ನಾಳೆ ಶ್ರೀ ರಾಮ ರಕ್ಷಾ ಸ್ತೋತ್ರದ  ಪುಸ್ತಕಗಳ ವಿತರಣೆ ಕಾರ್ಯಕ್ರಮ

ಸಂಜೆವಾಣಿ ವಾರ್ತೆ

 ಹಿರಿಯೂರು.ಜ 21 – ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಇದೇ 22ರ ಸೋಮವಾರ ಶ್ರೀ ಬಾಲರಾಮ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ಅತಿ ವಿಜೃಂಭಣೆಯಿಂದ ಜರುಗುತ್ತಿದ್ದು ಇದರ ಹಿನ್ನೆಲೆಯಲ್ಲಿ ಹಿರಿಯೂರಿನ ನಿವೃತ್ತ ಆರೋಗ್ಯ ಅಧಿಕಾರಿಗಳಾದ ಟಿ ಮಲ್ಲಪ್ಪಚಾರ್ಯ ಹಾಗೂ ಶ್ರೀಮತಿ ನಿರ್ಮಲಮ್ಮ ಇವರ ಸುಪುತ್ರ ಮಲ್ಲಿಕಾರ್ಜುನ್ ಆಚಾರ್ಯ ಇವರು ನಗರದ ಶ್ರೀ ತೇರು ಮಲ್ಲೇಶ್ವರ ಸ್ವಾಮಿ ದೇವಾಲಯದಲ್ಲಿ ನಡೆಯುವ ವಿವಿಧ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅಂದು ಭಕ್ತಾದಿಗಳಿಗೆ 1008 ಶ್ರೀ ರಾಮರಕ್ಷಾ ಸ್ತೋತ್ರದ ಪುಸ್ತಕಗಳನ್ನು ವಿತರಣೆ ಮಾಡಲಿದ್ದಾರೆ. ಕಳೆದ 500 ವರ್ಷಗಳ ಸುದೀರ್ಘ ಹೋರಾಟದಿಂದ ಶ್ರೀರಾಮ ಜನ್ಮ ಭೂಮಿಯಲ್ಲಿ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮ ನಡೆಯುತ್ತಿದ್ದು ಇದೊಂದು ತುಂಬಾ ಅಮೂಲ್ಯವಾದ ಕ್ಷಣವಾಗಿದೆ  ಇಂತಹ ಸಂದರ್ಭದಲ್ಲಿ ನನ್ನ ಅಳಿಲು ಸೇವೆ ಸಲ್ಲಿಸುತ್ತಿದ್ದೇನೆ  ಭಕ್ತಾದಿಗಳು ಬಂದು ಭಾಗವಹಿಸಿ ಶ್ರೀ ರಾಮರಕ್ಷಾ ಸ್ತೋತ್ರದ ಪುಸ್ತಕಗಳನ್ನು ಪಡೆಯುವಂತೆ ಅವರು ಮನವಿ ಮಾಡಿದ್ದಾರೆ.