ನಾಳೆ ಯಡ್ರಾಮಿ ಪಟ್ಟಣದಲ್ಲಿ ಅದ್ದೂರಿ ಮರಗಮ್ಮ ದೇವಿಯ ಜಾತ್ರೆ

ಯಡ್ರಾಮಿ:ಮೇ.30:ಪಟ್ಟಣದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೂಡ ನಾಳೆ ಶ್ರೀ ಮರಗಮ್ಮ ದೇವಿಯ ಜಾತ್ರಾ ಮಹೋತ್ಸವ ಕಾರ್ಯಕ್ರಮ ಶುಕ್ರವಾರ ಅದ್ದೂರಿಯಾಗಿ ಜರಗುವುದು ಎಂದು ಜಾತ್ರಾ ಮಹೋತ್ಸವದ ಅಧ್ಯಕ್ಷರು ಚನ್ನಪ್ಪ ಹೊಸಮನಿ ತಿಳಿಸಿದ್ದಾರೆ.

ಇಂದು ಸಾಯಂಕಾಲ 10 ಘಂಟೆಗೆ ಬಸವೇಶ್ವರ ಬಯಲಾಟ ಸಂಘ ರಬಿನಾಳ ಬಾಗೇವಾಡಿ ತಾಲೂಕಿನ ಅವರಿಂದ ಶ್ರೀ ಯಲ್ಲಮ್ಮ ದೇವಿಯ ಬಯಲು ನಾಟಕ ಆಡುವರು.

ಶುಕ್ರವಾರ ಬೆಳಗ್ಗೆ 11 ಘಂಟೆಗೆ ದೇವಿಯೂ ಡೊಳ್ಳು ವಾದ್ಯ ಮತ್ತು ಕುಣಿತಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳ ಮೂಲಕ ಗಂಗಾಸ್ಥಾನಕ್ಕೆ ತೆರಳುವಳು.

ಸಾಯಂಕಾಲ 4 ಘಂಟೆಗೆ ಮೂಲ ಸ್ಥಾನವನ್ನು ತಲುಪುವಳು.ನಂತರ ಭಕ್ತಾದಿಗಳು ದೇವಿಗೆ ನೈವೇದ್ಯ ಸಲ್ಲಿಸುವರು.ಸಾಯಂಕಾಲ 4 ಘಂಟೆಗೆ ಭಾರ ಎತ್ತುವ ಸ್ಪಧ್ರೆ ಮತ್ತು ಶನಿವಾರ ಸಾಯಂಕಾಲ 4 ಘಂಟೆಗೆ ದೇವಿಯ ಗರ್ಭಗುಡಿ ಪ್ರವೇಶಿಸುವಳು ಎಂದು ಕಮೀಟಿಯ ಸದಸ್ಯರು ತಿಳಿಸಿದ್ದಾರೆ.