ನಾಳೆ ಸಂಗೊಳ್ಳಿ ರಾಯಣ್ಣರ ಮೂರ್ತಿ ಅನಾವರಣ ಬೃಹತ್ ಮೆರವಣಿಗೆ : ಮಂಜುನಾಥ್ ಎನ್ ಪೂಜಾರಿ

ಸೇಡಂ,ಮಾ,25: ಸ್ವಾತಂತ್ರ ಹೋರಾಟಗಾರರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಮೂರ್ತಿ ಅನಾವರಣ ಕಾರ್ಯಕ್ರಮ ಮಧ್ಯಾಹ್ನ 3 ಗಂಟೆಗೆ ಶ್ರೀ ಕೊತ್ತಲ ಬಸವೇಶ್ವರ ದೇವಸ್ಥಾನದಿಂದ ಬಸವೇಶ್ವರ ವೃತ್ತದ ಹತ್ತಿರ ಇರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಉದ್ಯಾನವನದ ವರೆಗೆ ಡೊಳ್ಳು ಹಲಗೆ ಇನ್ನಿತರ ವಾದ್ಯಗಳೊಂದಿಗೆ ಸಮುದಾಯದ ಮಹಿಳೆಯರು ಮಕ್ಕಳು ಮುಖಂಡರು ಸೇರಿ ಸಂಗೊಳ್ಳಿ ರಾಯಣ್ಣ ಭಾವಚಿತ್ರ ಭವ್ಯ ಮೆರವಣಿಗೆಯಲ್ಲಿ ಪಾಲ್ಗೊಂಡು ತರಲಾಗುತ್ತದೆ ಎಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ಸಮಿತಿಯ ಅಧ್ಯಕ್ಷರಾದ ಮಂಜುನಾಥ್ ಎನ್ ಪೂಜಾರಿ ಕಾಚೂರ ತಿಳಿಸಿದ್ದಾರೆ.ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ಈ ಕಾರ್ಯಕ್ರಮಕ್ಕೆ ಬೀದರ್ ಜಿಲ್ಲೆಯ ಲೋಕಸಭೆ ಸದಸ್ಯರು ಕೇಂದ್ರ ಸರ್ಕಾರದ ಸಚಿವರಾದ ಭಗವಂತ ಖೂಬಾ ಅವರಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಲೋಕಾರ್ಪಣೆಗೊಳ್ಳಲಿದೆ, ಈ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ಶ್ರೀ ಶ್ರೀ ಶ್ರೀ ಸಿದ್ದರಮಾನಂದಪುರಿ ಮಹಾಸ್ವಾಮಿಗಳು, ಶ್ರೀ ಶಿವಶಂಕರ ಶಿವಾಚಾರ್ಯರು, ಪರಮಪೂಜಾ ಶ್ರೀ ಸದಾಶಿವ ಸ್ವಾಮಿಗಳು, ಶ್ರೀ ಪಂಚಾಕ್ಷರ ಸ್ವಾಮೀಜಿಗಳು, ಪೂಜ್ಯಶ್ರೀ ಲಿಂಗಪ್ಪ ತಾತನವರು, ಪೂಜಶ್ರೀ ಮರಿಯಪ್ಪ ತಾತ, ಮುಖ್ಯ ಅತಿಥಿಗಳಾಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಡಿಸಿಸಿ ಅಧ್ಯಕ್ಷರು ಶಾಸಕರಾದ ರಾಜಕುಮಾರ ಪಾಟೀಲ್ ತೇಲ್ಕೂರ್, ಅಧ್ಯಕ್ಷತೆ ಮಂಜುನಾಥ್ ಎನ್ ಪೂಜಾರಿ ಕಾಚೂರ, ಉಪಸ್ಥಿತಿ ಪುರಸಭೆ ಅಧ್ಯಕ್ಷರಾದ ಶ್ರೀಮತಿ ಶೋಭಾ ಎಸ್ ಹೂಗಾರ್, ಚಂದ್ರಶೇಖರ್ ಕೆರಳಿ, ಮೂರ್ತಿ ಪ್ರತಿಷ್ಠಾಪನೆ ಸಮಿತಿಯ ಗೌರವಾಧ್ಯಕ್ಷ ಮಾಳಪ್ಪ ಪೂಜಾರಿ ತೊಟ್ನಳ್ಳಿ, ಪುರಸಭೆ ಮುಖ್ಯಾಧಿಕಾರಿ ಸತೀಶ್ ಗುಡ್ಡೆ ಸೇರಿದಂತೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ಸಮಿತಿಯ ಸದಸ್ಯರು ಇರುವುದರಿಂದ ಜೊತೆಗೆ ಸೇಡಂ ತಾಲೂಕಿನ ಎಲ್ಲಾ ಸಮುದಾಯದ ಮುಖಂಡರು ಯುವಕರು ಮಹಿಳೆಯರು ಭಾಗವಹಿಸಲಿದ್ದಾರೆ ಎಂದು ಹೇಳಿದ್ದಾರೆ.