
ಕೋಲಾರ,ಜು,೪- ಮುಳಬಾಗಿಲಿನ ಸರ್ಕಾರಿ ಕನ್ನಡ ಡಿ.ವಿ.ಜಿ. ಬಾಲಕರ ಶಾಲೆಯನ್ನು ೨,೭೫ ಕೋಟಿ ರೂ ವೆಚ್ಚದಲ್ಲಿ ನೂತನವಾದ ಅಧುನಿಕ ಕಟ್ಟಡವನ್ನು ನಿರ್ಮಿಸಿ ನಾಳೆ ಜು ೫ರ ಬುಧವಾರ ಬೆಳಿಗ್ಗೆ ೯.೩೦ ಲೋಕಾರ್ಪಣೆ ಮಾಡಲಾಗುವುದು ಎಂದು ಓಸ್ಸಾಟ್ ಎಜುಕೇಷನಲ್ ಚಾರಿಟಬಲ್ ಟ್ರಸ್ಟ್‌ನ ಸಂಚಾಲಕ ಸುದೀರ್ ಹೊಸಮನೆ ತಿಳಿಸಿದರು,
ನಗರದ ಪತ್ರಕರ್ತರ ಭವನದಲ್ಲಿನ ಸುದ್ದಿ ಗೋಷ್ಠಿಯಲ್ಲಿ ಅವರು ಮಾತನಾಡಿ ರಾಜ್ಯ ಸರ್ಕಾರ ಮತ್ತು ಓಸಾಟ್ ಎಜುಕೇಷನಲ್ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ನಿರ್ಮಿಸಿರುವ ನೂತನ ಕಟ್ಡಡವನ್ನು ಗ್ರಾಮೀಣಾ ಅಭಿವೃದ್ದಿ ಹಾಗೂ ನಗರ ಯೋಜನೆಯ ಸಚಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್.ಸುರೇಶ್ ಉದ್ಘಾಟಿಸಲಿದ್ದಾರೆ. ಓಸ್ಸಾಟ್ ಸಂಸ್ಥೆಯು ಗ್ರಾಮೀಣ ಪ್ರದೇಶದಲ್ಲಿನ ಸರ್ಕಾರಿ ಶಾಲೆಗಳಲ್ಲಿ ಮೂಲ ಭೂತ ಸೌಲಭ್ಯಗಳ ಕೊರತೆ ಇರುವುದನ್ನು ನೀಗಿಸುವ ದೆಸೆಯಲ್ಲಿ ಕಾರ್ಯನಿರ್ವಹಿಸುವುದು ಮೂಲ ಉದ್ದೇಶವಾಗಿದೆ. ಈಗಾಗಲೇ ಮಾಲೂರಿನಲ್ಲಿ ೫-೬ ಶಾಲೆಗಳಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ಕೊಡಲಾಗಿದೆ ಎಂದರು.
ಮುಳಬಾಗಿಲಿನ ಡಿ.ವಿ.ಜಿ. ಶಾಲೆ ಸ್ವಾತಂತ್ರ್ಯ ಪೂರ್ವದ ಕಟ್ಟಡವಾಗಿದ್ದು ಬಹುತೇಕ ಶೀಥಿಲವಸ್ಥೆಯಲ್ಲಿರುವುದನ್ನು ಅಧುನೀಕರಿಸಿ ನೂತನ ಕಟ್ಟಡವನ್ನಾಗಿ ಮಾರ್ಪಡು ಮಾಡಲಾಗಿದೆ. ಹೊರ ದೇಶದಲ್ಲಿ ನೆಲೆಸಿರುವ ಭಾರತೀಯರು ಸೇರಿದಂತೆ ೧೬ ಮಂದಿ ದಾನಿಗಳ ತಂಡವು ಈ ಟ್ರಸ್ಟ್ ರಚಿಸಿ ಕೊಂಡು ಸರ್ಕಾರದ ಜೂತೆ ಕೈ ಜೋಡಿಸಿ ಕಾರ್ಯನಿರ್ವಹಿಸಲು ಮುಂದಾಗಿದೆ. ಡಿ.ವಿ.ಜಿ. ಶಾಲೆಯಲ್ಲಿ ೧೦ ಕೊಠಡಿಗಳು, ಸಭಾಂಗಣ,ಗ್ರಂಥಾಲಯ, ಅಡುಗೆ ಕೋಣೆ, ಆಡಳಿತ ಮಂಡಳಿಯ ಕೊಠಡಿ, ಸಿಬ್ಬಂದಿಗಳ ಕೊಠಡಿ, ವಿದ್ಯಾರ್ಥಿಗಳಿಗೆ ಎರಡು ಪ್ರತ್ಯೇಕ ಶೌಚಾಲಯದ ಕಟ್ಟಡಗಳು ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಿದೆ, ಶಾಲೆಯ ಮುಂಭಾಗದಲ್ಲಿ ಡಿ.