ನಾಳೆ ಸಿರವಾರಕ್ಕೆ ಬಿ ಎಸ್ ವೈ, ನಟಿ ಶೃತಿ ಆಗಮನ

ರಾಯಚೂರು: ಏ.೨೮
ತುಂಗಭದ್ರಾ ಕಾಲುವೆ ಅಧಿನೀಕರಣಕ್ಕೆ ೧೨ಸಾವಿರ ಕೋಟಿ ರೂಪಾಯಿ ನೀಡಿದ, ರಾಜ್ಯದ ನಿಕಟಪೂರ್ವ ಮುಖ್ಯಮಂತ್ರಿ, ರೈತರಿಗೆ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿದ ರೈತ ನಾಯಕರಾದ ಬಿ.ಎಸ್.ಯಡಿಯೂರಪ್ಪನವರು ವಿಧಾನಸಭಾ ಚುನಾವಣೆಯ ಪ್ರಚಾರದ ಅಂಗವಾಗಿ ಜಿಲ್ಲೆಯ ಹೃದಯಭಾಗವಾದ ಸಿರವಾರಕ್ಕೆ ಆಗಮಿಸಲಿದ್ದಾರೆ.
ನಾಳೆ ಸಿರಿವಾರ ಪಟ್ಟಣದಲ್ಲಿ ಬಹಿರಂಗ ಸಭೆ ರೋಡ್ ಶೋ ಕಾರ್ಯಕ್ರಮಕ್ಕೆ ಎಲ್ಲಾ ಪೂರ್ವ ಸಿದ್ಧತೆಗಳನ್ನು ಮಾಡಲಾಗಿದೆ ಅನೇಕ ಕಾರ್ಯಕರ್ತರು ಭಾಗವಹಿಸಲಿದ್ದಾರೆ,ತಾಲೂಕಿನಲ್ಲಿ ಬಿಜೆಪಿ ಪಕ್ಷದ ಪರವಾಗಿ ಅಲೆ ಇದೆ ಬಿ ವಿ ನಾಯಕ ಅವರು ಗೆಲುವು ಸಾಧಿಸುತ್ತಾರೆ ಎಂದು ಬಿಜೆಪಿ ಮುಖಂಡರಾದ ತಿಮ್ಮರೆಡ್ಡಿ ಬೋಗವತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
ಮಾಜಿ ಸಂಸದ ಮಾನ್ವಿ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿಯಾದ ಬಿ.ವಿ.ನಾಯಕ ಅವರು ಬಿಜೆಪಿ ಸೇರ್ಪಡೆಯಿಂದ ಕಾರ್ಯಕರ್ತರಲ್ಲಿ ಹುಮ್ಮಸ್ಸು ಬಂದಿದೆ, ಇವರ ಪರ ಪ್ರಚಾರಕ್ಕೆ ಬಿ ಎಸ್ ವೈ ಆಗಮಿಸಲಿದ್ದಾರೆ. ಇವರ ಜೊತೆ ನಟಿ ಶೃತಿ ಕೂಡ ಆಗಮಿಸಲಿದ್ದಾರೆ. ಸಂಸದ ಅಮರೇಶ ನಾಯಕ, ಶಾಸಕ ಡಾ.ಶಿವರಾಜ ಪಾಟೀಲ್, ಕೆ.ಶಿವನಗೌಡ ನಾಯಕ, ತಾಲೂಕಿನ ಬಿಜೆಪಿ ಮುಖಂಡರಾದ ಬಸವನಗೌಡ ಬ್ಯಾಗವಾಟ, ಗಂಗಧರ್ ನಾಯಕ್, ಮಾನಪ್ಪ ನಾಯಕ ಹಾಗೂ ಅನೇಕ ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದಾರೆ.