ನಾಳೆ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ

ರಾಯಚೂರು.ನ.೨೨- ಕಾರ್ತಿಕ ಮಾಸದ ಛಟ್ಟೆ ಅಮವಾಸ್ಯೆ ಅಂಗವಾಗಿ ಬೃಹಸ್ಪತಿ ವಾರ ಪೇಟೆಯ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ನ.೨೩ ರಂದು ಅತಿ ವಿಜೃಂಭಣೆಯಿಂದ ನಡೆಸಲಾಗುವುದೆಂದು ದೇವಸ್ಥಾನ ಸಮಿತಿ ತಿಳಿಸಿದೆ.
ನ.೨೩ ರಂದು ಸಾಯಂಕಾಲ ೬ ಗಂಟೆಗೆ ಮುತ್ತೈದೆಯರ ಕಳಸದೊಂದಿಗೆ ಸಕಲ ವಾದ್ಯಗಳೊಂದಿಗೆ ಪುರವಂತಿಗೆ ಸೇವೆಗಳೊಂದಿಗೆ ನಂದಿಕೋಲು ಸೇವೆ ಹಾಗೂ ಪಲ್ಲಕ್ಕಿ ಸೇವೆಯೊಂದಿಗೆ ಚಂದ್ರಮೌಳೇಶ್ವರ ದೇವಸ್ಥಾನ ಕುಂಬಾರೋಣಿ ಮೂಲಕ ಶ್ರೀ ದೇವಸ್ಥಾನ ತಲುಪಿದ ನಂತರ ಬೆಳಗಿನ ಜಾವ ೪ ಗಂಟೆಗೆ ಅಗ್ನಿಕುಂಡ ಪ್ರವೇಶ ಹಾಗೂ ಮಾರ್ಗಶಿರ ಶುದ್ಧ ಪಾಡ್ಯ ನ.೨೪ ರಂದು ೬-೩೦ ನಿಮಿಷಕ್ಕೆ ಪುರವಂತಿಗೆ ಹಾಗೂ ನಂದಿಕೋಲು ಸೇವೆಗಳೊಂದಿಗೆ ಮುತ್ತೈದಿಯರ ಕಳಸಗಳೊಂದಿಗೆ ಉಚ್ಛಾಯ ಮಹೋತ್ಸವ ನಡೆಸಲಾಗುವುದು.
ಸಕಲ ಸದ್ಭಕ್ತರು ತನು ಮನ ಧನ ಸೇವೆ ಸಲ್ಲಿಸಿ ಶ್ರೀ ವೀರಭದ್ರೇಶ್ವರ ಭದ್ರಕಾಳಿ ಆಶೀರ್ವಾದ ಪಡೆದುಕೊಳ್ಳಬೇಕೆಂದು ಅಧ್ಯಕ್ಷರು, ಕಾರ್ಯದರ್ಶಿಗಳು, ದೇವಸ್ಥಾನದ ಪ್ರಧಾನಕ್ಷಕರು ಹಾಗೂ ಶ್ರೀ ವೀರಭದ್ರೇಶ್ವರ ಸಕಲ ಸದ್ಭಕ್ತರು, ಶ್ರೀ ವೀರಭದ್ರೇಶ್ವರ ದೇವಸ್ಥಾನ ಸಮಿತಿ ಸದಸ್ಯರು ಪ್ರಕಟನೆ ತಿಳಿಸಿದ್ದಾರೆ.