ನಾಳೆ ರಾಯಚೂರು ಜಿಲ್ಲೆಯಾದ್ಯಂತ ಶಾಲೆಗಳಿಗೆ ರಜೆ

ರಾಯಚೂರು ಜೂ 26. ಜಿಲ್ಲೆಯಾದ್ಯಂತ ಜಿಟಿ ಜಿಟಿ ಮಳೆ ಹಿನ್ನೆಲೆ ನಾಳೆ ಗುರುವಾರ ಜುಲೈ 27 ರಂದು ಜಿಲ್ಲೆಯಾದ್ಯಂತ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಕಳೆದ ಒಂದು ವಾರದಿಂದ ನಿರಂತರ ಜಿಟಿ ಜಿಟಿ ಮಳೆ ಹಿನ್ನೆಲೆ ರಜೆ ಘೋಷಣೆ ಮಾಡಲಾಗಿದೆ.

ರಾಯಚೂರು ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ್ ರಿಂದ ಆದೇಶ ಹೊರಡಿಸಲಾಗಿದ್ದು, ಹವಾಮಾನ ವರದಿ ಆಧರಿಸಿ ರಜೆ ನೀಡಲಾಗಿದೆ. ನಾಳೆ ಹವಾಮಾನ ಇಲಾಖೆ ವರದಿ ಆಧರಿಸಿ ರಜೆ ಮುಂದುವರಿಕೆ ನಿರ್ಧಾರ ಜಿಲ್ಲಾಧಿಕಾರಿ ಮಾಡಿದ್ದಾರೆ. ಸದ್ಯ ಒಂದು ದಿನಕ್ಕೆ ಮಾತ್ರ ರಜೆ ಘೋಷಿಸಿರುವ ಜಿಲ್ಲಾಡಳಿತ, ಗ್ರಾಮೀಣ ಭಾಗದಿಂದ ಶಾಲೆಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆ ಹಿನ್ನೆಲೆ ಆದೇಶ ಹೊರಡಿಸಲಾಗಿದೆ.