ನಾಳೆ ವ್ಹೀಲ್‍ಚೇರ್ ವಿತರಣೆ

ಹುಬ್ಬಳ್ಳಿ,ಸೆ22 : ಸಾಕ್ಷರತೆಯನ್ನು ಉತ್ತೇಜಿಸಲು ವಿಕಲಚೇನ ಮಕ್ಕಳಿಗೆ ಮರಳಿ ಶಾಲೆಗೆ ಹೋಗುವುದನ್ನು ಬೆಂಬಲಿಸಲು ವ್ಹೀಲ್ ಚೇರ್ ವಿತರಣೆಯನ್ನು ಹುಬ್ಬಳ್ಳಿ ಧಾರವಾಡ ರೋಟರಿ ಟಾಸ್ಕ್ ಫೆÇೀರ್ಸ್ ವತಿಯಿಂದ ಸೆ. 23 ರಂದು ಬೆ. 11 ಗಂಟೆಗೆ ಧಾರವಾಡದ ಡಯಟ್ ನೇಗಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮದ ಸಂಚಾಲಕ ಗಣೇಶ ಭಟ್ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಳ್ನಾವರ ಪ್ರವಾಹದ ಸಂದರ್ಭದಲ್ಲಿ ಅನೇಕ ಸಹಾಯಗಳನ್ನು ಮಾಡಿದ್ದು, ಇದೀಗ ಶಿಕ್ಷಣ ಇಲಾಖೆಯ ಕರೆಗೆ ಸ್ಪಂದಿಸಿ ರೋಟರಿ ಇಂಡಿಯಾ ಸಾಕ್ಷರತಾ ಮಿಷನ್ ನಿಂದ ಅನುಮತಿ ಮತ್ತು ಅನುಮೋದನೆ ಪಡೆದು ಹು-ಧಾ ರೋಟರಿ ಕ್ಲಬ್ ಗಳ ಬೆಂಬಲದೊಂದಿಗೆ 90 ವ್ಹೀಲ್ ಕುರ್ಚಿಗಳನ್ನು ನೀಡಲಾಗಿದೆ ಎಂದರು.
ಕಾರ್ಯಕ್ರಮದ ಉದ್ಘಾಟನೆಯನ್ನು ರೋಟರಿಯನ್ ಜಿಲ್ಲಾ ಗೌರ್ನರ್ ವೆಂಕಟೇಶ ದೇಶಪಾಂಡೆ, ನಾಸೀರ್, ಡಿಡಿಪಿಐ ಎಸ್. ಎಸ್. ಕೆಳದಿಮಠ, ಪ್ರಾಚಾರ್ಯ ಎನ್.ಕೆ. ಸಹೌಕರ್, ಬಿಇಓ ಗ್ರಾಮೀಣ ಉಮೇಶ ಬಮ್ಮಕ್ಕನವರ್, ಬಿಇಓ ನಗರ ಗಿರೀಶ್ ಪದಕಿ ನೆರವೇರಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಗಿರೀಶ ನಲವಡಿ, ಡಾ. ರೇಣುಕಾ ಸಾಳಂಕೆ, ದೀಪಾ ಮೆಹ್ತಾ, ಜಿತೇಶ್ ಪಾಂಚಾಲ್, ವಿಜಯಕುಮಾರ್ ಪಾಟೀಲ್, ಅನೀಶ್ ಪೂಜೆ ಉಪಸ್ಥಿತರಿದ್ದರು.