ನಾಳೆ ಸಂಜೆ ಕೂಡ್ಲಿಗಿ ಕೊತ್ತಲಾಂಜನೆಯ ಕಾರ್ತಿಕೋತ್ಸವ

ಕೂಡ್ಲಿಗಿ.ಡಿ.25:- ಪಟ್ಟಣದ ಆರಾಧ್ಯ ದೈವ ಶ್ರೀ ಕೊತ್ತಲಾಂಜನೇಯ ಸ್ವಾಮಿಯ ಕಾರ್ತಿಕೋತ್ಸವ ನಾಳೆ ಸಂಜೆ ಜರುಗಲಿದ್ದು ಸಕಲ ಭಕ್ತವೃಂದ ಸಾಮಾಜಿಕ ಅಂತರಕಾಯ್ದುಕೊಂಡು ಕಾರ್ತಿಕ ದೀಪಬೆಳಗಿಸುವ ಮೂಲಕ ಯಶಸ್ವಿಗೊಳಿಸುವಂತೆ ದೇವಸ್ಥಾನ ಮಂಡಳಿ ತಿಳಿಸಿದೆ.
‌ಪಟ್ಟಣದ ಹೊಸಪೇಟೆ ರಸ್ತೆ ಪಕ್ಕದಲ್ಲಿರುವ ದೇವಸ್ಥಾನದ ಸುತ್ತಲೂ ನಾಳೆ ಸಂಜೆ ಸ್ವಾಮಿಯ ಕಾರ್ತಿಕೋತ್ಸವದ ದೀಪಗಳನ್ನು ಪಟ್ಟಣದ ಸದ್ಭಕ್ತರು ಬೆಳಗಲಿದ್ದು ಕೋವಿಡ್ ಮಹಾಮಾರಿ ಇರುವುದರಿಂದ ಭಕ್ತ ಸಮೂಹ ಸಾಮಾಜಿಕ ಅಂತರದಲ್ಲಿ ಕಾರ್ತಿಕೋತ್ಸವದಲ್ಲಿ ಭಾಗವಹಿಸುವಂತೆ ದೇವಸ್ಥಾನ ಮಂಡಳಿ ಸಾರ್ವಜನಿಕರಲ್ಲಿ ಮನವಿ ಮಾಡಿದೆ.