ನಾಳೆ ಸಿಂಧನೂರು ಎಸ್.ಟಿ ಬೃಹತ್ ಸಮಾವೇಶ

ಸಿಂಧನೂರು.ಜ.೩- ಕುರುಬ ಸಮಾಜವನ್ನು ಎಸ್.ಟಿ.ಗೆ ಸೇರಿಸಲು ಒತ್ತಾಯಿಸಿ ನಾಳೆ ನಗರದಲ್ಲಿ ವಿಭಾಗ ಮಟ್ಟದ ಬೃಹತ ಸಮಾವೇಶ ಹಮ್ಮಿಕೊಳಲಾಗಿದೆ ಎಂದು ಎಸ್.ಟಿ. ಹೊರಾಟ ಸಮಿತಿ ಯ ರಾಜ್ಯ ಅಧ್ಯಕ್ಷರಾದ ಕೆ.ವಿರೂಪಕ್ಷಪ್ಪ ತಿಳಿಸಿದರು.
ಅವರಿಂದು ನಗರದಲ್ಲಿ ಕರೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡುತ್ತಾ ಕುರುಬರನ್ನು ಎಸ್.ಟಿ.ಗೆ ಸೇರಿಸುವಂತೆ ಹಿಂದೆ ಹಲವಾರು ಸಲ ಹೊರಾಟ ಮಾಡಿದರೂ ಸಹ. ನಮ್ಮ ಬೇಡಿಕೆ ಬಗ್ಗೆ ಸ್ವಂದಿಸದ ಕಾರಣ ಈಗ ಎಲ್ಲಾ ಪಕ್ಷಗಳು ಸಮಾಜದ ಮುಖಂಡರುಗಳ ಬೆಂಬಲ ಸಾಮಿಗುಳ ಸಾನಿಧ್ಯದಲ್ಲಿ ಹೊರಾಟ ಮಾಡಿ ರಾಜ್ಯ ಹಾಗೂ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಗುತದೆ ಎಂಕ್ ಹೇಳಿದರು.
ಈಗಾಗಲೇ ರಾಜ್ಯದ ವಿವಿಧ ಕಡೆಗಳಲ್ಲಿ ವಿಭಾಗ ಮಟ್ಟದ ಸಮಾವೇಶಗಳನು ಮಾಡಿ ನಾಳೆ ನಗರದಲ್ಲಿ ವಿಭಾಗ ಮಟ್ಟದ ಸಮಾವೇಶ ಹಮ್ಮಿಕೊಂಡಿದ್ದ ೬೦ಸಾವಿರ ಜನ ಸೇರುತ್ತಾರೆ ಸಮಾವೇಶ ದಲ್ಲಿ ಸಮಾಜದ ಮುಖಂಡರು ಹಾಗೂ ಸ್ವಾಮಿಗಳು ಆಗಮಿಸಿಲಿದಾರೆ ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ದೊಡ್ಡಬಸವರಾಜ, ಪೂಜಾರಿ ಎಸ್.ವೆಂಕಣ್ಣ ಸೇರಿದಂತೆ ಇತರರು ಇದ್ದರು