ನಾಳೆ ವಿದ್ಯೋದಯ ಶಾಲಾ ಕಟ್ಟಡ ಉದ್ಘಾಟನೆ

ಸಂಜೆವಾಣಿ ನ್ಯೂಸ್
ಮೈಸೂರು, ಮೇ 22:- ನಗರದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಬಿಎಸ್‍ಎಸ್(ಭಗಿನಿ ಸೇವಾ ಸಮಾಜ) ವಿದ್ಯೋದಯ ಶಾಲಾ ಕಟ್ಟಡದ ಉದ್ಘಾಟನಾ ಕಾರ್ಯಕ್ರಮ ಮೇ 23 ರಂದು ಜರುಗಲಿದೆ ಎಂದು ವೈ.ಕೆ.ಅಮೃತಾ ಬಾಯಿ, ಎಸ್.ಕೆ. ಸುರಮಾ ಬಾಯಿ ಭÀಗಿನಿ ಸೇವಾ ಸಮಾಜ ಎಜ್ಯುಕೇಷನಲ್ ಅಂಡ್ ಕಲ್ಚರಲ್ ಟ್ರಸ್ಟ್ ಗೌರವ ಕಾರ್ಯದರ್ಶಿ ಆರ್.ವಾಸುದೇವ ಭÀಟ್ ತಿಳಿಸಿದರು.
ಸಂಸ್ಥೆಯ ಆವರಣದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಜಯ ವಿಠಲ ಶಿಕ್ಷಣ ಸಂಸ್ಥೆಯ ಅದೀನದಲ್ಲಿ ಬರುವ ಈ ಬಿಎಸ್‍ಎಸ್ ವಿದ್ಯೋದಯ ಸಂಸ್ಥೆಯ ಕಟ್ಟಡದ ಉದ್ಘಾಟನೆ ಗುರುವಾರ ಸಂಜೆ 5 ಗಂಟೆಗೆ ನೆರವೇರಿಸಲಾಗುತ್ತಿದೆ. ಕಾರ್ಯಕ್ರಮದಲ್ಲಿ ಉಡುಪಿ ಪಾಲಿಮಾರು ಮಠದ ವಿದ್ಯಾದೀಶತೀರ್ಥ ಸ್ವಾಮೀಜಿ, ಸುತ್ತೂರಿನ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹಾಗೂ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಸಾನಿಧÀ್ಯ ವಹಿಸಲಿದ್ದಾರೆ ಎಂದು ಹೇಳಿದರು.
ನೂತನ ಶಾಲಾ ಕಟ್ಟಡ ನಿರ್ಮಿಸಲು ಯಾವುದೇ ಸಾಲ ಪಡೆಯದೇ ಶೇ.50ರಷ್ಟು ಆರ್ಥಿಕ ಮೂಲವನ್ನು ದಾನಿಗಳಿಂದ ಪಡೆಯಲಾಗಿದ್ದರೆ, ಉಳಿದ ಅನುದಾನವನ್ನು ವಿಜಯವಿಠಲ ಶಾಲೆ ನೀಡಿದೆ. ಈ ಮೂಲಕ ವಿದ್ಯಾರ್ಥಿಗಳಿಗೆ ಆರ್ಥಿಕ ಹೊರೆ ತಪ್ಪಿಸಲಾಗಿದೆ. 2020ರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಈ ಶಾಲೆ ಅಳವಡಿಸಿಕೊಂಡಿದ್ದು, ಅದರಂತೆ ಕಟ್ಟಡ ನಿರ್ಮಿಸಲಾಗಿದೆ. ಹಾಗೆಯೇ ರಾಷ್ಟ್ರೀಯ ಕಟ್ಟಡ ನಿರ್ಮಾಣ ಮಂಡಳಿ ನಿಯಮದಂತೆ ಈ ಕಟ್ಟಡ ಇದ್ದು, ವಿದ್ಯಾರ್ಥಿ ಸ್ನೇಹಿಯಾಗಿ ತರಗತಿಗಳನ್ನು ರೂಪಿಸಲಾಗಿದೆ. ಈ ಶಾಲೆಯೂ ಸಂಪೂರ್ಣ ಸಿಬಿಎಸ್‍ಸಿ ಪಠ್ಯಕ್ರಮ ಹೊಂದಿರಲಿದ್ದು, ಅದಕ್ಕಾಗಿ ಅನುಮತಿ ಕೇಳಲಾಗಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜತೆಗೆ ಸಂಸ್ಕಾರ ನೀಡುವುದು ಸಂಸ್ಥೆಯ ಮುಖ್ಯ ಉz್ದÉೀಶವಾಗಿದೆ ಎಂದು ತಿಳಿಸಿದರು.
