ನಾಳೆ ರಾಯಚೂರು‌ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ


ರಾಯಚೂರು ನ 1: ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ರ ಚುನಾವಣೆಯಲ್ಲಿ ಕಾಂಗ್ರೆಸ್ ಹೈ ಕಮಾಂಡ್ ತೀರ್ಮಾನಕ್ಕೆ ಬದ್ದ ಎಂದು ಪಕ್ಷ ಎಲ್ಲಾ ಸದಸ್ಯರು ನಿರ್ಧರಿಸಿದ್ದಾರೆ.
ಇಂದು ಕೊಪ್ಪಳ ಜಿಲ್ಲೆಯ ಮುನಿರಾಬಾದ ಡ್ಯಾಮ್ ಬಳಿ ಸಭೆ ಸೇರಿ ನಾಳಿನ ಚುನಾವಣೆ ಬಗ್ಗೆ ಚರ್ಚಿಸಿದರು. ಕಾಂಗ್ರೆಸ್ ಯುವ ಮುಖಂಡ ರವಿ ಬೋಸರಾಜು ಅವರ ನೇತೃತ್ವದಲ್ಲಿ ಸಭೆ ನಡಯಿತು. 33 ಸದಸ್ಯರು ಮತ್ತು ಶಾಸಕ ಹಾಗೂ ಸಂಸದರು ಸೇರಿ ಒಟ್ಟು 35 ಸಂಖ್ಯಾ ಬಲದ ರಾಯಚೂರು ನಗರಸಭೆಯಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯಲು 18 ಸದಸ್ಯ ಬಲ ಅಗತ್ಯ. ಕಾಂಗ್ರೆಸ್ ಪಕ್ಷದ 11 ಸದಸ್ಯರು, ಪಕ್ಷೇತರರು 7 ಹಾಗೂ ಜಾ. ದಳ 1 ಸದಸ್ಯ ಸೇರಿ 19 ಸದಸ್ಯರು ಇಂದು ಸಭೆ ಸೇರಿ ಒಗ್ಗಟ್ಟು ಕಾಯ್ದುಕೊಳ್ಳಲು ತೀರ್ಮಾನಿಸಿದರು. ಅಧ್ಯಕ್ಷ- ಉಪಾಧ್ಯಕ್ಷ ಅಭ್ಯರ್ಥಿ ಅಯ್ಕೆಗೆ ಸಂಬಂಧಿಸಿ ವೀಕ್ಷಕರಾದ ಆರ್.ಬಿ. ತಿಮ್ಮಾಪೂರೆ ಅವರ ಹೈ ಕಮಾಂಡರ್ ನಿರ್ಧಾರ ಕ್ಕೆ ಬದ್ಧ ಎಂದು ಸಭೆಯಲ್ಲಿ ಒಕ್ಕೊರಳ ನಿರ್ಧಾರ ಕೈಗೊಳ್ಳಲಾಯಿತು.
ಆಡಳಿತಾರೂಢ ಬಿಜೆಪಿ ಪಕ್ಷ ಮತ್ತು ಪಕ್ಷೇತರ ಒಬ್ಬರು ಸೇರಿ‌ ಒಟ್ಟು 15 ಸದಸ್ಯರಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಅಧ್ಯಕ್ಷ ಸ್ಥಾನ ಕ್ಕಾಗಿ ಭಿನ್ನಾಭಿಪ್ರಾಯ ವ್ಯಕ್ತವಾದರೆ ಇದರ ಲಾಭ‌ಪಡೆಯಲು ಕಾದು‌ನೋಡುವ ತಂತ್ರ ಅನುಸರಿಸುತ್ತಿದ್ದಾರೆ. ಶಾಸಕ‌ ಡಾ.ಶಿವರಾಜ ಪಾಟೀಲ್ ಅವರ ನೇತೃತ್ವದಲ್ಲಿ ಎಲ್ಲ ಸದಸ್ಯರು ಹೈದ್ರಾಬಾದನಲ್ಲಿದ್ದಾರೆ. ನಾಳಿನ ಚುನಾವಣೆ ಜನರಲ್ಲಿ‌ಭಾರಿ ಕುತೂಹಲ‌‌‌ ಮೂಡಿಸಿದೆ. ಅಧಿಕಾರ ಚುಕ್ಕಾಣಿ ಹಿಡಿಯುವ ಸಂಖ್ಯಾ ಬಲ‌ಹೊಂದಿದ ಕಾಂಗ್ರೆಸ್‌ ಗೆಲ್ಲುವುದೋ, ತಂತ್ರಗಾರಿಕೆಯಿಂದ ಬಿಜೆಪಿ ನಗರಸಭೆ ಅಧಿಕಾರ ಕೈ ವಶ ಮಾಡಿ‌ಕೊಳ್ಳುವುದೋ ಕಾದು ನೋಡಬೇಕಾಗಿದೆ.