ನಾಳೆ ಯೋಗಿನಾರೇಯಣ 188ನೇ ಆರಾಧನೆ.ಶೋಭಾಯಾತ್ರೆ, ಪ್ರತಿಭಾ ಪುರಸ್ಕಾರ


ಸಂಜೆವಾಣಿ ವಾರ್ತೆ
ಹೊಸಪೇಟೆ, ಜೂ.24: ಬಲಿಜ ಸಮಾಜದ ಕುಲಗುರು ಶ್ರೀ ಯೋಗಿನಾರೇಯಣ ಯತೀಂದ್ರರ 188ನೇ ಆರಾಧನೆ ನಾಳೆ ಭಾನುವಾರ ನಡೆಯಲಿದೆ ಎಂದು ತಾಲೂಕು ಅಧ್ಯಕ್ಷ ಟಿ.ರವಿಕುಮಾರ ತಿಳಿಸಿದರು.
ಹೊಸಪೇಟೆಯ ಪತ್ರಿಕಾಭವನದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಮಾಜದ ಕುಲಗುರು ಶ್ರೀ ಯೋಗಿನಾರಾಯಣ ಆರಾಧನೆಯ ಪ್ರಯುಕ್ತ ಶೋಭಾಯಾತ್ರೆ ಹಮ್ಮಿಕೊಂಡಿದೆ ಗುರುಗಳ ಭಾವಚಿತ್ರದ ಮೆರವಣಿಗೆಯನ್ನು ನಗರದ ಸಿದ್ಧಿವಿನಾಯಕ ದೇವಸ್ಥಾನದಿಂದ ಬಳ್ಳಾರಿ ರಸ್ತೆಯ ಸಮುದಾಯ ಭವನದ ವರೆಗೂ ನಡೆಯಲಿದ್ದು
ನಂತರ ವಾರ್ಷಿಕ ಮಹಾಜನ ಸಭೆ, ಎಸ್ಎಸ್ಎಲ್ ಸಿ ಮತ್ತು ದ್ವೀತಿಯ ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಮಾಜದ ಮುಖಂಡರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮವನ್ನು ಶಾಸಕ ಹೆಚ್.ಆರ್.ಗವಿಯಪ್ಪ ಉದ್ಘಾಟಿಸಲಿದ್ದು, ತಾಲೂಕು ಅಧ್ಯಕ್ಷ ಟಿ.ರವಿಕುಮಾರ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಮಾಜಿ ಸಚಿವ ಆನಂದಸಿಂಗ್ ತಾಲೂಕು ವೈದ್ಯಾಧಿಕಾರಿ ಡಾ.ಹರಿಪ್ರಸಾದ್, ಜಿಲ್ಲಾಧ್ಯಕ್ಷ ಕಾಳಿದಾಸ್ ಜೆ.ಎನ್, ನಗರಸಭಾ ಸದಸ್ಯೆ ಶಿಲ್ಪಾ ದ್ವಾರಕೀಶ ಸಮಾಜದ ಮಹಾ ಪೋಷಕ ದೊಡ್ಡ ಹನುಮಂತಪ್ಪ ಪಾಲ್ಗೊಳ್ಳುತ್ತಾರೆ ಎಂದರು.
ಸುದ್ಧಿಗೋಷ್ಠಿಯಲ್ಲಿ ಸಮಾಜದ ಮುಖಂಡರಾದ ಬೋಜರಾಜ್, ಪಾಂಡುರಂಗ, ಎನ್.ಟಿ.ರಾಜು, ಕೆ.ಶಿವಾನಂದ, ಕೆ.ವೀರಣ್ಣ, ಸುನೀಲ್ ನಾಯ್ಡು, ಹರೀಶ್, ಭಾರತೀ ಲೋಕೇಶ್, ಕವಿತಾ ಪ್ರಸನ್ನ, ಮಮತಾ ನಾಗರಾಜ್ ಹಾಗೂ ಜಿಲ್ಲಾಧ್ಯಕ್ಷ ಜೆ.ಎನ್.ಕಾಳಿದಾಸ ಪಾಲ್ಗೊಂಡಿದ್ದರು.