ಹುಬ್ಬಳ್ಳಿ,ಜು.23: ಬೆಳಗಾವಿಯ ಪ್ರತಿಷ್ಠಿತ ಕೆ.ಎಲ್.ಇ. ಸಂಸ್ಥೆಯ ಸಂಸ್ಥಾಪಕ ಸಪ್ತರ್ಷಿಗಳಲ್ಲಿ ಒಬ್ಬರಾಗಿರುವ, ಶಿಕ್ಷಣ ತಜ್ಞ ಡಾ.ಎಚ್.ಎಫ್. ಕಟ್ಟಿಮನಿ ಅವರ 137ನೇ ಜಯಂತಿ ಕಾರ್ಯಕ್ರಮ ನಗರದ ಬಿ.ವ್ಹಿ.ಬಿ. ಕಾಲೇಜು ಆವರಣದಲ್ಲಿರುವ ಕೆ.ಎಲ್.ಇ. ಸಂಸ್ಥೆಯ ಎಚ್.ಎಫ್.ಕಟ್ಟಿಮನಿ ಪೂರ್ವ ಪ್ರಾಥಮಿಕ, ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಜಂಟಿ ಆಶ್ರಯದಲ್ಲಿ ಜುಲೈ 24 ರಂದು (ಸೋಮವಾರ) ಮುಂಜಾನೆ 11 ಗಂಟೆಗೆ ಜರುಗಲಿದೆ.
ಡೆಪ್ಯೂಟಿ ಚೆನ್ನಬಸಪ್ಪ ಕನ್ನಡ ವಿಕಾಸ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಡಾ. ಗುರುಮೂರ್ತಿ ಯರಗಂಬಳಿಮಠ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದು, ಶಾಲಾ ಸ್ಥಾನಿಕ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಎಂ. ಎಸ್. ಮುನವಳ್ಳಿ ಅಧ್ಯಕ್ಷತೆವಹಿಸುವರು. ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯರುಗಳಾದ ಬಿ.ಐ. ಬಿಜಾಪೂರ, ಎಂ.ಬಿ.ಕರಡಿ ಹಾಗೂ ಜೆ.ಜಿ. ಶಿಕ್ಚಕರ ತರಬೇತಿ ಸಂಸ್ಥೆಯ ಪ್ರಾಚಾರ್ಯ ಬಿ.ಬಿ. ನಾಯಕ ಅತಿಥಿಗಳಾಗಿ ಪಾಲ್ಗೊಳ್ಳುವರು.
ರಾಜ್ಯದಲ್ಲಿ ಅನೇಕ ವಿದ್ಯಾ ಸಂಸ್ಥೆಗಳ ಆರಂಭಕ್ಕೆ ನಿರಂತರ ಶ್ರಮಿಸಿರುವ ಡಾ.ಎಚ್.ಎಫ್. ಕಟ್ಟಿಮನಿ ಅವರ ಸೇವೆಯ ಸ್ಮರಣೆಯಲ್ಲಿ ಎಲ್ಲರೂ ಪಾಲ್ಗೊಳ್ಳಬೇಕೆಂದು ಮುಖ್ಯಾಧ್ಯಾಪಕಿ ಲಕ್ಷ್ಮವ್ವ ಗ. ಗಾಣಿಗೇರ ಹಾಗೂ ಮುಖ್ಯಾಧ್ಯಾಪಕ ಆರ್.ಆರ್. ಶಿರೂರ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಧಾರವಾಡದಲ್ಲಿ : ಇಲ್ಲಿಯ ಡಯಟ್ ಆವರಣದಲ್ಲಿರುವ ಡಾ. ಎಚ್. ಎಫ್. ಕಟ್ಟಿಮನಿ ಪ್ರೌಢ ಶಿಕ್ಷಣ ಪ್ರತಿಷ್ಠಾನದಲ್ಲಿ ಸೋಮವಾರ (ಜು.24) ಮುಂಜಾನೆ 11 ಗಂಟೆಗೆ ಡಾ. ಕಟ್ಟಿಮನಿ ಅವರ 137ನೇ ಜಯಂತಿ ಹಮ್ಮಿಕೊಳ್ಳಲಾಗಿದೆ. ಪ್ರತಿಷ್ಠಾನದ ಗೌರವ ನಿರ್ದೇಶಕ ಎಸ್.ಬಿ. ಕೊಡ್ಲಿ ಅಧ್ಯಕ್ಷತೆಯಲ್ಲಿ ನಡೆಯುವ ಸರಳ ಸಮಾರಂಭದಲ್ಲಿ ಹಿರಿಯ ಶಿಕ್ಷಣ ತಜ್ಞ ಶಿವಶಂಕರ ಹಿರೇಮಠ, ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳಾದ ಪಾರ್ವತಿ ವಸ್ತ್ರದ, ಸುಜಾತಾ ತಿಮ್ಮಾಪೂರ, ಡಾ.ರೇಣುಕಾ ಅಮಲಝರಿ, ವಿಜಯಲಕ್ಷ್ಮಿ ಅರ್ಕಸಾಲಿ, ಶಾಂತಾ ಮೀಸಿ, ಬಿ.ಸಿ. ಭಜಂತ್ರಿ ಅತಿಥಿಗಳಾಗಿ ಭಾಗವಹಿಸುವರೆಂದು ಸಂಚಾಲಕಿ ವ್ಹಿ.ಎನ್. ಕೀರ್ತಿವತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.