ನಾಳೆ ರೈಲ್ವೆ ಪ್ಲಾಟಫಾರಂ ಲೋಕಾರ್ಪಣೆ

ರಾಯಚೂರು,ಮಾ.೧೧- ಪ್ರಧಾನಿ ಮೋದಿಜಿಯಿಂದ ನಾಳೆ ಹುಬ್ಬಳ್ಳಿ ಸೀಕಿಂದ್ರಬಾದ್ ನಡುವಿನ ವಿಶೇಷ ರೈಲು ಓಡಾಟಕ್ಕೆ ಹಸಿರು ನಿಶಾನೆ, ಹುಬ್ಬಳ್ಳಿಯ ಅತೀ ಉದ್ದನೆಯ ರೈಲ್ವೆ ಪ್ಲಾಟಫಾರಂ ಲೋಕಾರ್ಪಣೆಯಾಗಲಿದೆ.
ಗೌರವಾನ್ಬಿತ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರು ವಿಶ್ವದಲ್ಲೇ ಅತೀ ಉದ್ದವಾದ ರೈಲ್ವೆ ಪ್ಲಾಟಫಾರಂ ಉದ್ಘಾಟನೆ ಕಾರ್ಯಕ್ರಮವು ಹುಬ್ಬಳಿ ರೈಲ್ವೆ ಜಂಕ್ಷನನಲ್ಲಿ ದಿ. ೧೨ ರಂದು ನೆರವೇರಿಸುವರೆಂದು ರೈಲ್ವೆ ಬೋರ್ಡ ಸದಸ್ಯರು ಮತ್ತು ಎಪಿಎಂಸಿ ಮಾಜಿ ಉಪಾಧ್ಯಕ್ಷರಾದ ಬಾಬುರಾವ್ ತಿಳಿಸಿದ್ದಾರೆ.
ಇದರ ಜೊತೆಗೆ ಹೊಸಪೇಟ ತೆನೈಘಾಟ ನಡುವೆ ಸಂಪೂರ್ಣವಾಗಿ ವಿದ್ಯುತೀಕರಣಗೊಂಡ ಡಬಲ್ ಲೈನ್ ಮಾರ್ಗದ ಲೋಕಾರ್ಪಣೆಯೂ ಮಾಡುವರು.ಇದರ ಜೊತೆಗೆ ಅಂದು ಮೋದಿಜೀ ಅವರು ಹುಬ್ಬಳ್ಳಿ ಸೀಕಿಂದ್ರಬಾದ ನಡುವೆ ಓಡಾಡಲಿರುವ ಹೊಸದಾದ ವಿಶೇಷ ರೈಲಿಗೆ ಹಸಿರು ನಿಶಾನೆ ತೋರುವರು.ಈ ರೈಲು ಹಾದು ಹೋಗುವ ರಸ್ತೆ ಮಾರ್ಗ.
ಬಳ್ಳಾರಿ, ಗುಂತಕಲ್ ಬೈಪಾಸ, ರಾಯಚೂರ, ಯಾದಗಿರ ಮೂಲಕ ಸೀಕಿಂದ್ರಾಬಾದಗೆ ತೆರಳುವುದು.ಇದರ ನಂಬರ್ ೦೭೩೧೯ ಆಗಿರುತ್ತದೆ.ಇದು ಹುಬಳ್ಳಿಯಿಂದ ೧೫೩೦ Pಒ ( ೩೩೦) ಕ್ಕೆ ಬಿಡುತ್ತದೆ.ರಾಯಚೂರಗೆ ರಾತ್ರಿ ೧೧ ಗಂಟೆಗೆ ಬರುವ ಇದು ಸೀಕಿಂದ್ರಾಬಾದನ್ನು ನಸುಕಿನ ಜಾವಾ ೪.೩೦ (ಂಒ) ಗಂಟೆಗೆ ತಲುಪುತ್ತದೆ.

ಈ ಎರಡು ರೈಲು ಸೌಲಭ್ಯ ಒದಗಿಸಿದ ಪ್ರಧಾನಿ ಮೋದಿ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಲಾದ ಜೋಷಿ ಮತ್ತು ರೈಲ್ವೆ ಮಂತ್ರಿ ಅಶ್ವಿನ್ ವೈಷ್ಣವ್ , ರಾಯಚೂರ ಲೋಕಸಭಾ ಸದಸ್ಯರಾದ ರಾಜಾ ಅಮರೇಶ್ವರ ನಾಯಕಗೆ ರೈಲ್ವೆ ಬೋರ್ಡ ಸದಸ್ಯರಾದ ಬಾಬುರಾವ್ ಧನ್ಯವಾದಗಳನ್ನು ಅರ್ಪಿಸಿದ್ದಾರೆ.