ನಾಳೆ ಸಿಂಧನೂರಿಗೆ ಬರಗಾಲ ಅಧ್ಯಯನ ತಂಡ – ಕೆ.ಕರಿಯಪ್ಪ

ಸಿಂಧನೂರು.ನ.೯- ಹುಬ್ಬಳ್ಳಿ – ಧಾರವಾಡ ಶಾಸಕರಾದ ಅರವಿಂದ್ ಬೆಲ್ಲದ್ ಹಾಗೂ ತಂಡದವರು ನಾಳೆ ಸಿಂಧನೂರು ತಾಲೂಕಿಗೆ ಬರಗಾಲ ಅಧ್ಯಯನ ಕ್ಕಾಗಿ ಆಗಮಿಸುತ್ತಿದ್ದಾರೆಂದು ಬಿಜೆಪಿ ಮುಖಂಡರಾದ ಕೆ.ಕರಿಯಪ್ಪ ಪತ್ರಿಕೆಗೆ ತಿಳಿಸಿದರು.
ಭಾರತೀಯ ಜನತಾ ಪಕ್ಷದ ವತಿಯಿಂದ ಶಾಸಕರಾದ ಅರವಿಂದ್ ಬೆಲ್ಲದ್ ಮತ್ತು ತಂಡದವರು ಬರಗಾಲ ಅಧ್ಯಾಯನ ಮಾಡಲು ನಾಳೆ ಗುರುವಾರ ಸಿಂಧನೂರಿಗೆ ಆಗಮಿಸುತ್ತಿದ್ದು ರೈತರ ಹೊಲಗಳ ವಿಕ್ಷಣೆ ಮಾಡುತ್ತಿದ್ದಾರೆ ಮತ್ತು ಪೋತ್ನಾಳ ಹಾಗೂ ಕಲ್ಲೂರು ಗ್ರಾಮಗಳ ರೈತರ ಹೊಲಗಳಿಗೆ ಬೇಟಿ ಅವರೊಂದಿಗೆ ಅವರಿಗಾದ ನಷ್ಟವನ್ನು ಆಲಿಸಲಿದ್ದಾರೆ ಮತ್ತು ಈ ಕಾರ್ಯಕ್ರಮದಲ್ಲಿ ಬಿಜೆಪಿ ಪಕ್ಷದ ಎಲ್ಲಾ ಮುಖಂಡರು ,ಕಾರ್ಯಕರ್ತರು ಭಾಗವಹಿಸುವರು ಎಂದು ತಿಳಿಸಿದರು. ನಂತರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುವರು.
ಮಸ್ಕಿ, ಮಾನ್ವಿ, ರಾಯಚೂರು, ಲಿಂಗಸ್ಗೂರು ತಾಲೂಕಗಳಲ್ಲಿ ಆಯಾ ತಾಲೂಕಿನ ಮುಖಂಡರು ಅವರೊಂದಿಗೆ ಜೊತೆಯಾಗಿ ಹೊಲಗಳಿಗೆ ಬೇಟಿ ನೀಡುವರು ಎಂದು ತಿಳಿಸಿ, ಶುಕ್ರವಾರ ಯಾದಗಿರಿ ಜಿಲ್ಲೆ ಪ್ರವಾಸ ಮಾಡಲಿದ್ದಾರೆಂದರು.