ನಾಳೆ ಸಮಾರೋಪ ಸಮಾರಂಭ

ಧಾರವಾಡ,ನ19: ಕಳಾರಿ ಸಮರ ಕಲೆಯ ತರಬೇತಿ ಶಿಬಿರ ಮುಕ್ತಾಯ ಸಮಾರಂಭವನ್ನು ನವೆಂಬರ್ 20 ರಂದು ಹಮ್ಮಿಕೊಳ್ಳಲಾಗಿದೆ ಎಂದು ಪ್ರಭು ಹಂಚಿನಾಳ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನವೆಂಬರ್ 1 ರಿಂದ ನವೆಂಬರ್ 20 ರ ವರೆಗೆ ಈ ಕಳಾರಿ ಸಮರ ಕಲೆಯ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿತ್ತು. ನವೆಂಬರ್ 20 ರಂದು ತರಬೇತಿ ಹೊಂದಿದ ಅಭ್ಯರ್ಥಿಗಳಿಂದ ಕಳಾರಿ ಪೈಟ್ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದರು.

ಸಮಾರೋಪ ಸಮಾರಂಭದ ಉದ್ಘಾಟನೆಯನ್ನು ಮೇಯರ್ ಈರೇಶ ಅಂಚಟಗೇರಿ ನೇರವೇರಿಸಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಆಯುಕ್ತರಾದ ಗೋಪಾಲಕೃಷ್ಣ ಬಿ. ರಂಗಾಯಣ ನಿರ್ದೇಶಕ ರಮೇಶ ಪರವಿನಾಯ್ಕರ್, ಡಾ.ಮಹಾದೇವಿ ಹಿರೇಮಠ, ಪಾಲಿಕೆ ಸದಸ್ಯ ಸುರೇಶ ಬೇದ್ರೆ, ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಶಿಲ್ಪಾ ಪಾಂಡೆ, ಶ್ರೀನಿವಾಸ ಲಕ್ಕುಂಡಿ, ಗಂಗಾ ಕಾಳೇನವರ, ಕೆಪಿ ಶೇಖರ ಸೇರಿದಂತೆ ಹಲವರು ಇದ್ದರು.