ನಾಳೆ ಶ್ರೀ ಬನ್ನಿ ಲಕ್ಷ್ಮಿ ಕಾರ್ತಿಕ ದೀಪೆÇೀತ್ಸವ

ಕಲಬುರಗಿ:ನ.10:ನಗರದ ಹೈಕೋರ್ಟ್ ರಸ್ತೆಯಲ್ಲಿರುವ ಮಾಣಿಕಪ್ರಭು ಕಾಲೋನಿಯ ಶಕ್ತಿದೇವತೆಯಾದ ಶ್ರೀ ಬನ್ನಿ ಲಕ್ಷ್ಮಿ ದೇವಿಯ ಕಾರ್ತಿಕ್ ಮಾಸದ ದೀಪೆÇೀತ್ಸವ ಹಾಗೂ ಮುತೈದೇಯರಿಂದ ದೇವಿಗೆ ಉಡಿತುಂಬುವ ಕಾರ್ಯಕ್ರಮವು ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ನವೆಂಬರ್ 11 ರಂದು ನಡೆಯಲಿದೆ ಎಂದು ಬಡಾವಣೆಯ ಹಿರಿಯರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ ಅಂದು ಬೆಳಗಿನ ಜಾವ ಬಡಾವಣೆಯ ಸುತ್ತಮುತ್ತಲಿನ ಮುತೈದಿಯರು ಸೇರಿಕೊಂಡು ದೇವಿಗೆ ಸಾಂಸ್ಕøತಿಕ ಕುಂಭ ಕಲಶಗಳ ಮೇಳದೊಂದಿಗೆ ದೇವಿಯ ಉಡಿಯನ್ನು ತುಂಬಿಸಿ ಮಧ್ಯಾಹ್ನದಿಂದ ಬಂದ ಭಕ್ತರಿಗೆ ಪ್ರಸಾದ್ ವಿತರಿಸಿ ಸಂಜೆ 6:00 ಗಂಟೆಯಿಂದ ದೇವಿಗೆ ಕಾರ್ತಿಕ್ ಮಾಸದ ದೀಪೆÇೀತ್ಸವ ಕಾರ್ಯಕ್ರಮ ನೆರವೇರಿಸುವರು. ಅದೇ ದಿನ ರಾತ್ರಿ 7:00 ಗಂಟೆಯಿಂದ ಬಡಾವಣೆಯ ಪ್ರತಿಷ್ಠಿತ ಸಂಸ್ಥೆಯಾದ ಶ್ರೀ ಕನಕ ಪುರಂಧರ್ ಕಲೆ ಸಾಹಿತ್ಯ ಮತ್ತು ಸಂಸ್ಕೃತಿಕ ಕಲಾ ಸೇವಾ ಸಂಸ್ಥೆ (ರಿ ) ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಬುರಗಿ ಇವರ ಸಂಯುಕ್ತಾಶ್ರಯದದಲ್ಲಿ “ಕಲ್ಯಾಣ ಕರ್ನಾಟಕ ವಚನ ಸಂಗೀತೋತ್ಸವ “ಕಾರ್ಯಕ್ರಮ ನಡೆಯಲಿದೆ ಕಾರ್ಯಕ್ರಮ ದ ಉದ್ಘಾಟನೆಯನ್ನು ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕರಾದ ಶ್ರೀ ದತ್ತಾತ್ರೇಯ ಪಾಟೀಲ್ ರೇವೂರ್ ಉದ್ಘಾಟಿಸಲಿದ್ದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾನಗರ ಪಾಲಿಕೆಯ ಸದಸ್ಯರಾದ ಶ್ರೀಮತಿ ಶೋಭಾ ಜಿ ದೇಸಾಯಿ ವಹಿಸಲಿದ್ದು. ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಲಬುರಗಿ ವಲಯದ ಜಂಟಿ ನಿರ್ದೇಶಕರಾದ ಶ್ರೀ ಕೆ ಎಚ್ ಚನ್ನೂರ್ ಹಾಗೂ ಸಹಾಯಕ ನಿರ್ದೇಶಕರಾದ ಶ್ರೀ ದತ್ತಪ್ಪ ಸಾಗನೂರ. ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶ್ರೀ ಬಾಬುರಾವ್ ಕೋಬಾಳ್ ವಹಿಸಲಿದ್ದು ಕಾರ್ಯಕ್ರಮದಲ್ಲಿ ನಾಡಿನ ಪ್ರಖ್ಯಾತ ಆಕಾಶವಾಣಿ ಹಾಗೂ ದೂರದರ್ಶ ನ ಕೇಂದ್ರದ ಕಲಾವಿದರಾದ ಮಲ್ಲಿಕಾರ್ಜುನ ಭಜಂತ್ರಿ. ಶಿವಾನಂದ ಮಂದೆವಾಲ್. ಸಂತೋಷ ಕಾಮಶೆಟ್ಟಿ ನಂದರ್ಗಿ. ನಾಗರಾಜ್ ಪುರಂಕರ್. ಹರೀಶ ಹಾಲು ಹಾಗೂ ಶ್ರೀಮತಿ ಸರಸ್ವತಿ ಹಿರೇಮಠ್ ರವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ.ಸುಗಮ ಸಂಗೀತ. ವಚನ ಗಾಯನ.ಘಝಲ ಗಾಯನ.ಜಾನಪದ ಗಾಯನ. ದಾಸವಾಣಿ. ಹಾಗೂ ಮುಂತಾದ ಅನೇಕ ಸಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಅದರಿಂದ ಮಾಣಿಕ್ ಪ್ರಭು ಕಾಲೋನಿ ಹಾಗೂ ಸುತ್ತಮುತ್ತಲಿನ ಬಡವಣೆಗಳ ಸರ್ವಜನಿಕರು ಕಾರ್ಯಕ್ರಮಕ್ಕೆ ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಸಂಸ್ಥೆಯ ಅಧ್ಯಕ್ಷರಾದ ಶ್ರೀ ಬಸಯ್ಯ ಬಿ ಗುತ್ತೇದಾರ ತೆಲ್ಲೂರ ತಿಳಿಸಿದ್ದಾರೆ