ನಾಳೆ ವಿಕಾಸ ಸೌಹಾರ್ದ ಬ್ಯಾಂಕ್ ನ ದಾವಣಗೆರೆ ಶಾಖೆ ಆರಂಭ

ಸಂಜೆವಾಣಿ ವಾರ್ತೆ

ದಾವಣಗೆರೆ: ವಿಕಾಸ ಸೌಹಾರ್ದ ಕೊ-ಆಪರೇಟಿವ್ ಬ್ಯಾಂಕ್ ಲಿ. ನ 15 ನೇ ಶಾಖೆಯನ್ನು ನಾಳೆ ಬೆಳಗ್ಗೆ 10.15 ಕ್ಕೆದಾವಣಗೆರೆಯ ಬಿನ್ನಿ ಕಂಪನಿ ರಸ್ತೆ ಶ್ರೀ ಕೊಟ್ಟೂರೇಶ್ವರ ಆರ್ಕೆಡ್ ನಲ್ಲಿ ಆರಂಭಿಸಲಾಗುತ್ತಿದೆ ಎಂದು ಬ್ಯಾಂಕ್ ನ ವ್ಯವಸ್ಥಾಪಕ ನಿರ್ದೇಶಕ ಪ್ರಸನ್ನ ಹಿರೇಮಠ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸಪೇಟೆಯಲ್ಲಿ ವಿಕಾಸ ಬ್ಯಾಂಕ್ ಆರಂಭವಾಗಿ 27 ವರ್ಷವಾಗಿದ್ದು, ಸಹಕಾರಿ ಯಾತ್ರೆಯಲ್ಲಿ ಅನೇಕ ವಿನೂತನ ವಿಚಾರಗಳಿಗೆ, ಚಿಂತನೆಗಳಿಗೆ ಮುನ್ನುಡಿ ಬರೆಯುತ್ತಾ ಬಂದಿದೆ ಎಂದರು.ಬ್ಯಾಂಕ್ ದಾವಣಗೆರೆಯಲ್ಲಿ ಆರಂಭವಾಗುವ ಶಾಖೆಯೂ ಸೇರಿದಂತೆ 15 ಶಾಖೆಗಳನ್ನು ರಾಜ್ಯದಲ್ಲಿ ಹೊಂದಿದೆ. ಡಿಜಿಟಲೀಕರಣಗೊಂಡಿರುವ 260 ಬ್ಯಾಂಕ್ ಗಳಲ್ಲಿಯ ಟಾಪ್ 10 ಬ್ಯಾಂಕ್ ಗಳಲ್ಲಿ ವಿಕಾಸ ಬ್ಯಾಂಕ್ ಒಂದಾಗಿದೆ ಎಂದು ಸಂತಸ ಹಂಚಿಕೊಂಡರು.ಬ್ಯಾಂಕ್ ನಲ್ಲಿ ಎಲ್ಲಾ ರೀತಿಯ ಸಾಲ ಸೌಲಭ್ಯಗಳಿದ್ದು, ವರ್ಷದ 365 ದಿನವೂ ಕೂಡ ಸೇವೆಯನ್ನು ಒದಗಿಸುವ ಬ್ಯಾಂಕ್ ನಮ್ಮದಾಗಿದೆ. ಒಟ್ಟು  1355ಕೋಟಿ ರೂಪಾಯಿಗಳ ವ್ಯವಹಾರ ನಡೆಸುತ್ತಾ ಬಂದಿದ್ದು, ಗ್ರಾಹಕರ ವಿಶ್ವಾಸವನ್ನು ಉಳಿಸಿಕೊಂಡು ಬಂದಿದೆ ಎಂದರು.ನಾಳೆ ನಡೆಯುವ ಶಾಖೆಯ ಉದ್ಘಾಟನಾಕಾರ್ಯಕ್ರಮದ ಸಾನ್ನಿಧ್ಯವನ್ನು ಶ್ರೀ ಉಜ್ಜಯಿನಿ ಪೀಠದ ಶ್ರೀ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಸ್ವಾಮಿಗಳು ವಹಿಸಲಿದ್ದು, ಹೊಸಪೇಟೆ ವಿಕಾಸ ಬ್ಯಾಂಕ್ ನಾ ಅಧ್ಯಕ್ಷ ವಿಶ್ವನಾಥ ಚ. ಹಿರೇಮಠ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.ಸುದ್ದಿಗೋಷ್ಠಿಯಲ್ಲಿ, ಬ್ಯಾಂಕ್ ನ ಮಾಜಿ ಹಾಗೂ ಹಾಲಿ ನಿರ್ದೇಶಕರಾದ  ಅನಂತ್ ಜೋಶಿ, ರಮೇಶ್ ಪುರೋಹಿತ್, ಎಂ. ವೆಂಕಪ್ಪ,  ಜೆ. ಜಂಬಣ್ಣ, ಚೇತನ್ ಉಪಸ್ಥಿತರಿದ್ದರು.