ನಾಳೆ ರಾಸಾಯನಿಕ ವಿಪತ್ತು ನಿರ್ವಹಣೆ ಅಣಕು ಪ್ರದರ್ಶನ

ಚಿತ್ರದುರ್ಗ.ಜು.೨೮: ಅಪಘಾತ ಹಾಗೂ ಅವಘಡಗಳು ಘಟಿಸುವುದು ಯಾರ ಗಮನಕ್ಕೂ ಬರುವುದಿಲ್ಲ. ಒಮ್ಮೆಲೇ ಘಟಿಸುತ್ತವೆ. ಇಂತಹ ಕಠಿಣ ಸಂದರ್ಭಗಳನ್ನು ಎದುರಿಸಲು ಸದಾ ಸನ್ನದ್ಧವಾಗಿರಬೇಕು. ಉತ್ತಮ ಸಂವಹನ, ಸಮನ್ವಯ ಹಾಗೂ ಸಮಚಿತ್ತದಿಂದ ಕಾರ್ಯ ನಿರ್ವಹಿಸಿದರೆ ವಿಪತ್ತು ನಿರ್ವಹಣೆ ಯಶಸ್ವಿಯಾಗುತ್ತದೆ ಎಂದು ಜಿಲ್ಲಾಧಿಕಾರಿ ಕವಿತಾ.ಎಸ್.ಮನ್ನಿಕೇರಿ ಹೇಳಿದರು.ಜಿಲ್ಲಾಧಿಕಾರಿ ಕಚೇರಿ ಎನ್.ಐ.ಸಿ ಸಭಾಂಗಣದಲ್ಲಿ,  ಸಿಸ್ಕೋ ವೆಬ್‌ಕ್ಸ್ ಮೂಲಕ ರಾಸಾಯನಿಕ ವಿಪತ್ತು ನಿರ್ವಹಣೆ ಅಣಕು ಪ್ರದರ್ಶನ ಕಾರ್ಯಕ್ರಮದ ಸಂಬAಧ ಆಯೋಜಿಸಲಾದ, ರಾಜ್ಯ ಮಟ್ಟದ ಟೇಬಲ್ ಟಾಪ್ ಅಭ್ಯಾಸ ಕಾರ್ಯದ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಭಾಗವಹಿಸಿ, ನಂತರ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜುಲೈ 29 ಶುಕ್ರವಾರದಂದು ಬೆಳಿಗ್ಗೆ 11 ಗಂಟೆಗೆ ಚಿತ್ರದುರ್ಗ ನಗರದ ಶ್ರೀ.ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ರಾಸಾಯನಿಕ ವಿಪತ್ತು ನಿರ್ವಹಣೆ ಅಣಕು ಪ್ರದರ್ಶನ ಜರುಗಲಿದೆ. ಈ ಪ್ರದರ್ಶನ ಸಂಪೂರ್ಣ ನಿರ್ವಹಣೆಯನ್ನು ಗೇಲ್ ಇಂಡಿಯಾ ಪ್ರೆöÊ.ಲಿ ಅಧಿಕಾರಿಗಳು ನೋಡಿಕೊಳ್ಳಬೇಕು. ಕಾರ್ಯಕ್ರಮದ ಸ್ಥಳದಲ್ಲಿ ಬೇಕಾದ ಅಗತ್ಯ ಸೌಲಭ್ಯಗಳನ್ನು ನಗರ ಸಭೆಯಿಂದ ನೀಡಬೇಕು. ಅಗತ್ಯ ಬಂದೋಬಸ್ತ್ ವ್ಯವಸ್ಥೆಯನ್ನು ಪೊಲೀಸ್ ಇಲಾಖೆ ನೋಡಿಕೊಳ್ಳಬೇಕು. ಸ್ಥಳದಲ್ಲಿ ಸುಸಜ್ಜಿತ ಅಂಬ್ಯುಲೆನ್ಸ್, ಅಗ್ನಿ ನಂದಕ ವಾಹಗಳನ್ನು ಸನ್ನದ್ಧವಾಗಿರಿಸಬೇಕು. ರಾಸಾಯನಿಕ ವಿಪತ್ತು ನಿರ್ವಹಣೆ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಕುರಿತು ಸಾರ್ವಜನಿಕರಿಗೆ ಸೂಕ್ತ ತಿಳುವಳಿ ನೀಡಬೇಕು. ಜಿ.ಪಂ.ಕಾರ್ಯನಿರ್ವಹಣಾ ಅಧಿಕಾರಿ, ಪೊಲೀಸ್ ಅಧೀಕ್ಷಕರು, ಅಪರ ಜಿಲ್ಲಾಧಿಕಾರಿ, ಪರಿಸರ ಅಧಿಕಾರಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳನ್ನು ವೀಕ್ಷಕರಾಗಿ ನೇಮಿಸಲಾಗಿದೆ. ಇವರು ಕಾರ್ಯಕ್ರಮ ನಿರ್ವಹಣೆಯನ್ನು ಪರಿಶೀಲಿಸಿ ವಿಪತ್ತು ನಿರ್ವಹಣ ಪ್ರಾಧಿಕಾರಕ್ಕೆ ವರದಿ ನೀಡಬೇಕು ಎಂದರು.
ವಿಡಿಯೋ ಕಾನ್ಫರೆನಸ್‌ನಲ್ಲಿ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಡಾ.ಮನೋಜ್ ರಾಜನ್, ರಾಜ್ಯ ವಿಪತ್ತು ನಿರ್ವಹಣಾ ಯೋಜನೆ ಮತ್ತು ರಾಸಾಯನಿಕ ವಿಪತ್ತು ನಿರ್ವಹಣೆಗೆ ಕೈಗೊಂಡಿರುವ ಮುಂಜಾಗೃತ ಹಾಗೂ ಸಿದ್ಧತೆಗಳ ಕುರಿತು ಪ್ರಾತಕ್ಷö್ಯತೆ ನೀಡಿದರು. ರಾಜ್ಯದಲ್ಲಿ ಒಟ್ಟು 17251 ನೊಂದಾಯಿತ ಫ್ಯಾಕ್ಟರಿಗಳಿವೆ. ಇದರಲ್ಲಿ 82 ಫ್ಯಾಕ್ಟರಿಗಳನ್ನು ಪ್ರಮುಖ ಅಪಾಯಕಾರಿ ಅವಘಡ ಸಂಭವನೀಯತೆ ಫ್ಯಾಕ್ಟರಿಗಳೆಂದು ಗುರುತಿಸಲಾಗಿದೆ. 1522 ಫ್ಯಾಕ್ಟರಿಗಳು ಅಪಾಯಕಾರಿ ಎಂದು ಗುರುತಿಸಲಾಗಿದೆ. 22 ಜಿಲ್ಲೆಗಳಲ್ಲಿ ಈ ಫ್ಯಾಕ್ಟರಿಗಳಿವೆ. ಒಟ್ಟು 47 ಅಧಿಕಾರಿಗಳನ್ನು ಇವುಗಳ ನಿರ್ವಹಣೆಗಾಗಿ ನೇಮಿಸಲಾಗಿದೆ. ಬೆಂಗಳೂರು, ದಕ್ಷಿಣ ಕನ್ನಡ, ಬೆಳಗಾವಿ, ಬಳ್ಳಾರಿ, ಧಾರವಾಡ, ಮೈಸೂರು ಜಿಲ್ಲೆಗಳು ಪ್ರಮುಖ ಅಪಾಯಕಾರಿ ಅವಘಡ ಸಂಭವನೀಯತೆಯ ಹಬ್‌ಗಳಾಗಿವೆ.