ವಿ.ಜಿ. ಅವರ ಪ್ರತಿಮೆಯನ್ನು ಪ್ರತಿಷ್ಠಪಾನೆ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಸಿನಿಮ ನಟರಾದ ರಮೇಶ್ ಅರವಿಂದ್ ಹಾಗೂ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್ ಅವರು ಅಗಮಿಸಲಿದ್ದಾರೆ. ಇವರುಗಳು ಡಿ.ವಿ.ಜಿ.ಅವರ ಅಭಿಮಾನಿಗಳಾಗಿದ್ದು ಅವರ ವಿಚಾರಗಳನ್ನು ಅರಿತವರಾಗಿದ್ದಾರೆ ಎಂದು ಹೇಳಿದರು,
ಓಸ್ಸಾಟ್ ರಾಷ್ಟ್ರದ ವಿವಿಧ ರಾಜ್ಯಗಳಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ಜೂತೆಗೆ ಕಟ್ಟಡಗಳು, ಮೂಲಸೌಲಭ್ಯಗಳನ್ನು ಕಲ್ಪಿಸಿ ಕೊಡುವ ಮೂಲಕ ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿ ಕೊಂಡಿದೆ. ಕರ್ನಾಟಕದಲ್ಲಿ ಸುಮಾರು ೭೮ ಶಾಲೆಗಳನ್ನು ನಿರ್ಮಿಸಿ ಕೊಟ್ಟಿದೆ. ಡಿಜಿಟಲ್ ಕಾರ್ಯಕ್ರಮಗಳನ್ನು ೫೩ ಶಾಲೆಗಳಿಗೆ ಅಳವಡಿಸಿದೆ. ಎಂದ ಅವರು ಶಾಲೆಯ ಆಡಳಿತದಲ್ಲಿ ಓಸ್ಸಾಟ್ ಸಂಸ್ಥೆಯದು ಯಾವೂದೇ ಪಾತ್ರವಿಲ್ಲ. ಎಲ್ಲಾ ವ್ಯವಸ್ಥೆಗಳನ್ನು ಆಡಳಿತ ಮಂಡಳಿ ಮಾಡಲಿದೆ.ನಮ್ಮದು ಏನಿದ್ದರೂ ಮೂಲಸೌಲಭ್ಯ ಕಲ್ಪಿಸುವುದು ಮಾತ್ರವಾಗಿದೆ ಎಂದು ಅವರು ವಿವರಿಸಿದರು
ಈ ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಸಂಸದ ಎಸ್.ಮುನಿಸ್ವಾಮಿ, ಶಾಸಕರಾದ ಸಮೃದ್ದಿ ಮಂಜುನಾಥ್ ಹಾಗೂ ಜಿಲ್ಲೆಯ ಎಲ್ಲಾ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಜನಪ್ರತಿನಿಧಿಗಳು, ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದರು,
ಟ್ರಸ್ಟ್‌ನ ನಿರ್ದೇಶಕರಾದ ನಿವೃತ್ತ ಎಚ್.ಎ.ಎಲ್. ಪ್ರಧಾನ ವ್ಯವಸ್ಥಾಪಕ ವೀರಣ್ಣಗೌಡ, ಬಿ.ಇ.ಎಲ್‌ನ ನಿವೃತ್ತ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಎನ್.ವಿ.ಜಿ. ಭಟ್ ಹಾಗೂ ರೋಟರಿಯ ರಾಹುಲ್ ಉಪಸ್ಥಿತರಿದ್ದರು,