(ಸಂಜೆವಾಣಿ ವಾರ್ತೆ)
ಲಕ್ಷ್ಮೇಶ್ವರ,ಅ27 : ಪಟ್ಟಣದಲ್ಲಿ ನಾಳೆ ದಿ. 28ರಂದು ದಿನ ತಾಲೂಕ ಆಡಳಿತ ತಾಲೂಕ ಪಂಚಾಯತಿ ಸಮಾಜ ಕಲ್ಯಾಣ ಇಲಾಖೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಪುರಸಭೆ ಲಕ್ಷ್ಮೇಶ್ವರ ಮತ್ತು ತಾಲೂಕ ಮಹರ್ಷಿ ವಾಲ್ಮೀಕಿ ಸಂಘದ ಸಂಯುಕ್ತ ಆಶ್ರಯದಲ್ಲಿ ಮಹರ್ಷಿ ಶ್ರೀ ವಾಲ್ಮೀಕಿ ಜಯಂತೋತ್ಸವವನ್ನು ಆಚರಿಸಲಾಗುತ್ತಿದೆ.
ನಾಳೆ ಮುಂಜಾನೆ 9:30ಕ್ಕೆ ಪಂಪ ವೃತ್ತದಿಂದ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರದ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಂತರ ಶ್ರೀ ಸೋಮೇಶ್ವರ ದೇವಸ್ಥಾನದ ಪಕ್ಕದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂಬರ್ ಮೂರರ ಶಾಲಾ ಆವರಣದಲ್ಲಿ ನಡೆಯುವ ಸಭಾ ವೇದಿಕೆ ಕಾರ್ಯಕ್ರಮದ ವೇದಿಕೆಯನ್ನು ತಲುಪಲಿದೆ.
ನಂತರ ಜರುಗಲಿರುವ ಕಾರ್ಯಕ್ರಮದ ಅಧ್ಯಕ್ಷತೆ ಹಾಗೂ ಉದ್ಘಾಟನೆಯನ್ನು ಶಾಸಕರಾದ ಡಾ. ಚಂದ್ರು ಲಮಾಣಿ ಅವರು ನೆರವೇರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಸಚಿವರಾದ ಡಾ. ಎಚ್ ಕೆ ಪಾಟೀಲ್ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರಾದ ಬಿ ನಾಗೇಂದ್ರ ಉಪಸ್ಥಿತರಿರುವರು.
ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಸಲೀಂ ಅಹಮದ್ ಸಂಸದ ಶಿವಕುಮಾರ್ ಉದಾಸಿ ವಿಧಾನ ಪರಿಷತ್ ಸದಸ್ಯರಾದ ಎಸ್ ವಿ ಸಂಕನೂರ ಪ್ರದೀಪ್ ಶೆಟ್ಟರ ಉಪವಿಭಾಗಾಧಿಕಾರಿ ಡಾ. ವೆಂಕಟೇಶ್ ನಾಯಕ್ ಮತ್ತು ವಿಶೇಷ ಅಹವಾನ್ವಿತರಾಗಿ ಮಹರ್ಷಿ ವಾಲ್ಮೀಕಿ ಸಂಘದ ಅಧ್ಯಕ್ಷರಾದ ಭೀಮಪ್ಪ ಯಂಗಾಡಿ ಸೇರಿದಂತೆ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಯ ಸಮಿತಿಯ ಅಧ್ಯಕ್ಷರು ಆದ ತಹಶೀಲ್ದಾರ್ ಮಂಜುನಾಥ್ ಅಮಾಸಿ ತಾಲೂಕಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಧರ್ಮ ರ ಸಿಪಿಐ ನಾಗರಾಜ್ ಮಾಡಳ್ಳಿ ಮುಖ್ಯ ಅಧಿಕಾರಿ ಶಂಕರ್ ಹುಲ್ಲಮ್ಮನವರ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಶರಣಯ್ಯ ಕುಲಕರ್ಣಿ ಉಪಸ್ಥಿತರಿರುವರು. ಅತಿಥಿ ಉಪನ್ಯಾಸಕರಾಗಿ ಗೀತಾ ಕರೆಮ್ಮನವರ ಆಗಮಿಸಲಿದ್ದಾರೆ.