
ರಾಯಚೂರು,ಮಾ.೧೭- ಸ್ನೇಹ ಕರೋಕೆ ಸ್ಟೂಡಿಯೋ ವತಿಯಿಂದ ಮಾರ್ಚ್ ೧೮ ರಂದು ಸಂಗೀತ ಹಬ್ಬ ಸೀಜನ್ -೨ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ನರಸಪ್ಪ ಅಶಾಪೂರ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತಮಾಡಿ,ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಸಂಜೆ ೫ ಘಂಟೆಗೆ ನಡೆಯಲಿದ್ದು, ಕಾರ್ಯಕ್ರಮ ಉದ್ಘಾಟನೆಯನ್ನು ನಗರ ಶಾಸಕ ಡಾ.ಶಿವರಾಜ ಪಾಟೀಲ್ ಮಾಡಲಿದ್ದಾರೆ.ಅಧ್ಯಕ್ಷತೆಯನ್ನು ಜೆಡಿಎಸ್ ಮುಖಂಡ ರಾಮನಗೌಡ ಏಗನೂರು ವಹಿಸಲಿದ್ದಾರೆ ಎಂದ ಅವರು ಬಿಜೆಪಿ ಎಸ್.ಟಿ ಮೋರ್ಚಾ ರಾಜ್ಯಾಧ್ಯಕ್ಷ ಹಾಗೂ ಮಾಜಿ ಶಾಸಕ ತಿಪ್ಪರಾಜ ಹವಾಲ್ದಾರ್, ಕಾಂಗ್ರೆಸ್ ಯುವ ಮುಖಂಡ ರವಿ ಬೋಸರಾಜ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಬಷಿರುದ್ದಿನ್,ಬಿಜೆಪಿ ಮುಖಂಡ ರವೀಂದ್ರ ಜಲ್ದಾರ್, ಪೊಲೀಸ್ ನಿರೀಕ್ಷಕ ಗುರುರಾಜ ಆರ್.ಕಟ್ಟಿಮನಿ, ಸತೀಶ ಕುಮಾರ,ಬಿಜೆಪಿ ನಗರ ಘಟಕ ಅಧ್ಯಕ್ಷ ಬಿ.ಗೋವಿಂದ,ಕಾಂಗ್ರೆಸ್ ಮುಖಂಡ ನರ ನಸಿಂಹಲು ಮಾಡಗಿರಿ ಅವರು ಜ್ಯೋತಿ ಬೆಳಗಿಸುವರು ಎಂದರು.
ಮುಖ್ಯ ಅಥಿತಿಗಳಾಗಿ ಸರ್ಪಂಜ್ ಆನಂಪಲ್ಲಿ ರಾಮಕೃಷ್ಣ ದಣಿ,ವೈ.ಶಿವಪ್ಪ ಜೇಗುಂಟ,ಮೌನೇಶ್,ಡಿ.ವೀರೇಶ್, ಸುಖದೇವ್, ಫಾತಿಮಾ ಹುಸೇನಿ,ಅಮರೇಶ ಪಟೇಲ್ ಅವರು ಆಗಮಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ರಂಗಸ್ವಾಮಿ, ನರಸಿಂಹಲು, ಜೋಸೆಫ್ ಸೇರಿದಂತೆ ಇತರರು ಉಪಸ್ಥಿತರಿದ್ದರು.