ನಾಳೆ ಸುಕೃತಿ ಟ್ಯಾಲೇಂಟ್ ಟೆಸ್ಟ ಅವಾರ್ಡ

ತಾಳಿಕೋಟೆ:ಮಾ.2: ಪಟ್ಟಣದ ವಿಕಾಸ ಪಬ್ಲಿಕ್ ಸ್ಕೂಲ್‍ನಲ್ಲಿ ಹುಬ್ಬಳ್ಳಿಯ ಸುಕೃತಿ ಏಜ್ಯೂಕೇಶನ್ ಸೋಸಾಯಿಟಿಯಡಿಯಲ್ಲಿ ನಡೆಯುತ್ತಿರುವ ಸುಕೃತಿ ವಿಜ್ಞಾನ ಪ.ಪೂ.ಮಾಹಾ ವಿಧ್ಯಾಲಯದ ವತಿಯಿಂದ ಇದೇ ದಿ. 3 ರಂದು ಎಸ್.ಎಸ್.ಎಲ್.ಸಿ ವಿಧ್ಯಾರ್ಥಿಗಳಿಗಾಗಿ ಸುಕೃತಿ ಟ್ಯಾಲೇಂಟ್ ಟೆಸ್ಟ ಅವಾರ್ಡ ಪರಿಕ್ಷೆಗಳು ನಡೆಯಲಿವೆ.
ಕನ್ನಡ ಮತ್ತು ಆಂಗ್ಲ ಮಾಧ್ಯಮ ಕಲಿಯುತ್ತಿರುವ ವಿಧ್ಯಾರ್ಥಿಗಳಿಗೆ ಪ್ರತ್ಯೇಕ ಭಾಷೆಯ ಪ್ರಶ್ನೇ ಪತ್ರಿಕೆಗಳೊಂದಿಗೆ ಪರಿಕ್ಷೆ ನಡೆಯಲಿದ್ದು ಈ ಪರಿಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ವಿಧ್ಯಾರ್ಥಿಗಳಿಗೆ 25 ಸಾವಿರ, ದ್ವಿತೀಯ ಸ್ಥಾನ ಪಡೆದ ವಿಧ್ಯಾರ್ಥಿಗಳಿಗೆ 20 ಸಾವಿರ, ತೃತೀಯ ಸ್ಥಾನ ಪಡೆದ ವಿಧ್ಯಾರ್ಥಿಗಳಿಗೆ 10 ಸಾವಿರ ಮತ್ತು ಅವಾರ್ಡನ್ನು ನೀಡಲಾಗುವದೆಂದು ಸುಕೃತಿ ಏಜ್ಯೂಕೇಶನ್ ಸೋಸಾಯಿಟಿಯ ಅಧ್ಯಕ್ಷ ಜಗದೀಶ ಶಟ್ಟರ ಅವರು ತಿಳಿಸಿದ್ದಾರೆ.
ಈ ಮೂರು ಭಹುಮಾನಗಳನ್ನು ಹೊರತು ಪಡಿಸಿ 7 ಜನ ವಿಧ್ಯಾರ್ಥಿಗಳಿಗೆ ವಿಶೇಷ ಭಹುಮಾನವನ್ನು ನೀಡಲಾಗುತ್ತಿದ್ದು ಇದನ್ನು ಹೊರತು ಪಡಿಸಿ ಶಾಲೆಯಲ್ಲಿ ಕಲಿಯುತ್ತಿರುವ ವಿಧ್ಯಾರ್ಥಿಗಳಿಗಾಗಿ ಪ್ರತಿವರ್ಷವು 50 ಲಕ್ಷ ರೂ.ಯನ್ನು ಶಿಷ್ಯವೇತನವನ್ನು ನೀಡುತ್ತಿದ್ದೇವೆಂದು ತಿಳಿಸಿದ ಅವರು ಈ ಪ್ರಶ್ನೇ ಪತ್ರಿಕೆಯಲ್ಲಿ ವಿಜ್ಞಾನ, ಗಣಿತ, ಸಾಮಾನ್ಯ ಜ್ಞಾನ ಒಳಗೊಂಡಿದ್ದು ಇದೇ ದಿ. 3 ರಂದು ತಾಳಿಕೋಟೆ ಪಟ್ಟಣದ ವಿಕಾಸ ಪಬ್ಲಿಕ್ ಸ್ಕೂಲ್‍ನಲ್ಲಿ ನಡೆಯುವ ಪರಿಕ್ಷೆಗೆ ತಾಲೂಕಿನ ಎಸ್.ಎಸ್.ಎಲ್.ಸಿ. ಕಲಿಯುತ್ತಿರುವ ಎಲ್ಲ ವಿಧ್ಯಾರ್ಥಿಗಳು ಭಾಗವಹಿಸಿ ತಮ್ಮಲ್ಲಿಯ ಪ್ರತಿಭಾವಂತಿಕೆಯನ್ನು ಹೊರಹಾಕುವಂತಹ ಕಾರ್ಯ ಮಾಡಬೇಕೆಂದು ಅಧ್ಯಕ್ಷ ಜಗದೀಶ ಶಟ್ಟರ ಅವರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ ಮೋ.9972045678ಗೆ ಸಂಪರ್ಕಿಸಲು ಅವರು ಕೋರಿದ್ದಾರೆ.