ನಾಳೆ ಸಿಂಧನೂರಿಗೆ ಸಿದ್ಧರಾಮಯ್ಯ ಆಗಮನ

ಸಿಂಧನೂರು,ಏ.೨೭- ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಹಂಪನಗೌಡ ಬಾದರ್ಲಿ ಪರವಾಗಿ ಮತಯಾಚನೆಗಾಗಿ ಮಾಜಿ ಮುಖ್ಯ ಮಂತ್ರಿ ವಿರೋಧ ಪಕ್ಷದ ನಾಯಕರಾದ ಸಿದ್ಧರಾಮಯ್ಯ ಏಪ್ರಿಲ್ ೨೮ ರಂದು ಸಿಂಧನೂರಿಗೆ ಬರಲಿದ್ದಾರೆ ಎಂದು ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾದ ಹಂಪನಗೌಡ ಬಾದರ್ಲಿ ತಿಳಿಸಿದರು.
ತಮ್ಮ ನಿವಾಸದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಏ.೨೮ ಸಿದ್ದರಾಮಯ್ಯ ನಗರದ ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನ ಆವರಣಲ್ಲಿ ಸಂಜೆ ೫ ಗಂಟೆಗೆ ಸಾರ್ವಜನಿಕರ ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಮಾತನಾಡುವರು.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಮುಂದೆ ಮಾಡಬಹುದಾದ ಅನೇಕ ಯೋಜನೆಗಳು ಪಕ್ಷದ ಗ್ಯಾರಂಟಿ ಕಾರ್ಡ್ ಬಗ್ಗೆ ಮಾಹಿತಿ ಈ ಭಾಗದ ಜ್ವಲಂತ ಸಮಸ್ಯೆಗಳು ಸೇರಿದಂತೆ ರಾಷ್ಟ್ರ ಹಾಗೂ ರಾಜ್ಯ ರಾಜಕೀಯ ಸ್ಥಿತಿ ಗತಿಗಳು ಹಾಗೂ ಕಾಂಗ್ರೆಸ್ ಪಕ್ಷದ ಕೊಡುಗೆಗಳ ಬಗ್ಗೆ ಸಿದ್ಧರಾಮಯ್ಯ ನವರು ಮಾತನಾಡಲಿದ್ದಾರೆ.
ತಾಲ್ಲೂಕಿನ ಭವಿಷ್ಯದ ಯೋಜನೆಗಳು ಅಭಿವೃದ್ಧಿ ಕೆಲಸಗಳ ಬಗ್ಗೆ ಪ್ರಸ್ತಾಪಿಸಿ ಮಾತನಾಡುವ ಅವರು ನವಲಿ ಸಮಾನಾಂತರ ಜಲಾಶಯ. ೩೭೧ ಕಾಯ್ದೆ ಯಲ್ಲಿ ಸರ್ಕಾರದ ತಪ್ಪು ನಿರ್ಧಾರಗಳ ಬಗ್ಗೆ ಮಾತನಾಡುವಂತೆ ನಾನು ಸಿದ್ಧರಾಮಯ್ಯನವರ ಗಮನಕ್ಕೆ ತಂದಿದ್ದೇನೆ.
ಪಕ್ಷ ಅಧಿಕಾರಕ್ಕೆ ಬಂದರೆ ತಾಲೂಕಿನಲ್ಲಿ ಮೆಡಿಕಲ್ ಕಾಲೇಜ್, ತಾಂತ್ರಿಕ ಕಾಲೇಜ್, ಕೌಶಲ್ಯ ತರಬೇತಿ ಕೇಂದ್ರ, ಸಿಂಧನೂರು ಜಿಲ್ಲಾಯನ್ನಾಗಿ ಮಾಡಲಾಗುವುದು ಮಹಿಳೆ, ಯುವಕ, ಯುವತಿಯರ ಉದ್ಯೋಗ ಒದಗಿಸುವ ಸಲುವಾಗಿ ಕಾರ್ಖಾನೆ ಸ್ಥಾಪನೆ ಇನ್ನುಳಿದ ಕೆಲಸಗಳನ್ನು ಮಾಡುವ ಜೊತೆಗೆ ಕ್ಷೇತ್ರವನ್ನು ಮಾದರಿ ಕ್ಷೇತ್ರವನಾನಾಗಿ ಮಾಡಲಾಗುತ್ತೇದೆ ಎಂದರು.
ನಾನು ಚುನಾವಣೆಯ ಪ್ರಚಾರಕ್ಕೆ ಹೋದ ಕಡೆ ಶಾಸಕ ವೆಂಟರಾವ ನಾಡಗೌಡರ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ವಿರೋಧ ಕಂಡು ಬರುತ್ತಿದ್ದು ನನ್ನ ಹಾಗೂ ಪಕ್ಷದ ಪರವಾದ ಉತ್ತಮ ವಾತಾವರಣ ಕಂಡು ಬರುವವರಿಂದ ನಾನು ಚುನಾವಣೆಯಲ್ಲಿ ಗೆಲ್ಲುವ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು ಬಿಜೆಪಿ. ಜೆಡಿಎಸ್ ಪಕ್ಷ ಗಳ ಸಿದ್ಧಾಂತ ಗಳೆ ಬೇರೆ ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳೆ ಬೇರೆ ಎಂದರು.
ನನ್ನ ೪೦ ವರ್ಷದ ರಾಜಕೀಯ ಜೀವನದಲ್ಲಿ ರಸ್ತೆಗಳು ಏತನೀರಾವರಿ, ಕೆರೆಗಳ ನಿರ್ಮಾಣ, ಶುದ್ಧವಾದ ಕುಡಿಯುವ ನೀರಿನ ಘಟಗಳನ್ನು ಆರಂಭಿಸಿದ್ದೇನೆ. ರಾಜ ಹೆದ್ದಾರಿ ನಿರ್ಮಾಣ ಪಿ.ಜಿ ಸೆಂಟರ್ ಅಲ್ಪಸಂಖ್ಯಾತರ ಶಾಲೆಗಳನ್ನು ಕಟ್ಟಿಸಿದ್ದೇನೆ ನಾನು ಶಾಸಕನಾದರೆ ಸಿಂಧನೂರು ಜಿಲ್ಲೆ ಮಾಡುವದೆ ನನ್ನ ಮೊದಲ ಆದ್ಯತೆಯಾಗಿದೆ ಎಂದರು.
ಪಕ್ಷದ ಮುಖಂಡರು, ಅಭಿಮಾನಿಗಳು, ಕಾರ್ಯಕರ್ತರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಹಂಪನಗೌಡ ಬಾದರ್ಲಿ ಮನವಿ ಮಾಡಿಕೊಂಡರು.
ಪಕ್ಷದ ಮುಖಂಡರಾದ ಎಂ. ಕಾಳಿಂಗಪ್ಪ ವಕೀಲರು, ಖಾಜಿ ಮಲ್ಲಿಕ್, ಜಾಪರ ಜಾಗೀರದ್ದಾರ, ಮುನಿರಪಾಷ, ಬಾಬರ ಪಟೇಲ್ ಸೇರಿದಂತೆ ಇತರರು ಇದ್ದರು.