ನಾಳೆ ಶ್ರೀದೇವಿ ಹೂಗಾರಗೆ ಕಾಯಕಯೋಗಿ ಪ್ರಶಸ್ತಿ ಪ್ರದಾನ

ಬೀದರ್:ಜ.14: ನಾಳೆ ರಾಜ್ಯ ರಾಜ್ಯಧಾನಿ ಬೆಂಗಳೂರಿನ ಕೆಂಗೇರಿ ಉಪನಗರದ ಬಂಡೇಮಠದ ಶ್ರೀ ಬಂಡೆಶ್ವರ ಶಿವಯೋಗಿಗಳ ಭವನದಲ್ಲಿ ಸಂಜಹೆ 4.00 ಗಂಟೆಗೆ ಕರ್ನಾಟಕ ರಾಜ್ಯದ ಮೊಟ್ಟ ಮೊದಲ ಮಾಸ್ಟರ್ ಮೈಂಡ್ ಟ್ರೇನರ್ ಎಂಬ ಹೆಗ್ಗಳಿಕೆಗೆ ಪಾತ್ರರಾದ ಬೀದರ್ ಜಿಲ್ಲೆಯ ಸಿ.ಆರ್.ಪಿ ಶ್ರೀಮತಿ ಶ್ರೀದೇವಿ ಹೂಗಾರ ಅವರಿಗೆ ಕಾಯಕಯೋಗಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.

ಉತ್ತರ ಕರ್ನಾಟಕ ಗೆಳೆಯರ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಜರುಗಲಿರುವ ಸಮಾರಂಭದಲ್ಲಿ ಹೂಗಾರ ಅವರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.

ಇದರ ಜೊತೆಗೆ ಇತ್ತಿಚೀಗೆ ಲಿಂಗೈಕ್ಯರಾದ ನಾಡಿನ ತಪಸ್ವಿಗಳು, ಯೋಗಿಗಳು ಆದ ಲಿ.ಪೂಜ್ಯ ಸಿದ್ಧೇಶ್ವರ ಸ್ವಾಮಿಜಿಗಳ ನುಡಿನಮನ ಕಾರ್ಯಕ್ರಮ ಸಹ ಎರ್ಪಡಿಸಲಾಗಿದೆ.

ಶ್ರೀದೇವಿ ಹೂಗಾರ ಅವರು ಭಾಲ್ಕಿ ತಾಲೂಕಿನ ಮದಕಟ್ಟಿ ಗ್ರಾಮದಲ್ಲಿ ಆಕ್ಟೊಬರ್ 15 1982ರಲ್ಲಿ ಜನಿಸಿದರು. ಇವರ ಪತಿ ಬಸವರಾಜ ಹೂಗಾರ ಪೋಲಿಸ್ ವೃತ್ತಿಯಲ್ಲಿದ್ದಾರೆ. ಪುತ್ರ ವಿವೇಕಾನಂದ ಇದ್ದಾರೆ. ಶ್ರೀದೇವಿ ಇಂದು ರಾಷ್ಟ್ರ ಮಟ್ಟದ ಮಾಸ್ಟರ್ ಮೈಂಡ್ ಟ್ರೇನಿಂಗ್ ನಡೆಸುತ್ತಿರುವ ಏಕೈಕ ಮಹಿಳೆ ಎಂದೇ ಖ್ಯಾತಿ ಪಡೆದಿದ್ದಾರೆ…ಅದರ ಜೊತೆಗೆ ಇವರ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮ ಎಂಟು ಕೃತಿಗಳು ಪ್ರಕಟವಾಗಿವೆ.

ಸುಮಾರು ಮೂನ್ನುರಕ್ಕೂ ಹೆಚ್ಚು ನಿರೂಪಣೆ ಮಾಡಿರುವ ಸಾಧನೆ ಇವರದ್ದು.

ವ್ಯಕ್ತಿತ್ವ ವಿಕಸನ ಕಾರರು, ಮಾಸ್ಟರ್.

