ನಾಳೆ ವೀರಶೈವ ಲಿಂಗಾಯಯ ಸಮಾಜದ ಸನ್ಮಾನ ಕಾರ್ಯಕ್ರಮ

ಚಿಂಚೋಳಿ,ಸೆ.19- ತಾಲೂಕಿನ ವೀರಶೈವ ಲಿಂಗಾಯತ ಸಮಾಜದ ವತಿಯಿಂದ ನಾಳೆ ಸೆ. 20ರ ಬೆಳಗ್ಗೆ 11 ಗಂಟೆಗೆ ತಹಸಿಲ್ ಕಾರ್ಯಾಲಯ ಅವನದಲ್ಲಿರುವ ದಿವಂಗತ ದೇವರಾಜ್ ಅರಸು ಭವನದಲ್ಲಿ ಆಯೋಜಿಸಿದ ವೀರಶೈವ ಲಿಂಗಾಯತ ಸಮಾಜದ ವಿದ್ಯಾರ್ಥಿಗಳ ಪ್ರತಿಭಾಪುರಸ್ಕಾರ ಮತ್ತು ಸಮಾಜದ ಜನಪ್ರತಯಿನಿಧಿಗಳ, ಅಧಿಕಾರಿಗಳ ಸನ್ಮಾನ ಕಾರ್ಯಕ್ರಮಕ್ಕೆ ಕಲ್ಬುರ್ಗಿ ವೀರಶೈವ ಸಮಾಜದ ಜಿಲ್ಲಾ ಅಧ್ಯಕ್ಷರಾದ ಡಾ.ಅರುಣ ಕುಮಾರ ಎಸ್ ಪಾಟೀಲ ಕೊಡಲಹಂಗರಗ
ಅವರು ಚಾಲನೆ ನೀಡುವರು.
ಸಮಾಜದ ದ್ವಿತೀಯ ಪಿಯುಸಿ ಮತ್ತು ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳ ಸಮಾಜದ ನೂತನ ಅಧ್ಯಕ್ಷ ಉಪಾಧ್ಯಕ್ಷರು, ಸಮಾಜದ 5 ವೈದ್ಯರಿಗೆ ಈ ಕಾರ್ಯಕ್ರಮದಲ್ಲಿ ವಿಶೇಷ ಸನ್ಮಾನ ಜರುಗಲಿದೆ.
ಸಮಾರಂಭದ ದಿವ್ಯ ಸಾನಿಧ್ಯವನ್ನು ಪೂಜ್ಯ ಶ್ರೀ. ಷ.ಬ್ರ. ಕರುಣೇಶ್ವರ ಶಿವಾಚಾರ್ಯರು ನಂದಿಶ್ವರ ಮಠ ಕಂಚಾಳಕುಂಟಿ, ನಿಡಗುಂದಾ, ಪೂಜ್ಯ ಶ್ರೀ. ಷ.ಬ್ರ. ವಿಜಯಮಹಾಂತ ಶಿವಾಚಾರ್ಯರು ಸಿದ್ಧರಾಮೇಶ್ವರ ಹಿರೇಮಠ, ಚಿಮ್ಮಾಣದಲಾಯಿ, ಶ್ರೀ. ಮ.ನಿ.ಪ್ರ.ಸಿದ್ದಾರಾಮ. ಮಾಹಾಸ್ವಾಮಿಗಳು.ವೀರಕ್ತಮಠ. ರಟಕಲ. ಸಾನಿಧ್ಯವನ್ನು ವಹಿಸುವರು.
ಸಮಾರಂಭದ ಅಧ್ಯಕ್ಷತೆಯನ್ನು ಚಿಂಚೋಳಿ ತಾಲೂಕ ವೀರಶೈವ ಲಿಂಗಾಯತ ಸಮಾಜದ ಗೌರವಾಧ್ಯಕ್ಷರಾದ ರಮೇಶ್ ಪಡೆಶೆಟ್ಟಿ, ವಹಿಸುವರು, ಮುಖ್ಯ ಅತಿಥಿಗಳಾಗಿ ಕಲ್ಬುರ್ಗಿ ವೀರಶೈವ ಸಮಾಜದ ಜಿಲ್ಲಾ ಉಪಾಧ್ಯಕ್ಷರಾದ ಕಲ್ಯಾಣಪ್ಪ ಪಾಟೀಲ ಮಳಖೇಡ, ಸಂಗಮೇಶ ನಾಗನಹಳ್ಳಿ, ಕಾರ್ಯಕ್ರಮದ ಅತಿಥಿಗಳಾಗಿ ಚಿಂಚೋಳಿಯ ವೀರಶೈವ ಲಿಂಗಾಯತ ಸಮಾಜದ ಹಿರಿಯ ಮುಖಂಡರಾದ ವಿಶ್ವನಾಥ ಪಾಟೀಲ ಪೆÇೀಲಕಪಳ್ಳಿ, ರೇವಣಸಿದ್ದಪ್ಪ ದಾದಾಪೂರ್, ಸೋಮಯ್ಯ ಮಠಪತಿ, ಬಸವರಾಜ ಬೆಳಕೇರಿ, ಶಂಕರ ಗೌಡ ಅಲ್ಲಪೂರ, ಕಾಳಗಿ ವೀರಶೈವ ಲಿಂಗಾಯತ ಸಮಾಜದ ತಾಲೂಕ ಅಧ್ಯಕ್ಷರಾದ ರೇವಣಸಿದ್ದ ಬಡ, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ ಎಂದು ಚಿಂಚೋಳಿ ತಾಲೂಕಿನ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷರಾದ ಸಂಜೀವಕುಮಾರ ಪಾಟೀಲ, ಅವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