ಹಿರಿಯೂರು ಏ 2- ಹಿರಿಯೂರು ತಾಲೂಕಿನ ಸುಪ್ರಸಿದ್ಧ ಜಗದೊಡೆಯ ನಂದಿಹಳ್ಳಿಯ ಶ್ರೀ ರಂಗನಾಥ ಸ್ವಾಮಿ ದೇವರ ಬ್ರಹ್ಮರಥೋತ್ಸವವು ಇದೇ ಏಪ್ರಿಲ್ 3ರ ಸೋಮವಾರ ರಾತ್ರಿ ಭಕ್ತಿ ಭಾವದಿಂದ ನಡೆಯಲಿದೆ. ಏಪ್ರಿಲ್ 5ರ ಬುಧವಾರ ಗಂಗಾ ಪೂಜೆ, ಮೆರವಣಿಗೆ ಮತ್ತು ಅನ್ನ ಸಂತರ್ಪಣೆ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ. ಸ್ವಾಮಿಯ ಜಾತ್ರಾ ಪೂಜಾ ಕಾರ್ಯಕ್ರಮಗಳಿಗೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವ್ಯವಸ್ಥಾಪಕರು ಮನವಿ ಮಾಡಿದ್ದಾರೆ.