ನಾಳೆ ಶ್ರೀ ನಿಜ ಶರಣ ಅಂಬಿಗರ ಚೌಡಯ್ಯನವರ ಜಯಂತಿ ಆಚರಣೆ

ಕಲಬುರಗಿ: ಜನವರಿ 21 ರಂದು ಶ್ರೀ ನಿಜ ಶರಣ ಅಂಬಿಗರ ಚೌಡಯ್ಯನವರ ಜಯಂತಿಯನ್ನು ಗಂಗಾ ನಗರದಲ್ಲಿ ಅಂಬಿಗರ ಚೌಡಯ್ಯನ ದೇವಸ್ಥಾನದಲ್ಲಿ ಸರಳವಾಗಿ ಆಚರಿಸಲಾಗುವುದು ಎಂದು ನಿಜ ಶರಣ ಅಂಬಿಗರ ಚೌಡಯ್ಯ ಜೀಣೋದ್ಧಾರ ಸಂಘದ ಅಧ್ಯಕ್ಷ ರಾಯಪ್ಪ ಹೋನಗುಂಟಿ ಹಾಗೂ ಕಾರ್ಯದರ್ಶಿ ಶಾಂತಪ್ಪ ಕೂಡಿ ಅವರು ಜಂಟಿಯಾಗಿ ತಿಳಿಸಿದ್ದಾರೆ.

ಅಂದು ಮುಂಜಾನೆ 08:00 ಗಂಟೆಗೆ ಅಂಬಿಗರ ಚೌಡಯ್ಯನವರ ತೊಟ್ಟಿಲ ಕಾರ್ಯಕ್ರಮ ಜರುಗುವುದು ನಂತರ 10:30 ಗಂಟೆಗೆ ಚೌಡಯ್ಯನವರ ಜಯಂತಿಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಅದಕ್ಕಾಗಿ ತಪ್ಪದೇ ಸಮಿತಿಯ ಸಲಹಾ ಸಮಿತಿಯ ಸದಸ್ಯರು, ಪದಾಧಿಕಾರಿಗಳು, ನೂತನ ಸದಸ್ಯರು, ಗಂಗಾನಗರ ಬಡಾವಣೆ, ಮಾಣಿಕೇಶ್ವರಿ ಕಾಲೋನಿ, ಚೌಡೇಶ್ವರಿಯ ಕಾಲೋನಿಯ ಹಿರಿಯ ಮುಖಂಡರು, ಅಕ್ಕ ತಂಗಿಯರು, ಅಣ್ಣತಮ್ಮಂದಿರು, ಯುವಕರು ಈ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.