ನಾಳೆ ವೇಳೆಗೆ ೧.೧ ಕೋಟಿ ಲಸಿಕೆ ಪೂರೈಕೆ


ನವದೆಹಲಿ, ಜ. ೧೩- ಕೊರೊನಾ ಸೋಂಕಿಗೆ ಲಸಿಕೆ ಹಾಕುವ ಕಾರ್ಯ ಇದೇ ತಿಂಗಳ ೧೬ ರಂದು ಆರಂಭವಾಗುವ ಹಿನ್ನೆಲೆಯಲ್ಲಿ ನಾಳೆ ವೇಳೆಗೆ ೧.೧ ಕೋಟಿ ಡೋಸ್ ಲಸಿಕೆ ದೇಶಾದ್ಯಂತ ಪೂರೈಕೆಗೆ ಅಗತ್ಯ ವ್ಯವಸ್ಥೆ ಮಾಡಲಾಗಿದೆ.
ಈಗಾಗಲೇ ೫೪.೭೨ ಲಕ್ಷ ಡೋಸ್ ಲಸಿಕೆ ದೇಶದ ೧೩ ನಗರಗಳಿಗೆ ತಲಿಪಿದ್ದು ಇನ್ನುಳಿದ ಲಸಿಕೆ ನಾಳೆ ವೇಳೆಗೆ ತಲುಪಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಇಂದು ಮತ್ತೆ ನಾಳೆಯು ಲಸಿಕೆ ವಿತರಣೆ ಕಾರ್ಯ ನಡೆಯಲಿದ್ದು ಜನವರಿ ೧೬ರಿಂದ ಲಸಿಕೆ ಹಾಕುವ ಕಾರ್ಯ ನಡೆಯಲಿದೆ.
ಈಗಾಗಲೇ ಚೆನ್ನೈ, ಕೊಲ್ಕತ್ತಾ, ಬೆಂಗಳೂರು, ಗುವಾಹಟಿ, ಶಿಲಾಂಗ್, ಹೈದರಾಬಾದ್, ವಿಜಯವಾಡ, ಭುವನೇಶ್ವರನಗರ, ಪಾಟ್ನಾ, ಲಕ್ನೋ ಚಂಡಿಘಡ, ಮುಂಬೈ, ಸೇರಿದಂತೆ ವಿವಿಧ ನಗರಗಳಿಗೆ ಲಸಿಕೆ ಪೂರೈಕೆ ಮಾಡಲಾಗಿದ್ದು ಇಂದು ಮತ್ತು ನಾಳೆ ಒಳಗೆ ದೇಶದ ಎಲ್ಲ ರಾಜ್ಯಗಳಿಗೆ ಲಸಿಕೆ ಪೂರೈಕೆ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ.
ದೇಶದ ೪ ಕಡೆ ಬೃಹತ್ ಲಸಿಕ ಸಂಗ್ರಹ ವ್ಯವಸ್ಥೆ ಮಾಡಲಾಗಿದೆ. ಅದರಲ್ಲಿ ಕರ್ನಲ್, ಕೊಲ್ಕತ್ತಾ, ಚೆನ್ನೈ ಮತ್ತು ಮುಂಬೈನಲ್ಲಿ ಲಸಿಕೆ ಸಂಗ್ರಹಕ್ಕೆ ವ್ಯವಸ್ಥೆ ಮಾಡಲಾಗಿದ್ದು ಅಲ್ಲಿಂದ ಇತರೆ ರಾಜ್ಯಗಳಿಗೆ ಪೂರೈಕೆ ಮಾಡಲು ಉದ್ದೇಶಿಸಲಾಗಿದೆ.
ಪ್ರತಿ ರಾಜ್ಯದಲ್ಲಿ ಒಂದು ಪ್ರಾದೇಶಿಕ ಲಸಿಕೆ ಸಂಗ್ರಹ ಕೇಂದ್ರವನ್ನು ತೆರೆಯಲು ಉದ್ದೇಶಿಸಲಾಗಿದೆ. ಜೊತೆಗೆ ಪ್ರಾದೇಶಿಕ ಕೇಂದ್ರಗಳಿಂದ ಇತರೆ ಕೇಂದ್ರಗಳಿಗೆ ಲಸಿಕೆಯನ್ನು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರಪ್ರದೇಶದಲ್ಲಿ ೯, ಮಧ್ಯಪ್ರದೇಶ ಮತ್ತು ಗುಜರಾತ್‌ನಲ್ಲಿ ತಲಾ ನಾಲ್ಕು, ಕೇರಳದಲ್ಲಿ ೩, ಜಮ್ಮು-ಕಾಶ್ಮೀರ, ಕರ್ನಾಟಕ ಮತ್ತು ರಾಜಸ್ಥಾನದಲ್ಲಿ ೨ ಪ್ರಾದೇಶಿಕ ಲಸಿಕಾ ಕೇಂದ್ರ ತರಲಾಗಿದೆ.
