ನಾಳೆ ಶಾಸಕ ನಾಗೇಶ್ ಕಾಂಗ್ರೇಸ್ ಸೇರ್ಪಡೆ

ಕೋಲಾರ, ಜ,೧೩- ಜ.೧೪ರಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗುವೆ ಎಂದು ಮುಳಬಾಗಿಲು ಪಕ್ಷೇತರ ಶಾಸಕ ಹೆಚ್.ನಾಗೇಶ್ ಹೇಳಿಕೆ ನೀಡಿದರು.
ಮುಳಬಾಗಿಲಿನಲ್ಲಿ ಸುದ್ಧಿಗಾರರೊಂದಿಗೆ ಅವರು ಮಾತನಾಡಿ, ಈಗಾಗಲೇ ಜ.೯ ರಂದು ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ತಾನಕ್ಕೆ ರಾಜಿನಾಮೆ ನೀಡಿದ್ದೇನೆ, ಬೆಂಗಳೂರಿನ ಮಹದೇವಪುರ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಹೆಚ್.ನಾಗೇಶ್ ನುಡಿದ ಅವರು ಕಾಂಗ್ರೆಸ್ ಹೈಕಮಾಂಡ್ ಎಲ್ಲಿ ಸ್ಪರ್ಧೆ ಮಾಡಿ ಅಂದರು, ನಾನು ಸಿದ್ದನಿದ್ದೇನೆ, ಸದ್ಯಕ್ಕೆ ಬಿಜೆಪಿ ಸರ್ಕಾರದ ವಿರುದ್ದ ಏನೂ ಮಾತಾಡಲ್ಲ ಎಂದರು.
ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ರಾಜೀನಾಮೆ ನೀಡಿರುವ ವಿಚಾರ ನಾನು ಯಾರೊಂದಿಗೂ ಚರ್ಚೆ ಮಾಡಿಲ್ಲ, ಕೋಲಾರದಿಂದ ಮಾಜಿ ಸಿಎಂ ಸಿದ್ದ ರಾಮಯ್ಯ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿದ್ದಂತೆ ಹೈ ಕಮಾಂಡ್ ಹೇಳೋವರೆಗೂ ಯಾವುದೇ ಅಂತಿಮವಿಲ್ಲ, ಇದು ಸಿದ್ದರಾಮಯ್ಯ ಹಾಗು ಎಲ್ಲರಿಗೂ ಅನ್ವಯಿಸುತ್ತೆ ಎಂದು ತಿಳಿಸಿದರು.