ನಾಳೆ ಲಲಿತಕಲಾ ಅಕಾಡೆಮಿಯಿಂದ ಫೆಲೋಶಿಪ್ ಪ್ರದಾನ 

ದಾವಣಗೆರೆ.ಆ.೫; ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆ ಅಂಗವಾಗಿ ನಗರದ ಸರ್ಕಾರಿ ಹೈಸೂಲ್ ಮೈದಾನದಲ್ಲಿರುವ ಜಿಲ್ಲಾ ಶಿಕ್ಷಣ ತರಬೇತಿ ಕೇಂದ್ರ ಸಭಾಂಗಣದಲ್ಲಿಆ.೬ ರಂದು ಬೆಳಗ್ಗೆ ೧೦ ಕ್ಕೆ ಕರ್ನಾಟಕ ಲಲಿತಕಲಾ ಅಕಾಡೆಮಿ ವತಿಯಿಂದ ಸಾಧಕ  ಕಲಾವಿದರಿಗೆ ಫೆಲೋಶಿಪ್ ಪ್ರದಾನ ಸಮಾರಂಭವನ್ನು ಸಂಸ್ಕಾರ ಭಾರತಿ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅಕಾಡೆಮಿ ಸದಸ್ಯೆ ಲಕ್ಷ್ಮೀ ಮೈಸೂರು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆಯಲ್ಲಿ ಲಲಿತಕಲಾ ಅಕಾಡೆಮಿಯಿಂದ ಇದೇ ಮೊದಲ ಬಾರಿಗೆ ರಾಜ್ಯ ಮಟ್ಟದ ಕಲಾವಿದರಿಗೆ ಫೆಲೋಶಿಪ್ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಸಮಾರಂಭದಲ್ಲಿ ಪಿ.ಎಸ್. ಪುಂಚಿತ್ತಾಯ, ಕಲಬುರ್ಗಿಯ ಪ್ರೂ. ವಿ.ಜಿ.ಅಂದಾನಿ, ರಾಯಚೂರಿನ ಹೆಚ್.ಹೆಚ್. ಮ್ಯಾದಾರ್, ಧಾರವಾಡದ ಎನ್.ಆರ್.ನಾಯ್ಕರ್, ತುಮಕೂರಿನ ಪ್ರಭು ಹರಸೂರು ಹಾಗೂ ಮೈಸೂರಿನ ಹುಲಿ ಅವರಿಗೆ ಫೆಲೋಶಿಪ್ ಪ್ರದಾನ ಮಾಡಲಾಗುವುದು. ಪ್ರತಿ ಕಲಾವಿದರಿಗೂ೨ಲಕ್ಷ ರೂಪಾಯಿ ನಗದು ಪುರಸ್ಕಾರ ಹಾಗೂ ಸ್ಮರಣ ಫಲಕವನ್ನು ನೀಡಿ ಗೌರವಿಸಲಾಗುವುದು ಎಂದು ಮಾಹಿತಿ ನೀಡಿದರು.ಸಮಾರಂಭದಲ್ಲಿ ಅಭಿನಂದನಾ ನುಡಿಗಳನ್ನು ಹಿರಿಯ ಕಲಾವಿದರಾದ ಜಮಖಂಡಿಯ ವಿಜಯ ಸಿಂಧೂರ, ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಡಿ ಕುಂಬಾರ, ಚಿತ್ರನಟ ಹಾಗೂ ಸಂಸ್ಕಾರ ಭಾರತಿ ಅಧ್ಯಕ್ಷರಾದ  ಸುಚೇಂದ್ರ ಪ್ರಸಾದ್, ಜಿಲ್ಲಾ ಶಿಕ್ಷಕ ತರಬೇತಿ ಸಂಸ್ಥೆಯ ಉಪನಿರ್ದೇಶಕ ಹೆಚ್.ಕೆ. ಲಿಂಗರಾಜ್ ಆಡಲಿದ್ದು,ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಡಿ.ಮಹೇಂದ್ರ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.ನಂತರ  ರಾಜ್ಯಮಟ್ಟದ ದೃಶ್ಯಕಲಾ ವಿಚಾರ ಸಂಕಿರಣ ನಡೆಯಲಿದ್ದು, ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಸೌಮ್ಯಾ, ಚೌವ್ಹಾಣ್, ಡಾ. ವತ್ಸಲಾ ಮೋಹನ್, ಸುಚೇಂದ್ರ ಪ್ರಸಾದ್, ಡಾ. ವಿದ್ಯಾ ಶಿಮ್ಲಡ್ಕ, ಟಿ.ಎಸ್. ಕೃಷ್ಣಮೂರ್ತಿ ವಿವಿಧ ವಿಷಯಗಳ ಕುರಿತು ಮಾಹಿತಿ ನೀಡಲಿದ್ದಾರೆ ಎಂದು ತಿಳಿಸಿದರು.ಆ.೭ರಂದು ಸಂವಾದ ಗೋಷ್ಠಿಗಳನ್ನು ಡಾ. ಸುಭಾಷ್ ಕಮ್ಮಾರ್, ದತ್ತಾತ್ರೇಯ ಎನ್. ಭಟ್, ರಮೇಶ್ ಚಂದ್ರ, ಎ.ಎಂ. ಪ್ರಕಾಶ್, ನಡೆಸಿಕೊಡಲಿದ್ದಾರೆ ಎಂದರು.ಸಂಜೆ ೫ಗಂಟೆಗೆ ಸಮಾರೋಪ ನುಡಿಗಳನ್ನು ಯಶವಂತ ರಾವ್ ದೇಶಪಾಂಡೆ ಆಗಲಿದ್ದು, ಮುಖ್ಯ ಅತಿಥಿಗಳಾಗಿ ಡಾ. ಆರ್.ಎಲ್. ಉಮಾಶಂಕರ್, ಆಗಮಿಸಲಿದ್ದಾರೆ. ಎ. ಮಹಾಲಿಂಗಪ್ಪ ಹಾಗೂ ಆರ್. ಚಂದ್ರಶೇಖರ್ ಉಪಸ್ಥಿತರಿರುವರು ಎಂದು ವಿವರಿಸಿದರು.ಸಂಸ್ಕಾರ ಭಾರತಿ ಜಿಲ್ಲಾಧ್ಯಕ್ಷ ಎ. ಮಹಾಲಿಂಗಪ್ಪ ಮಾತನಾಡಿ, ಎರಡು ದಿನದ ವಿಚಾರ ಸಂಕಿರಣದಲ್ಲಿ ಸುಮಾರು ೧೦ಕ್ಕೂ ಹೆಚ್ಚು ಸಂಪನ್ಮೂಲ ವ್ಯಕ್ತಿಯಾಗಳು ಭಾಗವಹಿಸುತ್ತಿದ್ದು, ೬೦ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ ಎಂದರು. ದೃಶ್ಯ ಕಲೆಗೆ ಪ್ರದರ್ಶನ ಕಲೆಗಳಿಗೆ ನೀಡುವಂತೆ ಪ್ರೋತ್ಸಾಹ ನೀಡುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸಂಸ್ಕಾರ ಭಾರತಿ ಸಹ ಕಾರ್ಯದರ್ಶಿ ನಾಗಭೂಷಣ್, ಸದಸ್ಯರಾದ ತಿಪ್ಪಣ್ಣ ಉಪಸ್ಥಿತರಿದ್ದರು.