೨೩೧ ಕೋಟಿ ಲಸಿಕೆ ಆರ್ಡರ್:
ಕೋವಿಶೀಲ್ಡ್ ಲಸಿಕೆ ಪ್ರತಿ ಡೋಸ್‌ಗೆ ೨೦೦ ನಿಗದಿ ಮಾಡಲಾಗಿದೆ. ಹತ್ತು ರೂಪಾಯಿಗೆ ಎಷ್ಟು ಸರಿ ೨೧೦ ರೂಪಾಯಿ ಆಗಲಿದೆ. ಇದುವರೆಗೂ ಕೇಂದ್ರ ಸರ್ಕಾರ ೨೩೧ ಕೋಟಿ ರೂಪಾಯಿ ಮೊತ್ತದ ಲಸಿಕೆ ಪಡೆಯಲು ಮುಂದಾಗಿದೆ.ಕೊವಾಕ್ಸಿನ್ ಲಸಿಕೆ ಪ್ರತಿ ಡೋಸ್ ಗೆ ೨೯೦ ರೂಪಾಯಿ ನಿಗದಿ ಮಾಡಲಾಗಿದೆ.
ಕೋವಿಶೀಲ್ಡ್, ಕೊವಾಕ್ಸಿನ್ ಲಸಿಕೆಯನ್ನು ೧.೧ಕೋಟಿ ಡೋಸ್ ಸಂಗ್ರಹ ಮಾಡಲು ಕೇಂದ್ರ ಉದ್ದೇಶಿಸಿದೆ.
ನೋಂದಣಿ: ಜನವರಿ ೧೬ರಿಂದ ಲಸಿಕೆ ವಿತರಣೆ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಆರೋಗ್ಯ ಕಾರ್ಯಕರ್ತರು ಸೇರಿದಂತೆ ಎಲ್ಲರ ನೊಂದಣಿ ಕಾರ್ಯ ಆರಂಭವಾಗಿದೆ.ಕೋ ವಿನ್ ಆಪ್ ಮೂಲಕ ಫಲಾನುಭವಿಗಳು ನೊಂದಾಯಿಸಿಕೊಂಡು ಲಸಿಕೆ ಪಡೆಯಲು ಅವಕಾಶ ಮಾಡಿಕೊಡಲಾಗಿದೆ.
ಬಹಿರಂಗಕ್ಕೆ ನಕಾರ: ಭಾರತ್ ಬಯೋಟೆಕ್‌ನಿಂದ ದೇಶದ ಯಾವ ಯಾವ ಭಾಗಗಳಿಗೆ ಲಸಿಕೆಯನ್ನು ವಿತರಣೆ ಮಾಡಲಾಗುತ್ತಿದೆ ಎನ್ನುವ ಕುರಿತು ಮಾಹಿತಿ ನೀಡಲು ನಿರಾಕರಿಸಿದೆ. ಮೊದಲ ಹಂತದಲ್ಲಿ ಯಾವ ಯಾವ ನಗರಗಳಿಗೆ ಲಸಿಕೆ ವಿತರಿಸಲಾಗುತ್ತಿದೆ ಎನ್ನುವುದನ್ನು ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಸಂಸ್ಥೆ ಖಚಿತಪಡಿಸಿದೆ

೧೫,೯೬೮ ಕೊರೋನಾ ದೃಢ
ನವದೆಹಲಿ, ಜ.೧೩- ದೇಶದಲ್ಲಿ ಹೊಸದಾಗಿ ೧೫೯೬೮ ಸೋಂಕು ಪ್ರಕರಣಗಳು ದೃಢಪಟ್ಟಿದ್ದು ಈ ಮೂಲಕ ಸೋಂಕಿತರ ಸಂಖ್ಯೆ ೧ ಕೋಟಿ ೪ ಲಕ್ಷ ೯೫ ಸಾವಿರದ ೧೪೭ಕ್ಕೆ ಏರಿಕೆ ಯಾಗಿದೆ. ಕಳೆದ ೨೪ ಗಂಟೆಗಳಲ್ಲಿ ೨೦೨ ಮಂದಿ ಮೃತಪಟ್ಟಿದ್ದು ಇದುವರೆಗೂ ಮೃತಪಟ್ಟವರ ಸಂಖ್ಯೆ ೧,೫೧,೫೨೯ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.ನಿನ್ನೆಯಿಂದ ಇಲ್ಲಿಯವರೆಗೆ ೧೭,೮೧೭ ಮಂದಿ ಚೇತರಿಸಿಕೊಂಡಿದ್ದು ಸೋಂಕಿನಿಂದ ಇದುವರೆಗೂ ೧ಕೋಟಿ ೧ ಲಕ್ಷ ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಂಕಿಅಂಶಗಳು ತಿಳಿಸಿವೆ.
