ನಾಳೆ ರಾತ್ರಿ ಮದ್ಯ ಸೇವಿಸಿ ಚಲಾಯಿಸುವ ವಾಹನಗಳು ಜಪ್ತಿ

ಬೆಂಗಳೂರು,ಡಿ.30- ಹೊಸ ವರ್ಷಾಚರಣೆಯ ಹಿನ್ನಲೆಯಲ್ಲಿ ಮದ್ಯ ಸೇವಿಸಿ ಚಲಾಯಿಸುವ ವಾಹನಗಳನ್ನು ಮುಲಾಜಿಲ್ಲದೇ ವಶಪಡಿಸಿಕೊಂಡು ಚಾಲನ ಪರವಾನಗಿ (ಡಿಎಲ್) ರದ್ದು ಮಾಡಲಾಗುವುದು ಎಂದು ‌ಜಂಟಿ‌ ಪೊಲೀಸ್ ಆಯುಕ್ತ (ಸಂಚಾರ) ರವಿಕಾಂತೇಗೌಡ ಅವರು ಎಚ್ಚರಿಕೆ ನೀಡಿದ್ದಾರೆ.
ಹೊಸ ವರ್ಷಾಚರಣೆಯ ಸಂಭ್ರಮದ ಹೆಸರಿನಲ್ಲಿ ಮದ್ಯ ಸೇವಿಸಿ ವಾಹನ ಚಲಾಯಿಸಲು ಯಾವುದೇ ಕಾರಣಕ್ಕೂ‌ ಅವಕಾಶವಿಲ್ಲ‌. ಮದ್ಯ ಸೇವಿಸಿ
ವಾಹನ ಚಲಾಯಿಸುವವರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಲಾಗುವುದು ಎಂದರು.


ನಗರದಲ್ಲಿನ 691 ಪಾಯಿಂಟ್ ಗಳಲ್ಲಿ 191 ಕಡೆ ನಾಕಾಬಂಧಿ ಮಾಡಲಾಗಿದೆ. ನೈಸ್ ರಸ್ತೆಯಲ್ಲಿ ಕಚ್ಚೆಟ್ಟರ ವಹಿಸಲಾಗಿದೆ. ನೈಸ್ ರಸ್ತೆಯಲ್ಲಿ ವ್ಹೀಲಿಂಗ್ ಮಾಡಿದರೆ ಅವರನ್ನು ಬಂಧಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಕೊರೊನಾ ಸೋಂಕಿನ ಮುಂಜಾಗ್ರತಾ ಕ್ರಮಗಳೊಂದಿಗೆ ಸಾರ್ವಜನಿಕ ಸ್ಥಳಗಳಲ್ಲಿ ಹೊಸ ವರ್ಷದ ಸಂಭ್ರಮಾಚರಣೆಯನ್ನು ನಿಷೇಧಿಸಲಾಗಿದೆ ಅದನ್ನು ಉಲ್ಲಂಘನೆ ಮಾಡಿದರೆ ಕಠಿಣ ಕ್ರಮ‌ ಕೈಗೊಳ್ಳಲಾಗುವುದು ಎಂದರು.
ಹೊಸ ವರ್ಷದ ಹಿನ್ನಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಭದ್ರತೆಯಾಗಿ 2,500 ಸಂಚಾರ ಪೊಲೀಸರನ್ನು ನಗರದಾಧ್ಯಂತ ನಿಯೋಜಿಸಲಾಗಿದೆ.
ನಗರದ ಎಲ್ಲಾ ಫ್ಲೈಓವರ್ ರಸ್ತೆಗಳಲ್ಲಿ ‌ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ ಎಂದರು.
ನಗರ ಕೆಲ ರಸ್ತೆಗಳಲ್ಲಿ ವಾಹನ ಸಂಚಾರ ಹಾಗೂ ನಿಲುಗಡೆ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಹೇಳಿದರು.