ನಾಳೆ ವಿಶೇಷ ಪೂಜೆ

ಕೋಲಾರ,ಡಿ.೮: ನಗರದ ಕೋಟೆ ಪ್ರದೇಶದ ಕೋಲಾರಮ್ಮ ದೇವಾಲಯ ಪಕ್ಕದ ರಸ್ತೆಯಲ್ಲಿರುವ ಶ್ರೀ ಷಣ್ಮುಖ ಸುಬ್ರಮಣ್ಯಸ್ವಾಮಿ ದೇವಾಲಯದಲ್ಲಿ ಡಿ.೯ ರಂದು ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಡಿ. ೯ರ ಗುರುವಾರ ಸ್ಕಂದ ಗಣಪತಿ ಅಲಂಕಾರ, ಶ್ರೀ ಗಣಪತಿ ಪೂಜೆ, ಶ್ರೀ ಷಣ್ಮುಖ ಸುಬ್ರಮಣ್ಯಸ್ವಾಮಿಗೆ ವಿಶೇಷ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ವಿಶೇಷ ಪೂಜಾ ಅಲಂಕಾರ, ಆgರು ವಟುಗಳಿಗೆ ಬೋಜನಾ ಸೇವೆ, ಅನ್ನ ಸಂತರ್ಪಣೆ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗವಿರುತ್ತದೆ.
ಭಕ್ತಾಧಿಗಳು ಶ್ರೀ ಷಣ್ಮುಖ ಸುಬ್ರಮಣ್ಯಸ್ವಾಮಿಗೆ ಅಭಿಷೇಕ, ರುದ್ರಾಭಿಷೇಕ, ಹೂವಿನ ಅಲಂಕಾರ ಹಾಗೂ ಅನ್ನಸಂತರ್ಪಣೆ ಮಾಡಲಿಚ್ಚಿಸುವವರು ಎರಡು ದಿನಗಳ ಮುಂಚಿತವಾಗಿ ಅರ್ಚಕರಿಗೆ ತಿಳಿಸಬೇಕು.
ಭಕ್ತಾಧಿಗಳು ಸಕಾಲಕ್ಕೆ ಆಗಮಿಸಿ ದೇವರ ಕೃಪೆಗೆ ಪಾತ್ರರಾಗುವಂತೆ ಅರ್ಚಕ ಎಸ್. ವಿನಯಕುಮಾರ್ ದೀಕ್ಷಿತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.