ನಾಳೆ ಸಂಜೆ ನಗರದಲ್ಲಿ ಕಾಪು ಶಾಸಕ ಸುರೇಶ ಶೆಟ್ಟರಿಗೆ ಅಭಿನಂದನಾ ಸಮಾರಂಭ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜೂ.29: ನಗರದಲ್ಲಿ  ಹೊಟೇಲ್ ಉದ್ಯಮ ಆರಂಭಿಸಿ, ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷರಾಗಿ,  ತುಂಗಭದ್ರ ಬಂಟರ ಸಂಘದ ಮೂಲಕ ಸಾಂಸ್ಕೃತಿಕ, ಸಾಹಿತ್ಯ, ಕ್ಷೇತ್ರದ ಪ್ರೋತ್ಸಾಹಕರಾಗಿ, ಸಮಾಜ ಸೇವಕರಾಗಿ, ಉದ್ಯಮಿಯಾಗಿ ಸೇವೆ ಸಲ್ಲಿಸಿ. ಈಗ ರಾಜ್ಯದ ಉಡುಪಿ ಜಿಲ್ಲೆಯ ಕಾಪು ಕ್ಷೇತ್ರದ ಬಿಜೆಪಿ ಶಾಸಕರಾಗಿರುವ  ಗುರ್ಮೆ ಸುರೇಶ್ ಪಿ.ಶೆಟ್ಟಿ ಅವರಿಗೆ. ನಾಳೆ ಸಂಜೆ 6 ಕ್ಕೆ ನಗರದ ತುಂಗಭದ್ರ ಬಂಟರ ಸಂಘದಿಂದ, ಬಂಟ್ಸ್ ಭವನದಲ್ಲಿ ಅಭಿನಂದನಾ ಸಮಾರಂಭ ಹಮ್ಮಿಕೊಂಡಿದೆ.
ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ, ಮಾಜಿ ಸಚಿವ ಬಿ.ಶ್ರೀರಾಮುಲು, ನಗರ ಶಾಸಕ ನಾರಾ ಭರತ್ ರೆಡ್ಡಿ, ನಗರ ಮಾಜಿ ಶಾಸಕ ಗಾಲಿ ಸೋಮಶೇಖರ ರೆಡ್ಡಿ, ಮೇಯರ್ ಡಿ.ತ್ರಿವೇಣಿ ಅವರು ಪಾಲ್ಗೊಳ್ಳಲಿದ್ದು.  ಸಭಾಧ್ಯಕ್ಷತೆಯನ್ನು ಡಾ.ಮಾಧವ ಶೆಟ್ಟಿಯವರು ವಹಿಸಿಕೊಳ್ಳಲಿದ್ದು. ಸುರೇಶ್ ಶೆಟ್ಟರ್ ಅವರ ಅಭಿಮಾನಿಗಳು ಪಾಲ್ಗೊಳ್ಳಲಿದ್ದಾರೆಂದು   ಸಂಘದ ಕಾರ್ಯದರ್ಶಿ ಸೂರ್ಯಕುಮಾರ್ ಶೆಟ್ಟಿ ಅವರು ತಿಳಿಸಿದ್ದಾರೆ.