ನಾಳೆ ಶ್ರೀ ದಿಡ್ಡಿ ಬಸವೇಶ್ವರ ದೇವಸ್ಥಾನ:ಸಹಸ್ರ ದೀಪೋತ್ಸವ

ಸಿರವಾರ,ನ.೨೦-ತಾಲೂಕಿನ ಅತ್ತನೂರು ಗ್ರಾಮದ ಇತಿಹಾಸ ಪ್ರಸಿದ್ದ ವಿಶ್ವದ ಕೆಂಪು ಕೆತ್ತನೆಯ ಶ್ರೀ ದಿಡ್ಡಿಬಸವೇಶ್ವರ ದೇವಸ್ಥಾನದಲ್ಲಿಯೇ ಮೊದಲ ಬಾರಿಗೆ ಕಾರ್ತಿಕ ಮಾಸದ ಪ್ರಯುಕ್ತ ನವೆಂಬರ್ ೨೧ ಸೋಮವಾರದಂದು ಸಹಸ್ರದೀಪೋತ್ಸವ ಹಾಗೂ ಹಾಸ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮಕ್ಕೆ ವಿವಿಧ ಮಠದ ಶ್ರೀಗಳು, ರಾಜಕೀಯ ದುರಿಣರು ಭಾಗವಹಿಸುತ್ತಾರೆ, ದೀಪೋತ್ಸವ ನಂತರ ಕನ್ನಡ ಚಿತ್ರರಂಗದ ಹಿರಿಯ ಕಲಾವಿದರಾದ ಹಾಸ್ಯನಟ ಟೆನ್ನಿಸ್ ಕೃಷ್ಣ ಅವರ ನೇತೃತ್ವದಲ್ಲಿ ಹಾಸ್ಯ ರಸಮಂಜರಿ ಕಾರ್ಯಕ್ರಮವನ್ನು ಹಮ್ಮಿಕೊಳಲಾಗಿದ್ದೂ ಭಕ್ತರು ಆಗಿಮಿಸಿ ಯಶಸ್ವಿಗೊಳಿಸಬೇಕು ಎಂದು ದಿಡ್ಡಿ ಬಸವೇಶ್ವರ ಟ್ರಸ್ಟ್ ಕಾರ್ಯದರ್ಶಿ ನವೀನ್ ಪಾಟೀಲ್ ಅತ್ತನೂರು ಪ್ರಕಟಣೆಯಲ್ಲಿ ತಿಳಿಸಿದರು.