ನಾಳೆ ಸೋಮಶೇಖರ ರೆಡ್ಡಿ ನಾಮಪತ್ರ ಸಲ್ಲಿಕೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.14: ಭಾರತೀಯ ಜನತಾ ಪಾರ್ಟಿಯಿಂದ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಗಾಲಿ  ಸೋಮಶೇಖರ ರೆಡ್ಡಿ ಅವರು
 ನಾಳೆ ಶನಿವಾರ ಏ‌  15 ರಂದು ನಾಮಪತ್ರ ಸಲ್ಲಿಸಲಿದ್ದಾರೆ.
ನಗರ ದೇವತೆ  ಕನಕ ದುರುಗಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮಧ್ಯಾಹ್ನ 01:00 ಗಂಟೆಯಿಂದ ದೇವಸ್ಥಾನದಿಂದ ರಾಯಲ್ ಸರ್ಕಲ್ ಮಾರ್ಗವಾಗಿ  ಪಾದಯಾತ್ರೆಯ ಮೂಲಕ ನಾಮಪತ್ರ ಸಲ್ಲಿಸಲು ಪಾಲಿಕೆ ಕಚೇರಿಗೆ ತೆರಳಲಿದ್ದಾರೆಂದು ಪಕ್ಷದ ಉಪಾಧ್ಯಕ್ಷ ಜಿ.ವೀರಶೇಖರ್ ರೆಡ್ಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.