನಂಜನಗೂಡು ಶಾಂತಿಗೋಡು ಇತಿಹಾಸ ಹೊಂದಿರುವ ಶ್ರೀಕಂಠೇಶ್ವರ ದೇವಾಲಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ದೇವಸ್ಥಾನದ ಆಡಳಿತ ಅಧಿಕಾರಿಗಳು ಎಚ್ಚರ ವಹಿಸಬೇಕೆಂದರು.
ಪತ್ರಿಕಾಗೋಷ್ಠಿಯಲ್ಲಿ ಯುವ ಬ್ರಿಗೇಡ್ ಮುಖ್ಯಸ್ಥ ಗಿರೀಶ್ ಅರ್ಜುನ್ ರಸ್ತೆ ಬದಿ ವ್ಯಾಪಾರ ಸಂಘದ ಅಧ್ಯಕ್ಷ ರಾಮು ನಿಗಮ ಮಂಡಳಿ, ಮಾಜಿ ಅಧ್ಯಕ್ಷ ಎನ್‍ಆರ್ ಕೃಷ್ಣಪ್ಪ ಗೌಡ ನಗರ ಸಭೆ ಸದಸ್ಯ ಕಪಿಲೇಶ್ ಸಿದ್ದರಾಜು ಶಂಕ್ರಪ್ಪ ಕುಮಾರ್ ಕಿಟ್ಟಿ ಸಿದ್ದು ನಿತಿನ್ ಮಾಧುರಾಜು ಸೇರಿದಂತೆ ಇತರರು ಇದ್ದರು.