ನಾಳೆ ಶ್ರೀರಾಮ ನವಮಿ

ಬೆಂಗಳೂರು, ಏ. ೧೬- ನಗರದ ಪ್ಯಾಲೇಸ್ ರಸ್ತೆಯಲ್ಲಿ ನೆಲಸಿರುವ ಶ್ರೀ ಭಗವಾನ್ ಮಾರುತಿ ದೇವಸ್ಥಾನದ ವತಿಯಿಂದ ಏ. ೧೭ ರಂದು ೫೩ನೇ ವರ್ಷದ ಶ್ರೀ ರಾಮ ನವಮಿಯನ್ನು ಏರ್ಪಡಿಸಲಾಗಿದೆ.
ಅಂದು ಬೆಳಿಗ್ಗೆ ೭.೩೦ಕ್ಕೆ ಪಂಚಾಮೃತ ಅಭಿಷೇಕ, ೧೦.೩೦ಕ್ಕೆ ಮಹಾಮಂಗಳಾರತಿ ಮತ್ತು ಭಕ್ತಿ ಗೀತೆಗಳು ಸಂಜೆ ೫.೩೦ಕ್ಕೆ ಪೂಜೆ, ಭಕ್ತಿಗೀತೆಗಳ ಕಾರ್ಯಕ್ರಮ, ರಾತ್ರಿ ೯.೩೦ಕ್ಕೆ ಮಹಾಮಂಗಳಾರತಿ ನಡೆಯಲಿದೆ.
ಏ. ೧೮ ರಂದು ಬೆಳಿಗ್ಗೆ ೧೦.೩೦ಕ್ಕೆ ಸೀತಾ-ರಾಮ ಕಲ್ಯಾಣ, ೧೨.೩೦ಕ್ಕೆ ಅನ್ನದಾನ ಮತ್ತು ರಾತ್ರಿ ೭.೩೦ಕ್ಕೆ ರಥೋತ್ಸವವನ್ನು ಏರ್ಪಡಿಸಲಾಗಿದೆ. ಭಕ್ತರು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಿ ಹನುಮನ ಕೃಪೆಗೆ ಪಾತ್ರರಾಗಬೇಕೆಂದು ಪ್ರಕಟಣೆಯಲ್ಲಿ ಕೋರಲಾಗಿದೆ.