ನಾಳೆ ವೀರಶೈವ ಲಿಂಗಾಯತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಅರಕೇರಾ.ಜು.೩೦- ದೇವದುರ್ಗ ತಾಲೂಕ ವೀರಶೈವ ಲಿಂಗಾಯತ ಸಮಾಜದವತಿಯಿಂದ ೨೦೨೧-೨೦೨೨ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ದ್ವೀತಿಯವರ್ಷದಲ್ಲಿ ಶೇ ೯೦% ರಷ್ಟು ಅಧಿಕ ಅಂಕ ಪಡೆದು ಪಾಸಾದ ವೀರಶೈವ ಲಿಂಗಾಯತ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸಮಾಜಸವತಿಯಿಂದ ಅಭಿನಂಧಿಸುವ ಪ್ರತಿಭಾ ಪುರಸ್ಕಾರಕಾರ್ಯಕ್ರಮವನ್ನು ದಿನಾಂಕ ೩೧- ೭- ೨೦೨೨ ರಂದು ಭಾನುವಾರದಂದು ಬೆಳಿಗ್ಗೆ ೧೦ ಗಂಟೆಗೆ ಬಿ.ಹೆಚ್.ಮೆಮೋರಿಯಲ್ ಫಂಕ್ಷನ ಹಾಲ್ ಶಹಾಪೂರು ರಸ್ತೆ ದೇವದುರ್ಗದಲ್ಲಿ ಹಮ್ಮಿಕೊಳ್ಳಲಾಗಿದೆಂದು ಡಾ|| ಕಿರಣ್ ಖೇಣೆದ ಅಧ್ಯಕ್ಷರು ದೇವದುರ್ಗ ತಾಲ್ಲೂಕ ವೀರಶೈವ ಲಿಂಗಾಯತ ಸಮಾಜ ಇವರು ತಿಳಿಸಿದ್ದಾರೆ.