ಪೆಟ್ರೋಲಿಯಂ ಉತ್ಪನ್ನಗಳು, ಎಲ್.ಪಿ.ಜಿ, ಕಚ್ಚಾ ತೈಲ, ಕರ‍್ಸ್ ಗ್ಯಾಸ್, ಕ್ಲೋರಿನ್, ಅಮೋನಿಯಾ, ಲಿಕ್ವಿಡ್ ಆಕ್ಸಿಜನ್, ಲಿಕ್ವಿಡ್ ನೈಟ್ರೋಜನ್, ಎಥನಾಲ್ ಆಕ್ಸೆöÊಡ್, ಬೆಂಜೈನೆ, ಪ್ರೋಪಲೈನ್ ಸೇರಿದಂತೆ ಕೈಗಾರಿಕೆಗಳಲ್ಲಿ ಬಳಸುವ ಪ್ರಮುಖ ರಾಸಾಯನಿಕ ವಸ್ತುಗಳು ರಾಸಾಯನಿಕ ವಿಪತ್ತಿಗೆ ಕಾರಣವಾಗಲಿವೆ. ಹಲವು ಜಿಲ್ಲೆಗಳಲ್ಲಿ ಸಾವಿರಾರು ಮೆಟ್ರಿಕ್ ಲೀಟರ್‌ಗಳಲ್ಲಿ ಈ ರಾಸಾಯನಿಕಗಳ ಸಂಗ್ರಹವಿದೆ. ಈ ಸ್ಥಳಗಳ ರಕ್ಷಣೆ ಹಾಗೂ ಸುರಕ್ಷತೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಿದೆ. ರಾಸಾಯಕ ಅವಘಡ ಸಾರ್ವಜನಿಕ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು.
ರಾಸಾಯನಿಕ ಅವಘಡ ಸಂಭವಿಸಿದ ಸಂದರ್ಭದಲ್ಲಿ ಇದರ ನಿರ್ವಹಣೆಗೆ ಕಂದಾಯ, ಕೃಷಿ, ಪೊಲೀಸ್, ಅಗ್ನಿಶಾಮಕ, ಆರೋಗ್ಯ, ಲೋಕೋಪಯೋಗಿ, ಫ್ಯಾಕ್ಟರಿಸ್ ಮತ್ತು ಬಾಯ್ರ‍್ಸ್, ಆರ್.ಟಿ.ಓ, ಪರಿಸರ, ಆಹಾರ ಮತ್ತು ನಾಗರಿಕ ಸರಬರಾಜು, ವಿದ್ಯುತ್, ತೋಟಗಾರಿಕೆ, ಕುಡಿಯುವ ನೀರು ಸರಬರಾಜು, ಪಶು ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗಳನ್ನು ಒಳಗೊಂಡ ಜಿಲ್ಲಾ ಮಟ್ಟದ ವಿಪತ್ತು ನಿರ್ವಹಣ ಪ್ರಾಧಿಕಾರವನ್ನು ರಚಿಸಲಾಗಿದೆ.
ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ, ಉಪವಿಭಾಗಧಿಕಾರಿ ಆರ್.ಚಂದ್ರಯ್ಯ, ಜಿ.ಪಂ.ಉಪಕಾರ್ಯದರ್ಶಿ ಡಾ.ರಂಗಸ್ವಾಮಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಂಗನಾಥ, ತಹಶೀಲ್ದಾರ್ ಸತ್ಯನಾರಾಯಣ್, ಪರಿಸರ ಅಧಿಕಾರಿ ಪ್ರಕಾಶ್, ಗೇಲ್ ಇಂಡಿಯಾ ಲಿಮಿಟೆಡ್‌ನ ಹಿರಿಯ ವ್ಯವಸ್ಥಾಪಕ ಎನ್.ಎನ್.ತೋಪಣ್ಣನವರ, ಗೃಹ ರಕ್ಷಕ ಧಳದ ಜಿಲ್ಲಾ ಕಮಾಂಡೆಡ್ ಪಿ.ಕೆ.ಸಂಧ್ಯಾ ಇತರೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.