ನಾಳೆ ರಾಷ್ಟ್ರೀಯ ಭಾವೈಕ್ಯತಾ ಕಾರ್ಯಾಗಾರ

ಚಿತ್ರದುರ್ಗ.ನ.೮: ರಂಗಸೌರಭ ಕಲಾ ಸಂಘ ಮತ್ತು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಬಿ.ದುರ್ಗ ಗ್ರಾಮದ ಕಾಶೀಮಹಾಲಿಂಗಸ್ವಾಮಿ ಪ್ರೌಢಶಾಲೆ ಆವರಣದಲ್ಲಿ ನವಂಬರ್ 09 ಮತ್ತು 10 ವರೆಗೆ ಎರಡು ದಿನಗಳ ಕಾಲ 67ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ರಾಷ್ಟಿçÃಯ ಭಾವೈಕ್ಯತಾ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ.ನವಂಬರ್ 09 ರಂದು ಮಧ್ಯಾಹ್ನ ಎರಡು ಗಂಟೆಗೆ ರಾಷ್ಟಿçÃಯ ಭಾವೈಕ್ಯತಾ ಕಾರ್ಯಾಗಾರವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ್ ಉದ್ಘಾಟಿಸುವರು. ಕಾಶೀಮಹಾಲಿಂಗಸ್ವಾಮಿ ಪ್ರೌಢಶಾಲೆ ಮುಖ್ಯಶಿಕ್ಷಕಿ ಎಸ್.ವಿ.ಮಂಜುಳ ಅಧ್ಯಕ್ಷತೆ ವಹಿಸುವರು. ಹೋಬಳಿ ಕಸಾಪ ಅಧ್ಯಕ್ಷ ಬಿ.ಎಂ.ನಾಗರಾಜ್, ಹಿರಿಯ ರಂಗಭೂಮಿ ಕಲಾವಿದ ಎಸ್.ಡಿ.ರಾಮಸ್ವಾಮಿ, ಬಾದರದಿನ್ನಿ ಆರ್ಟ್ಸ್ ಅಕಾಡೆಮಿ ಕಾರ್ಯದರ್ಶಿ ಪ್ರಕಾಶ್ ಬಾದರದಿನ್ನಿ, ರಂಗನಿರ್ದೇಶಕ ಕೆಪಿಎಂ.ಗಣೇಶಯ್ಯ ಮುಖ್ಯಅತಿಥಿಗಳಾಗಿ ಉಪಸ್ಥಿತರಿರುವರು.