೯೬.೫೧ ರಷ್ಟು ಚೇತರಿಕೆ:
ದೇಶದಲ್ಲಿ ಕೊರೋನಾ ಸೋಂಕಿನಿಂದ ಚೇತರಿಕೆ ಪ್ರಮಾಣ ಶೇಕಡ ೯೬.೫೧ ಒಂದಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ಜಗತ್ತಿನ ವಿವಿಧ ದೇಶಗಳಿಗೆ ಹೋಲಿಸಿದರೆ ಸೋಂಕಿನಿಂದ ಚೇತರಿಸಿಕೊಂಡ ಪ್ರಮಾಣ ಭಾರತದಲ್ಲಿ ಅತ್ಯಧಿಕವಿದೆ ಎಂದು ಹೇಳಿದೆ.
ದೇಶದಲ್ಲಿ ಸೋಂಕಿನಿಂದ ಮೃತಪಡುತ್ತಿರುವ ಸಂಖ್ಯೆ ಪ್ರತಿಶತ ಶೇಕಡ ೧.೪೪ ರಷ್ಟಿದೆ. ಜಗತ್ತಿನಲ್ಲಿ ಅತಿ ಕಡಿಮೆ ಪ್ರಮಾಣ ಎಂದು ಹೇಳಿದೆ.
ಸದ್ಯ ದೇಶದಲ್ಲಿ ೨ ಲಕ್ಷ ೧೪೫೦೭ ಸಕ್ರಿಯ ಪ್ರಕರಣಗಳಿವೆ. ಒಟ್ಟಾರೆ ಸೋಂಕಿನ ಪೈಕಿ ಶೇಕಡ ೨.೦೪ ರಷ್ಟು ಪ್ರಕರಣ ಇದೆ ಎಂದು ಅಂಕಿ-ಸಂಖ್ಯೆಗಳು ಮಾಹಿತಿ ನಡುವೆ ದೇಶದಲ್ಲಿ ಕಳೆದ ೨೪ ಗಂಟೆಗಳಲ್ಲಿ ೮,೩೬,೨೨೭ ಮಂದಿಗೆ ಮಾದರಿ ಪರೀಕ್ಷೆ ನಡೆಸಲಾಗಿದೆ. ಇದುವರೆಗೂ ೧೮.೩೪,೮೯,೧೧೪ ಮಂದಿಗೆ ಪರೀಕ್ಷೆ ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿದೆ

ಲಸಿಕೆ ಆಯ್ಕೆ ಇಕ್ಕಟ್ಟು
ನವದೆಹಲಿ, ಜ. ೧೩- ಲಸಿಕೆ ಸ್ವೀಕರಿಸುವವರು ತಮಗೆ ಬೇಕಾದ ಕಂಪನಿಯ ಲಸಿಕೆಯನ್ನು ಆಯ್ಕೆ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಅಥವಾ ಆಯ್ಕೆಗೆ ಅವಕಾಶ ಇಲ್ಲ ಎನ್ನಲಾಗಿದೆ. ಆಕ್ಸ್‌ಫರ್ಡ್‌ನ ಆಸ್ಟ್ರಾಜನಿಕ, ಕೋವಿಶೀಲ್ಡ್ ಮತ್ತು ಭಾರತ್ ಬಯೋಟೆಕ್‌ನ ಕೋವಾಕ್ಸಿನ್ ಲಸಿಕೆ ಹಾಕುವ ಆಂದೋಲನಕ್ಕೆ ಚಾಲನೆ ನೀಡಲು ಭಾರತ ಯೋಜನೆ ರೂಪಿಸುತ್ತಿದೆ. ಆದರೆ ಲಸಿಕೆ ಸ್ವೀಕರಿಸುವವರಿಗೆ ಈ ಎರಡು ಲಸಿಗೆಗಳಲ್ಲಿ ತಮಗೆ ಬೇಕಾದ ಲಸಿಕೆಯ ಆಯ್ಕೆ ಸಾಧ್ಯತೆ ಕಡಿಮೆ ಅಥವಾ ಲಸಿಕೆ ಆಯ್ಕೆ ಅವಕಾಶ ಇಲ್ಲ ಎನ್ನಲಾಗುತ್ತದೆ.
