ಚಿಕ್ಕಬಳ್ಳಾಪುರ.ಜು೨೯:ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ದತ್ತಿ ಎಂದು ಖ್ಯಾತಿಗಳಿಸಿರುವ ಹಾಗೂ ಹಲವಾರು ಶಿಕ್ಷಣ ಸಂಸ್ಥೆಗಳನ್ನು ನಿರ್ವಹಣೆ ಮಾಡುತ್ತಿರುವ ಕೆ.ವಿ .ಮತ್ತು ಪಂಚಗಿರಿ ಶಿಕ್ಷಣ ದತ್ತಿಗಳ ವತಿಯಿಂದ ನಾಳೆ ಜುಲೈ ೩೦ ರಂದು ೨೭ನೇ ದತ್ತಿ ದಿನಾಚರಣೆ ಹಾಗೂ ದತ್ತಿಗಳ ಸಂಸ್ಥಾಪಕ ಅಧ್ಯಕ್ಷರಾದ ಸಿ.ವಿ. ವೆಂಕಟರಾಯಪ್ಪ ೧೦೮ನೇ ಜಯಂತಿ ಕಾರ್ಯಕ್ರಮದ ಆಚರಣೆಗೆ ಸಕಲ ಸಿದ್ಧತೆಗಳು ಮಾಡಿಕೊಳ್ಳಲಾಗಿದೆ ಎಂದು ಕೆ.ವಿ. ಮತ್ತು ಪಂಚಗಿರಿ ಶಿಕ್ಷಣ ದತ್ತಿಗಳ ಅಧ್ಯಕ್ಷ ಕೆ. ವಿ. ನವೀನ್ ಕಿರಣ್ ತಿಳಿಸಿದರು.
ಈ ಕುರಿತು ಮಾತನಾಡಿದ ಅವರು ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಶಿಕ್ಷಣದಿಂದ ಅಭಿವೃದ್ಧಿ ಸಾಧ್ಯ ಎಂಬ ತತ್ವವನ್ನು ದಶಕಗಳ ಹಿಂದೆ ದತ್ತಿ ಸಂಸ್ಥಾಪಕರಾದ ಸಿ.ವಿ. ವೆಂಕಟರಾಯಪ್ಪ ಅವರು ಅರಿತು ಅನೇಕ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿ ಚಿಕ್ಕಬಳ್ಳಾಪುರಕ್ಕೆ ಶೈಕ್ಷಣಿಕವಾಗಿ ಒಂದು ಉತ್ತಮ ಇತಿಹಾಸವನ್ನು ನಿರ್ಮಿಸಿದರು. ತತ್ವ ಸಮಾಜದಲ್ಲಿ ಮೇಲು ಕೇಳು ಎಂಬ ತಾರತಮ್ಯ ಇಲ್ಲದೆ ವಸುದೈವ ಕುಟುಂಬಕಂ ಎಂಬಂತಿದ್ದು ಈ ವಿದ್ಯಾ ಸಂಸ್ಥೆಗಳಲ್ಲಿ ಉದ್ಯೋಗ ಮಾಡುವ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳಲ್ಲಿ ಏಕತಾಮನೋಭಾವ ಉಂಟು ಮಾಡಲು ದಿನಾಚರಣೆ ಆರಂಭಿಸಿದರು ಅದನ್ನು ಪ್ರತಿವರ್ಷ ಶ್ರೀ ಸಿ .ವಿ. ವೆಂಕಟರಾಯಪ್ಪರವರ ಜನ್ಮದಿನವಾದ ಜುಲೈ ೩೦ ರಂದು ಆಚರಿಸಿಕೊಂಡು ಬರುತ್ತಿದ್ದೇವೆ ಎಂದರು.
ಪ್ರತಿ ದಿನಾಚರಣೆಯ ಜುಲೈ ೩೦ ರಲ್ಲಿ ಒಂದು ತಿಂಗಳ ಕಾಲ ಒಂದಲ್ಲ ಒಂದು ಸಾಮಾಜಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದೇವೆ ದತ್ತಿಯ ಎಲ್ಲಾ ವಿದ್ಯಾ ಸಂಸ್ಥೆಗಳ ಸಿಬ್ಬಂದಿ ವರ್ಗಕ್ಕೆ ಮತ್ತು ವಿದ್ಯಾರ್ಥಿಗಳಿಗೆ ಹಾಗೂ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸುವುದು ಕ್ರೀಡಾ ವಿಭಾಗದಲ್ಲಿ ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆನಿಸಿರುವ ಪತ್ರಿಕಾ ರಂಗದ ಜಿಲ್ಲಾ ಕೇಂದ್ರದ ಪ್ರತಿನಿಧಿಗಳಿಗೆ ಆಟೋಟ ಸ್ಪರ್ಧೆ ಏರ್ಪಡಿಸುವುದು ರಕ್ತಧಾನ ಶಿಬಿರ ನಿರ್ವಹಣೆ ಮಾಡುವುದು ಸ್ವಚ್ಛತಾ ಅಭಿಯಾನ ದತ್ತಿಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತಿ ಪಡೆದವರಿಗೆ ಸನ್ಮಾನ ಸಿ.ವಿ. ವೆಂಕಟರಾಯಪ್ಪ ಒಡನಾಡಿಗಳಿಗೆ ಸತ್ಕಾರ ಗುರುಕುಲಶ್ರಮದ ಮಕ್ಕಳಿಗೆ ವಸ್ತ್ರದಾನ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಣೆ ನಗರದಲ್ಲಿ ಸ್ವಚ್ಛತಾ ಅಭಿಯಾನ ಹೀಗೆ ವಿಶೇಷ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದೇವೆ ಎಂದರು.
ನಾಳೆ ಬೆಳಗ್ಗೆ ನಗರದ ಹೊರವಲಯದ ಸಿ.ವಿ. ವೆಂಕಟರಾಯಪ್ಪ ಶಿಕ್ಷಣ ಕೇಂದ್ರದಲ್ಲಿರುವ ಶ್ರೀ ಸರ್ವ ವಿಘ್ನ ನಿವಾರಕ ಮಹಾ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ವೆಂಕಟರಾಯಪ್ಪ ಮತ್ತು ಅವರ ಧರ್ಮಪತ್ನಿ ಶ್ರೀಮತಿ ಸಿ.ವಿ. ಕಮಲಮ್ಮ ರವರ ಪುಣ್ಯ ಭೂಮಿಗೆ ವಿಶೇಷ ಪೂಜೆ ಒಳಗೊಂಡಂತೆ ಮುಂತಾದ ಕಾರ್ಯಗಳನ್ನು ನಡೆಸಿ ನಂತರ ಕಾರ್ಯಕ್ರಮ ನಡೆಸಲಾಗುವುದು ಎಂದರು.
ಕಾರ್ಯಕ್ರಮಗಳಿಗೆ ದತ್ತಿ ಗಳ ಆಡಳಿತ ಮಂಡಳಿ ಸದಸ್ಯರುಗಳು ಆಡಳಿತ ಅಧಿಕಾರಿಗಳು ಒಳಗೊಂಡಂತೆ ಎಲ್ಲಾ ಸಿಬ್ಬಂದಿ ವರ್ಗ ಅಭಿಮಾನಿಗಳ ಸಹಕಾರ ಬಹಳ ಮುಖ್ಯವಾಗಿ ದೊರೆತಿರುವುದು ತುಂಬಾ ಸಂತೋಷದ ವಿಷಯವಾಗಿದೆ ಎಂದರು.