ನಾಳೆ ಶ್ರೀ ಜ್ಯೋತಿಬಾ ದೇವರ ಜಾತ್ರಾ ಮಹೋತ್ಸವ

ವಿಜಯಪುರ:ಎ.29: ನಗರದ ಎಂ.ಜಿ. ರೋಡ ಶಿವಾಜಿ ಸರ್ಕಲ್ ಹತ್ತಿರ ಇರುವ ಶ್ರೀ ಜ್ಯೋತಿಬಾ ದೇವರ ಮಂದಿರದಲ್ಲಿ ರವಿವಾರ ದಿನಾಂಕ 30-4-2023 ರಂದು ಪ್ರತಿ ವರ್ಷದಂತೆ ಈ ವರ್ಷವು ಶ್ರೀ ಜ್ಯೋತಿಬಾ ದೇವರ ಜಾತ್ರಾ ಮಹೋತ್ಸವ ಹಾಗೂ ಪಲ್ಲಕ್ಕಿ ಉತ್ಸವ ಜರುಗಲಿದೆ.

ಉತ್ಸವದ ಅಂಗವಾಗಿ ಅನೇಕ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದೆ. ಬೆಳಿಗ್ಗೆ 7-00 ಗಂಟೆಗೆ ಸಕಲ ಭಕ್ತಾದಿಗಳಿಂದ ಪೂಜೆ ಹಾಗೂ ಅಭಿಷೇಕ ಹಾಗೂ ಮಧ್ಯಾಹ್ನ ಮಹಾಪ್ರಸಾದ ಇರುವುದು ಸರ್ವ ಭಕ್ತಾಧಿಗಳು ಜಾತ್ರಾಮಹೋತ್ಸವದಲ್ಲಿ ಭಾಗವಹಿಸಿ ದೇವರ ದರ್ಶನ ಪಡೆದು ಮಹಾಪ್ರಸಾದ ಸ್ವೀಕರಿಸಿ ಪುನೀತರಾಗಬೇಕೆಂದು ದೇವಸ್ಥಾನ ಕಮೀಟಿ ಸದಸ್ಯ ಸುರೇಶ ಗೋಲಾಂಡೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.