ಪರ್ಸನಲ್ ಕೋಚ್,. ಲೈಫ್ ಕೋಚ್

ಜೊತೆಗೆ ಶಿಕ್ಷಣ ಇಲಾಖೆಯ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ ಸದ್ಯ ಕಾರ್ಯ ನಿರ್ವಹಿಸುತ್ತಿದ್ದಾರೆ.

ತಮ್ಮ ಅಗಲಿದ ಮಗಳ ಹೆಸರಲ್ಲಿ “ನಿವೇದಿತಾ ಹೂಗಾರ ವ್ಯಕ್ತಿತ್ವ ವಿಕಸನ ಟ್ರಸ್ಟ್” ಹುಟ್ಟು ಹಾಕಿ ಇಂದು ಸಾವಿರಾರು ಮಕ್ಕಳಿಗೆ ಪೆÇ್ರೀತ್ಸಾಹ ನೀಡುತ್ತಿದ್ದಾರೆ. ವಯೋವೃದ್ಧರಿಗೆ ಅಗತ್ಯ ಸೌಲಭ್ಯಗಳನ್ನು ನೀಡುವುದು, ವಿಕಲ ಚೇತನ ಮಕ್ಕಳಿಗೆ ಪೆÇ್ರೀತ್ಸಾಹ ನೀಡುವುದು ಹೀಗೆ ಹತ್ತು ಹಲವು ರಚನಾತ್ಮಕ ಕಾರ್ಯಗಳು ಕೈಗೆತ್ತಿಕೊಂಡು ಸಮಾಜದಲ್ಲಿ ನೊಂದವರ ಧ್ವನಿಯಾಗಿ ನಿಂತಿರುವ ಇವರ ಸಾಧನೆ ಕಂಡು ಜಿಲ್ಲಾ ಮಟ್ಟದ ಗಣರಾಜ್ಯೋತ್ಸವ ಪ್ರಶಸ್ತಿ, ಸಾವಿತ್ರಿ ಬಾಯಿ ಫುಲೆ ಪ್ರಶಸ್ತಿ, ಕೌಶಲ್ಯ ರಶ್ಮಿ ಪ್ರಶಸ್ತಿ, ಕಾವ್ಯ ಭಾವಾಂಜಲಿ ಇಂತಹ ನೂರಾರು ಪ್ರಶಸ್ತಿಗಳು ಲಭಿಸಿವೆ..

ಸಧ್ಯಕ್ಕೆ ದುಶ್ಚಟಗಳಿಗೆ ಬಲಿಯಾದ ವ್ಯಕ್ತಿಗಳಿಗೆ, ವಿದ್ಯಾರ್ಥಿಗಳಿಗೆ, ಯುವಕರಿಗೆ “Subಛಿoಟಿsಛಿious ಚಿಛಿಣivಚಿಣioಟಿ ಠಿಡಿogಡಿಚಿm ” ಮೂಲಕ ಇಲ್ಲಿಯ ವರೆಗೂ ಸುಮಾರು ಎರಡು ಸಾವಿರ ಜನರಿಗೆ ದುಶ್ಚಟಗಳಿಂದ ಮುಕ್ತ ಮಾಡಿದ್ದಾರೆ….

“ಮೊಬೈಲ್ ಗೇಮ್ಸ್ ಆಡುವ ಮಕ್ಕಳಿಗೆ “ಕೇವಲ ಮೂರು ದಿನಗಳ ಮಾಸ್ಟರ್ ಮೈಂಡ್ ಟ್ರೇನಿಂಗ್ ತರಬೇತಿಯಲ್ಲಿ ಅವರ ಮಾನಸಿಕ ಸ್ಥಿತಿ ಸ್ಥಿರವಾಗಿರಲು ,ಹಲವಾರು ಚಟುವಟಿಕೆಗಳನ್ನು ಆರಂಭಿಸಿ ಅದರಿಂದ ಮುಕ್ತ ಮಾಡಿದ್ದಾರೆ… ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡು ಯಶಸ್ವಿ ವ್ಯಕ್ತಿಗಳನ್ನು ನಿರ್ಮಾಣ ಮಾಡಲು ಪ್ರಯತ್ನಿಸುತ್ತಿದ್ದಾರೆ…