ನಾಳೆ ಸಿಜಿಕೆ ಬೀದಿರಂಗ ದಿನ, ಪ್ರಶಸ್ತಿ ಪ್ರದಾನ

ರಾಯಚೂರು,ಆ.೧೧-
ಕರ್ನಾಟಕ ಬೀದಿನಾಟಕ ಅಕಾಡೆಮಿ ಹಾಗೂ ರಂಗಸಿರಿ ಸಾಂಸ್ಕೃತಿಕ ಕಲಾಬಳಗ ವತಿಯಿಂದ ಆಗಸ್ಟ್ ೧೨ ರಂದು ಸಿಜಿಕೆ ಬೀದಿರಂಗ ದಿನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ರಂಗಸಿರಿ ಸಾಂಸ್ಕೃತಿಕ ಕಲಾಬಳಗ ಅಧ್ಯಕ್ಷ ರಂಗಸ್ವಾಮಿ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ನಗರದ ಕನ್ನಡ ಭವನದಲ್ಲಿ ಬೆಳಿಗ್ಗೆ ೧೧ ಗಂಟೆಗೆ ಕಾರ್ಯಕ್ರಮ ನಡೆಯಲಿದೆ.ಸಿಜಿಕೆ ಪ್ರಶಸ್ತಿ ಪ್ರದಾನವನ್ನು ಸುರೇಶ ಅವರಿಗೆ ನೀಡಲಾಗಿದೆ.ಉದ್ಘಾಟನೆಯನ್ನು ಹಿರಿಯ ಸಾಹಿತಿ ಬಂಡಾಯ ಸಾಬೀತು ಬಾಬು ಭಂಡಾರಿಗಲ್ ಅವರು ಮಾಡಲಿದ್ದಾರೆ ಎಂದ ಅವರು, ಪ್ರಾಸ್ತಾವಿಕ ನುಡಿಯನ್ನು ರಂಗಸಿರಿ ಸಾಂಸ್ಕೃತಿಕ ಬಳಗದ ಅಧ್ಯಕ್ಷ ರಂಗಸಿರಿ ಮಾತನಾಡಲಿದ್ದಾರೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ರಂಗಭೂಮಿ ಕಲಾವಿದ ಮಲ್ಲನಗೌಡ ಇಂದುಪುರ ವಹಿಸಲಿದ್ದಾರೆ.
ಮುಖ್ಯ ಅಥಿತಿಗಳಾಗಿ ರಾಯಚೂರಿನ ಹಿರಿಯ ರಂಗಭೂಮಿ ಕಲಾವಿದ ವಿ.ಎನ್ ಅಕ್ಕಿ,ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಆರ್.ಗುರುನಾಥ, ರಂಗ ನಿರ್ದೇಶಕ ಪ್ರವೀಣ್ ರೆಡ್ಡಿ ಗುಂಜಹಳ್ಳಿ,ಸಿಜಿಕೆ ಬಿದಿರಂಗ ಆಚರಣಾ ಸಮಿತಿ ಸಂಚಾಲಕ ಸಿ.ಎಂ.ಸುರೇಶ ಅವರು ಆಗಮಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಸಿದ್ದಲಿಂಗಪ್ಪ, ವೆಂಕಟನರಸಿಂಹ ಇದ್ದರು.