ನಾಳೆ ಲಗೋರಿ ತಂಡದ ಆಯ್ಕೆ

ಬೆಂಗಳೂರು, ಮೇ, ೨೪- ದೇಸೀಯ ಕ್ರೀಡೆ ಲಗೋರಿಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಅಮೆಚೂರು ಲಗೋರಿ ಅಸೋಸಿಯೇಷನ್ ಆಫ್ ಕರ್ನಾಟಕ ಮುಂದಾಗಿದ್ದು, ಕರ್ನಾಟಕ ರಾಜ್ಯ ಲಗೋರಿ ಜ್ಯೂನಿಯರ್ ಬಾಲಕ ಮತ್ತು ಬಾಲಕಿಯರ ಆಯ್ಕೆ ಪ್ರಕ್ರಿಯೆಯನ್ನು ಇದೇ ೨೬ ರಂದು ನಗರದ ಸರ್ಕಾರಿ ಕಲಾ ಕಾಲೇಜು ಆವರಣದಲ್ಲಿ ನಡೆಸಲಿದೆ.
ಮಹಾರಾಷ್ಟ್ರದ ರತ್ನಗಿರಿಯ ಎಸ್.ವಿ.ಜೆ.ಸಿ.ಟಿ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ೮ನೇ ರಾಷ್ಟ್ರಮಟ್ಟದ ಲಗೋರಿ ಚಾಂಪಿಯನ್‌ಶಿಪ್ ಜೂ.೨೮ರಿಂದ೩೦ರ ವರೆಗೆ ನಡೆಯಲಿದ್ದು, ರಾಜ್ಯವನ್ನು ಪ್ರತಿನಿಧಿಸುವ ಜ್ಯೂನಿಯರ್ ತಂಡವನ್ನು ಸರ್ಕಾರಿ ಕಲಾ ಕಾಲೇಜಿನ ಒಳಾಂಗಣದಲ್ಲಿ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತಿದೆ. ಅರ್ಹ ಕ್ರೀಡಾಪಟುಗಳು ಭಾಗವಹಿಸಬಹುದು ಎಂದು ಅಸೋಸಿಯೇಷನ್ ನ ಪ್ರಧಾನ ಕಾರ್ಯದರ್ಶಿ ರಾಜೇಶ್ ಬಿ.ಟಿ ಮತ್ತು ಜಂಟಿ ಕಾರ್ಯದರ್ಶಿ ಎ. ಪರಮ ಶಿವಂ ತಿಳಿಸಿದ್ದಾರೆ.
ದೇಸಿ ಆಟ ಲಗೋರಿ ಈಗಾಗಲೇ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಸ್ಥಾನ ಪಡೆದಿದ್ದು, ಬರುವ ವರ್ಷದಿಂದ ಖೇಲೋ ಇಂಡಿಯಾ ಕ್ರೀಡಾಕೂಟದಲ್ಲೂ ಲಗೋರಿ ಸ್ಥಾನ ಪಡೆಯಲಿದೆ ಎಂದು ಅವರು ಹೇಳಿದ್ದಾರೆ.