ಸಧÀ್ಯಕ್ಕೆ ನರ್ಸರಿ ಸೇರಿದಂತೆ 1ರಿಂದ 5ನೇ ತರಗತಿಗೆ ದಾಖಲಾತಿ ನಡೆಸಲಾಗುತ್ತಿದ್ದು, ಈವರೆಗೆ 150 ಮಕ್ಕಳು ದಾಖಲಾಗಿದ್ದಾರೆ. ಜತೆಗೆ 30ಕ್ಕೂ ಹೆಚ್ಚು ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗಿದೆ ಎಂದು ವಿವರಿಸಿದರು.
ವೈ.ಕೆ.ಅಮೃತಾ ಬಾಯಿ ಅವರು 1923ರಲ್ಲಿ ಮಹಿಳೆಯರ ಸಬಲೀಕರಣದ ಉz್ದÉೀಶದಿಂದ ಭಗಿನಿ ಸೇವಾ ಸಮಾಜ ಆರಂಭಿಸಿ ಟೈಲರಿಂಗ್, ಚಿತ್ರಕಲೆ, ಸಂಗೀತ ಕಲಿಸುವ ಕೆಲಸ ಮಾಡುತ್ತಾರೆ. ಬಳಿಕ ಇವರ ಮಗಳಾದ ಎಸ್.ಕೆ.ಸುರಮಾ ಬಾಯಿ ಅವರು 1963ರಲ್ಲಿ ಬಾಲಕ ಮತ್ತು ಬಾಲಕಿಯರಿಗಾಗಿ ಪ್ರಾಥಮಿಕ ಶಾಲೆ ಸ್ಥಾಪಿಸಿದರು. ಸಂಸ್ಥೆ ಕಾಲ ನಂತರ 1ರಿಂದ 10ನೇ ತರಗತಿವರೆಗೆ 1 ಸಾವಿರ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಾ ಬಂದಿತ್ತು. ಆದರೆ, ಸುರಮಾ ಬಾಯಿ ಕುಟುಂಬ ಬೆಂಗಳೂರಿಗೆ ತೆರಳುತ್ತಿದ್ದಂತೆ ಶಾಲೆಯ ದೈನಂದಿನ ಚಟುವಟಿಕೆಗಳ ಮೇಲೆ ನಿಗಾ ಇರಿಸಲು ಸಾಧ್ಯವಾಗದ ಹಿನ್ನೆಲೆ ಸುರಮಾ ಬಾಯಿ ಅವರ ಪುತ್ರಿ ಪದ್ಮಜಾ ಶ್ರೀನಿವಾಸ್ ಅವರು 2011ರಲ್ಲಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅವರು ಭÀಗಿನಿ ಸೇವಾ ಸಮಾಜ ಸಂಸ್ಥೆಯ ಜವಾಬ್ದಾರಿ ನೀಡಿದರು ಎಂದು ಮಾಹಿತಿ ನೀಡಿದರು.
ಕಟ್ಟಡ ಸಂಪೂರ್ಣವಾಗಿ ಶಿಥಿಲವಾಗಿದ್ದರಿಂದ ಶಾಲೆಯಲ್ಲಿದ್ದ ಮಕ್ಕಳನ್ನು ಪಕ್ಕದ ಶಾಲೆಗಳಿಗೆ ವರ್ಗಾಯಿಸಿ, ಕಟ್ಟಡ ತೆರವು ಮಾಡಿ 2022ರಲ್ಲಿ ಭೂಮಿ ಪೂಜೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪೇಜಾವರ ಶ್ರೀ ಭಾಗವಹಿಸಿದ್ದರು. ಸಧÀ್ಯಕ್ಕೆ ಕಟ್ಟಡ ಸಂಪೂರ್ಣವಾಗಿ ಸಿದ್ಧಗೊಂಡಿದ್ದು, ಮೆಡಿಟೇಷನ್ ಹಾಲ್, ಆಕ್ಟಿವಿಟಿ ರೂಂ, ಮೈದಾನ, ಗ್ರಂಥಾಲಯ ಹಾಗೂ ವಿಜ್ಞಾನದ ಲ್ಯಾಬ್ ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಖಜಾಂಚಿ ಎಚ್.ಟಿ.ಸ್ವರ್ಣಕುಮಾರ್, ಟ್ರಸ್ಟಿಗಳಾದ ಮುರಳಿಧÀರ ಭÀಟ್ ಇದ್ದರು.