ನಾಳೆ ಶಫರ್ಡ್ ಇಂಡಿಯಾ ಇಂಟರ್ ನ್ಯಾಷನಲ್ ನಿಂದ ಸಭೆ 

ಸಂಜೆವಾಣಿ ವಾರ್ತೆ

ದಾವಣಗೆರೆ: ಶೆಫರ್ಡ್ಸ್ ಇಂಡಿಯಾ ಇಂಟರ್ ನ್ಯಾಷನಲ್ ವತಿಯಿಂದ  ಮಾಜಿ ಮಂತ್ರಿಗಳಾದ ಎಚ್. ವಿಶ್ವನಾಥ್ ಹಾಗೂ ಎಚ್.ಎಂ. ರೇವಣ್ಣ  ನೇತೃತ್ವದಲ್ಲಿ ಸೆ. ೨೪ ರಂದು ಮಧ್ಯಾಹ್ನ ೩ಗಂಟೆಗೆ ದಾವಣಗೆರೆಯ ಗುರುಭವನದಲ್ಲಿ ವಿಶೇಷ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯದರ್ಶಿ ಜಿ.ಎಸ್. ಕುಮಾರ್ ಗೌಡ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಕುರುಬ  ಸಮುದಾಯದ ಸಂಘಟನೆಯ ದೃಷ್ಟಿಯಿಂದ ಈ ಸಭೆಯನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.ಅಲ್ಲದೆ, ಅ. ೨-೩ ಬೆಳಗಾವಿಯಲ್ಲಿ ರಾಷ್ಟ್ರೀಯ ಬೃಹತ್ ಸಮಾವೇಶ. ಹಮ್ಮಿಕೊಂಡಿದ್ದು, ಮುಖ್ಯಮಂತ್ರಿ  ಸಿದ್ದರಾಮಯ್ಯ ಅವರಿಗೆ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದರ ಪೂರ್ವಭಾವಿಯಾಗಿ ಸೆ.೨೪ ರಂದು ಶಿವಮೊಗ್ಗ ಹಾಗೂ ಚಿಕ್ಕಮಗಳೂರಿನ ಕುರುಬರ ಹಾಸ್ಟಲ್ ನಲ್ಲಿ ಬೆಳಗ್ಗೆ ೧೦.೩೦ ಕ್ಕೆ ಮತ್ತು ಮಧ್ಯಾಹ್ನ ೩ ಗಂಟೆಗೆ ದಾವಣಗೆರೆಯ ಗುರುಭವನದಲ್ಲಿ  ಸಭೆ ಕರೆಯಲಾಗಿದೆಈ ಸಭೆಗೆ ಸಮಾಜ ಬಾಂಧವರು ಸಮಾಜದ ಎಲ್ಲಾ ಸಂಘಟನೆಯ ಪದಾಧಿಕಾರಿಗಳು ಹೆಚ್ವಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್ ಗೋಣೆಪ್ಪ,ಜಿ.ಸಿ ಲಿಂಗರಾಜ್,ವೆಂಕಟೇಶ್, ಎಸ್ ಎಸ್ ಗಿರೀಶ್,ಹೆಚ್.ಜಿ ನಿಂಗರಾಜ್,ಶ್ರೀನಿವಾಸ್, ಎಂ.ಮನು,ರಾಮು,ರಮೇಶ್ ಉಪಸ್ಥಿತರಿದ್ದರು.