ನಾಳೆ ಶ್ರೀನಿವಾಸ ಕಲ್ಯಾಣ ಮಹೋತ್ಸವ


ಸಂಜೆವಾಣಿ ವಾರ್ತೆ
ಗಂಗಾವತಿ, ಜೂ.15: ಅಖಂಡ ಗಂಗಾವತಿ ತಾಲೂಕಿನ ಮುಷ್ಟೂರು ಕ್ಯಾಂಪಿನಲ್ಲಿ ವಿಶ್ವ ಕಲ್ಯಾಣಕ್ಕಾಗಿ ಜೂ.16 ಶುಕ್ರವಾರ ಸಂಜೆ 06-00 ಗಂಟೆಗೆ ಶ್ರೀನಿವಾಸ್ ಕಲ್ಯಾಣ ಮಹೋತ್ಸವ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ ಎಂದು ಸಮಿತಿಯ ಅಧ್ಯಕ್ಷ ಆರ್.ವಿ.ಸತ್ಯನಾರಾಯಣ ತಿಳಿಸಿದರು,
ಅವರು ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದರು.
ಕಲ್ಯಾಣ ಮಹೋತ್ಸವ ಕಾರ್ಯಕ್ರಮವನ್ನು ಬೆಂಗಳೂರಿನ ಶ್ರೀ ವಾದಿರಾಜಾಚಾರ್ಯ ಇವರು ನೆರವೇರಿಸುವರು. ವಿಶೇಷ ವ್ಯಾಖ್ಯಾನುಕಾರರಾಗಿ ಪಂಡಿತ ರಾಮಚಂದ್ರಾಚಾರ್ಯ ಸಿರಿಗೆ ಸೋನ್ ಬೆಂಗಳೂರು ಇವರು ಪಾಲ್ಗೊಳ್ಳುವರು, ರಾಯಚೂರಿನ ಡಾ.ಶೇಷಗಿರಿದಾಸ್ ಹಾಗು ಬೆಂಗಳೂರಿನ ದಿವ್ಯ ಗಿರಿಧರ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಕೊಪ್ಪಳ ಅಭಿನವ ಗವಿ ಶ್ರೀಗಳು, ಹೆಬ್ಬಾಳ ಶ್ರೀ ನಾಗಭೂಷಣ ಶಿವಾಚಾರ್ಯರು, ಸಚಿವ ಶಿವರಾಜ್ ತಂಗಡಗಿ ಸೇರಿದಂತೆ ಅನೇಕ ಪ್ರಮುಖರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು ತಿಳಿಸಿದರು.
ಇದಕ್ಕೂ ಮುನ್ನಾ ಗುರುವಾರ ಜೂನ್ 15 ರಂದು ಸಂಜೆ  5.30ಕ್ಕೆ ಶ್ರೀನಿವಾಸ್ ದೇವರ ವೈಭವದ ಮೆರವಣಿಗೆ ಜರುಗಲಿದ್ದು, ಭಜನಾ ಮಂಡಳಿ ಹಾಗು ಕೋಲಾಟ ತಂಡಗಳು ಭಾಗವಹಿಸಲಿವೆ. ಮರುದಿನ ಜೂ.16 ಮರು ದಿನ ಶುಕ್ರವಾರ, ಬೆಳಗ್ಗೆ 8.30ಕ್ಕೆ ಸುಪ್ರಭಾತ, 10.30 ರಿಂದ 12 ಗಂಟೆಗೆ ಶ್ರೀ ಶ್ರೀನಿವಾಸ ದೇವರಗೆ ತಿರುವಂಜನಾ (ಅಭಿಷೇಕ) ಸೇವಾ ಹಾಗು ಪುಷ್ಪಾರ್ಚನೆ, ಮಧ್ಯಾಹ್ನ 1.00 ರಿಂದ 5.30 ರವರೆಗೆ ಹರಿದಾಸ ಸಂಕೀರ್ತನ ಕಾರ್ಯಕ್ರಮ ನಡೆಯಲಿದ್ದು ನಂತರ ಆರು ಗಂಟೆಗೆ ಶ್ರೀ ಶ್ರೀನಿವಾಸ್ ಕಲ್ಯಾಣ ಮಹೋತ್ಸವ ವಿಜೃಂಭಣೆಯಿಂದ ಜರುಗಲಿದೆ ಎಂದರು.
ವಿಶೇಷವಾಗಿ ಈ ಕಾರ್ಯಕ್ರಮಕ್ಕೆ ನೆಕ್ಕಂಟಿ ಸೂರಿಬಾಬು ಅವರು ತಿರುಪತಿಯಿಂದ ಎರಡು ಸಾವಿರ ಲಾಡು ತರಿಸಲಿದ್ದು ಬಂದ ಭಕ್ತಾಧಿಗಳಿಗೆ ತಿರುಪತಿ ಲಾಡು ಪ್ರಸಾದ ದೊರೆಯಲಿದೆ. ಬಳ್ಳಾರಿ, ಕೊಪ್ಪಳ ಹಾಗು ರಾಯಚೂರು ತಿರುಪತಿ ತಿರುಮಲ ದಾಸ ಸಾಹಿತ್ಯ ಪ್ರೋಜೆಕ್ಟ್‍ನ ಎಲ್ಲ ಭಜನಾ ಮಂಡಳಿಗಳು ಭಾಗವಹಿಸಲಿದ್ದು ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮಕ್ಕೆ ಮೆರಗು ತರಬೇಕೆಂದು ಅವರು ಕೋರಿದ್ದಾರೆ.
ಈ ಸಂದರ್ಭದಲ್ಲಿ ಸಮತಿಯ ಸದಸ್ಯರಾದ ಪ್ರಸಾದ್ ವಟ್ಟಿಕೋಟಿ, ಬಿ. ಶ್ರೀನಿವಾಸ್ ಟಿ.ಶ್ರೀನಿವಾಸ್ ಇತರರಿದ್ದರು.