ಜಗತ್ತಿನ ಅನೇಕ ದೇಶಗಳು ಒಂದಕ್ಕಿಂತ ಹೆಚ್ಚು ಲಸಿಕೆಯನ್ನು ಬಳಸುತ್ತಿದೆ. ಈ ದೇಶಗಳಲ್ಲಿ ಯಾವುದೇ ಫಲಾನುಭವಿಗಳು ನಿರ್ದಿಷ್ಟ ಹೆಸರಿನ ಲಸಿಕೆಗಳು ಆಯ್ಕೆ ಲಭ್ಯವಿಲ್ಲ ಎಂದು ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಹೇಳಿದ್ದಾರೆ. ಇದು ಭಾರತದಲ್ಲಿಯೂ ಲಸಿಕೆ ಆಯ್ಕೆ ಲಭ್ಯತೆ ಸಾಧ್ಯವಾಗುವುದಿಲ್ಲ ಎನ್ನುವುದನ್ನು ಸೂಚಿಸುತ್ತಿದೆ ಎಂದಿದ್ದಾರೆ. ಆರೋಗ್ಯ ಮತ್ತು ಮಂಜೂಣಿ ಕಾರ್ಮಿಕರಿಗೆ ಲಸಿಕೆ ಆಯ್ಕೆಗೆ ಅವಕಾಶವಿದೆ ಎನ್ನುವುದು ನಿಯಮಗಳ ವಿಷಯವಾಗಿದ್ದರೂ ದೇಶದಲ್ಲಿ ಕೋವಿಡ್ ಲಸಿಕೆ ಪಡೆಯುವುದು ಸ್ವಯಂ ಪ್ರೇರಿತ ಎನ್ನಲಾಗಿದೆ.
ಲಸಿಕೆ ಡೋಸ್ ಕುರಿತಂತೆ ಮಾಹಿತಿ ನೀಡಿರುವ ಆರೋಗ್ಯ ಸಚಿವಾಲಯ ಎರಡು ಡೋಸ್‌ಗಳ ನಡುವೆ ೨೮ ದಿನಗಳ ಅಂತರವಿರಲಿದೆ. ಎರಡನೇ ಡೋಸ್ ಪಡೆದ ೧೪ನೇ ದಿನದ ನಂತರ ಅದರ ಪರಿಣಾಮ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ. ಎನ್‌ಐಟಿಐ ಆರೋಗ್ಯ ಆಯೋಗ್ ಸದಸ್ಯ ಡಾ. ವಿ.ಕೆ. ಪಾಲ್ ಮತ್ತು ಭೂಷಣ್ ಲಸಿಕೆ ಸಂಬಂಧ ಸುರಕ್ಷಿತಾ ನಡವಳಿಕೆ ಕಾಪಾಡಿಕೊಳ್ಳುವ ಅಗತ್ಯವಿದೆ.
ಕಳೆದ ವಾರ ಭಾರತದಲ್ಲಿ ಕೋವಿಡ್ ಪ್ರಕರಣ ಶೇ. ೨ ರಷ್ಟು ಕಡಿಮೆಯಾಗಿದೆ. ಕೇರಳ ಮತ್ತು ಮಹಾರಾಷ್ಟ್ರದಲ್ಲಿ ೫೦ಕ್ಕಿಂತ ಹೆಚ್ಚು ಸಕ್ರಿಯ ಪ್ರಕರಣಗಳು ಇವೆ ಎಂದು ತಿಳಿಸಿದ್ದಾರೆ. ಅನುಮೋದನೆಗೊಂಡಿರುವ ಎರಡು ಲಸಿಕೆಗಳು ಸುರಕ್ಷಿತವಾಗಿದೆ ಎನ್ನುವ ಕುರಿತಂತೆ ಯಾವುದೇ ಸಂದೇಶವಿಲ್ಲ ಈ ಎರಡು ಲಸಿಕೆಗಳ ಸಾವಿರಾರು ಜನರ ಮೇಲೆ ಪ್ರಯೋಗಗಳು ಮಾಡಿವೆ. ಅಡ್ಡ ಪರಿಣಾಮಗಳು ತೀರಾ ಕಡಿಮೆಯಿದೆ. ಯಾವುದೇ ಮಹತ್ವದ ಅಪಾಯವಿಲ್ಲ. ಆದ್ದರಿಂದ ಲಸಿಕೆ ಹಾಕುವ ಮೊದಲು ಮತ್ತು ನಂತರ ಕೋವಿಡ್ ಸೂಕ್ತ ನಡವಳಿಕೆಗಳನ್ನು ಕಾಯ್ದೆ ಕೊಳ್ಳುವುದು ಕಡ್ಡಾಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.