ನಾಳೆ ಶ್ರೀ ಸಿದ್ದರಾಮೇಶ್ವರ ಮೂರ್ತಿ ಪ್ರತಿಷ್ಟಾಪನೆ: ರಮೇಶ್ ನಾಮವರ

ಸೇಡಂ, ಮಾ,12: ಪಟ್ಟಣದಲ್ಲಿ ನಾಳೆ ಶ್ರೀ ಶ್ರೀ ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಮೂರ್ತಿ ಪ್ರತಿಸ್ಥಾಪನೆಯನ್ನು ಚೋಟಿಗಿರಿಣಿಯಲ್ಲಿ ಮಾಡಲು ಸಕಲ ಸಿದ್ಧತೆ ಮಾಡಲಾಗಿದೆ ಎಂದು ಮೂರ್ತಿ ಪ್ರತಿಸ್ಥಾಪನೆ ಸಮಿತಿ ಅಧ್ಯಕ್ಷ ರಮೇಶ್ ನಾಮವರ ತಿಳಿಸಿದರು.

ಪಟ್ಟಣದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಶ್ರೀ ಕೊತ್ತಲ ಬಸವೇಶ್ವರ ದೇವಸ್ಥಾನದಿಂದ ಚೋಟಿಗಿರಿಣಿ ದೇವಾಲಯದವರೆಗೆ ಮೂರ್ತಿಯ ಭವ್ಯ ಮೆರವಣಿಗೆ ಮಾಡಲಾಗುತ್ತದೆ, ಈ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ಶ್ರೀ ಶ್ರೀ ಶಿವಶಂಕರ ಶಿವಾಚಾರ್ಯರು, ಶ್ರೀ ಶಾಂತವೀರ ಗುರು ಮುರುಗರಾಜೇಂದ್ರ ಮಹಾಸ್ವಾಮಿಗಳು, ಶ್ರೀ ಪಂಚಾಕ್ಷರಿ ಮಹಾಸ್ವಾಮಿಗಳು, ಶ್ರೀ ಸದಾಶಿವ ಸ್ವಾಮಿಗಳು, ಮೂರ್ತಿ ಉದ್ಘಾಟನೆ ಶ್ರೀಮನ್ ನಿರಂಜನ್ ಜಗದ್ಗುರು ಶ್ರೀ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮಿಗಳು ಮಾಡಲಿದ್ದಾರೆ, ಧರ್ಮಸಭೆ ಉದ್ಘಾಟನೆ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ, ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಜಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್, ಮುಖ್ಯ ಅತಿಥಿಗಳಾಗಿ ಡಾ. ಬಸವರಾಜ್ ಪಾಟೀಲ್ ಸೇಡಂ, ಕಲ್ಬುರ್ಗಿ ಸಂಸದರಾದ ಉಮೇಶ್ ಜಾದವ್, ಶಾಸಕರಾದ ಅರವಿಂದ ಲಿಂಬಾವಳಿ, ಬಸವಣ್ಣ ಗೌಡ ಪಾಟೀಲ್ ಯತ್ನಾಳ, ಬಸವರಾಜ ಮತ್ತಿಮುಡ್, ಸುನಿಲ್ ಮಲ್ಲಾಪುರೆ, ಮಾನಪ್ಪ ವಜ್ಜಲ್, ಪುರಸಭೆ ಅಧ್ಯಕ್ಷ ಶ್ರೀಮತಿ ಶೋಭಾ ಎಸ್ ಹೂಗಾರ್, ಉಪಾಧ್ಯಕ್ಷ ಚಂದ್ರಶೇಖರ್ ಕೆರಳಿ, ಬಿಜೆಪಿಯ ಮುಖಂಡರಾದ ಶಿವಕುಮಾರ್ ಪಾಟೀಲ್ ತೇಲ್ಕೂರ್, ಜೆಡಿಎಸ್ ಮುಖಂಡರಾದ ಬಾಲರಾಜ್ ಅಶೋಕ್ ಗುತ್ತೇದಾರ್, ಕೆಆರ್ ಪಿಪಿ ಮುಖಂಡ ಜಿ ಲಲ್ಲೇಶ್ ರೆಡ್ಡಿ, ಶ್ರೀ ಸಿದ್ದರಾಮೇಶ್ವರ ಗುರುಗಳ ಮೂರ್ತಿ ಪ್ರತಿಷ್ಠಾಪನೆ ಸಮಿತಿ ಅಧ್ಯಕ್ಷ ರಮೇಶ್ ನಾಮವರ ಸೇಡಂ ವಹಿಸಲಿದ್ದಾರೆ ಎಂದರು.

ಈ ವೇಳೆಯಲ್ಲಿ ರಮೇಶ್ ನಾಮವರ ಕಾಶಪ್ಪ ಪೂಜಾರಿ, ಹಣಮಂತ ಸೇಡಂ, ರಾಮಯ್ಯ ಪೂಜಾರಿ, ಕಾಶಿನಾಥ್ ದೊಡಮನಿ, ತಿರುಪತಿ ಶಾಹಬಾದಕರ್, ರಾಜಶೇಖರ್ ಕೊಂತನಪ್ಪಲ್ಲಿ, ನರೇಶ್ ಬೋವಿ ಬಟಗೇರ (ಕೆ) ಸಾಬಣ್ಣ ಬಟಗೇರ,ಜಗದೀಶ್ ಮದರಿ, ಮುರುಘೇಂದ್ರ ಬಟಗೇರ ಕೆ,ಅಳ್ಯಪ್ಪ ಪೂಜಾರಿ ಇದ್ದರು.